ಧಾರ್ಮಿಕ ಸ್ವಾತಂತ್ರ್ಯಹರಣ ಮಾಡುವ `ಹಲಾಲ’ ಪ್ರಮಾಣಪತ್ರವನ್ನು ನಿಷೇಧಿಸಿ !

ಓಡಿಶಾ ಸುರಕ್ಷಾ ಸೇನೆಯ ಅಧ್ಯಕ್ಷ ಅಭಿಷೇಕ ಜೋಶಿಯವರ ಪ್ರಧಾನ ಮಂತ್ರಿಗಳಿಗೆ ಪತ್ರ!

ಟಕ (ಓಡಿಶಾ) – ಭಾರತದ ಅರ್ಥವ್ಯವಸ್ಥೆಗೆ ಸಮಾಂತರವಾಗಿರುವ ಮತ್ತು ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದ ಹರಣ ಮಾಡುವ ಹಲಾಲ ಅರ್ಥವ್ಯವಸ್ಥೆಯ ಮೇಲೆ ನಿಷೇಧ ಹೇರುವುದು ಆವಶ್ಯಕವಾಗಿದೆ. ಧರ್ಮದ ಆಧಾರದ ಮೇಲೆ ಹಲಾಲ ಪ್ರಮಾಣಪತ್ರ ಜಾರಿಗೊಳಿಸುವ ಎಲ್ಲ ಸಂಸ್ಥೆ ಮತ್ತು ತನ್ಮೂಲಕ ಕ್ರೋಢೀಕರಿಸುವ ನಿಧಿಯ ಉಪಯೋಗವನ್ನು ರಾಷ್ಟ್ರಕ್ಕೆ ಮಾರಕವಾಗಿರುವ ಕೃತ್ಯಗಳಿಗೆ ಉಪಯೋಗಿಸಲಾಗುತ್ತದೆ. ಇದರ ತನಿಖೆ ಜರುಗಬೇಕು ಎಂದು `ಓಡಿಶಾ ಸುರಕ್ಷಾ ಸೇನೆ’ಯ ಅಧ್ಯಕ್ಷರು ಮತ್ತು `ಕ್ರಾಂತಿ ಓಡಿಶಾ’ ದಿನಪತ್ರಿಕೆಯ ಮುಖ್ಯ ಸಂಪಾದಕ ಶ್ರೀ. ಅಭಿಷೇಕ ಜೋಶಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ಮಂಡಿಸಲಾಗಿರುವ ಮಹತ್ವಪೂರ್ಣ ಅಂಶಗಳು !

1. ಭಾರತೀಯ ಕಾನೂನು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ, ಶರಿಯತ ಕಾನೂನಿಗನುಗುಣವಾಗಿ ಅಲ್ಲ. `ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ’ ಇರುವಾಗ ಹಲಾಲ ಪ್ರಮಾಣಪತ್ರದ ಆವಶ್ಯಕತೆ ಏನಿದೆ?

2.`ಭಾರತೀಯ ದಂಡಸಂಹಿತೆಯ ಕಲಂ 153-ಬಿ’ ಅನುಸಾರ ನಾಗರಿಕರಿಗೆ ಅವರ ಅಮೂಲ್ಯ ಅಧಿಕಾರಗಳಿಂದ ವಂಚಿತಗೊಳಿಸುವುದು ಅಪರಾಧವಾಗಿದೆ. ಹಲಾಲ ಅರ್ಥವ್ಯವಸ್ಥೆ ಮುಸಲ್ಮಾನರಿಗೆ ಕೇವಲ ಮುಸಲ್ಮಾನರೊಂದಿಗೆ ವ್ಯಾಪಾರ ಮಾಡಲು ಪ್ರೋತ್ಸಾಹಿಸುತ್ತಿದೆ.

3. ಹಲಾಲ ಪ್ರಮಾಣಪತ್ರ ಪಡೆದುಕೊಳ್ಳುವಂತೆ ಒತ್ತಡ ಹೇರುತ್ತಿರುವುದರಿಂದ 63 ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ಈ ಮುಸಲ್ಮಾನ ವ್ಯಾಪಾರಿಗಳ ಕೈವಶವಾಗಿದೆ. ಅದರ ನೇರ ಹೊಡೆತ ಆಯಾ-ಕ್ಷೇತ್ರಗಳ ಪರಂಪರಾಗತ ಹಿಂದೂ ವ್ಯಾಪಾರಿಗಳಿಗೆ ಆಗುತ್ತಿದೆ.

4. ಭಾರತದಲ್ಲಿ ಕೇವಲ ಶೇ. 15 ರಷ್ಟು ಮುಸಲ್ಮಾನರಿದ್ದು, ಶೇ. 75 ರಷ್ಟು ನಾಗರಿಕರಿಗೆ ಹಲಾಲ ಮಾಂಸವನ್ನು ತಿನ್ನುವಂತೆ ಮಾಡುವುದು ಅನ್ಯಾಯವಾಗಿದೆ. ಇದರಿಂದ ಹಿಂದೂ ಮತ್ತು ಸಿಖ್ ಇವರ ಧಾರ್ಮಿಕ ಭಾವನೆ ಘಾಸಿಗೊಳಿಸಲಾಗುತ್ತಿದೆ.

5. ಹಲಾಲ ಪ್ರಮಾಣಪತ್ರ ನೀಡುವ ಸಂಘಟನೆಯ ಬಳಿ ಜಮೆಯಾಗುವ ಹಣವನ್ನು ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಡೆಯುವ ಕಾನೂನು ಹೋರಾಟದಲ್ಲಿ ಭಯೋತ್ಪಾದಕರ ಪರವಾಗಿ ಉಪಯೋಗಿಸಲಾಗುತ್ತಿದೆ. ಇದರಿಂದ ಹಲಾಲ ಪ್ರಮಾಣಪತ್ರದಿಂದ ಸಿಕ್ಕ ನಿಧಿಯನ್ನು ರಾಷ್ಟ್ರಕ್ಕೆ ಮಾರಕವಾಗಿರುವ ಕೃತ್ಯಗಳಿಗೆ ಉಪಯೋಗಿಸಲಾಗುತ್ತಿದೆ.

`ಹಲಾಲ’ ಪ್ರಮಾಣ ಪತ್ರವೆಂದರೆ ಏನು?

ಇಸ್ಲಾಮಾನುಸಾರ `ಹಲಾಲ’ ಎಂದರೆ ‘ಅಧಿಕೃತ’ವಾಗಿದೆ. ಮೊದಲು `ಹಲಾಲ’ ಇದು ಕೇವಲ ಮಾಂಸಾಹಾರಕ್ಕೆ ಸೀಮಿತವಾಗಿರುತ್ತಿತ್ತು; ಆದರೆ ಈಗ ಮತಾಂಧರಿಗೆ ಅವರ ಸ್ವತಂತ್ರ್ಯ ಅರ್ಥವ್ಯವಸ್ಥೆ ನಿಲ್ಲಿಸುವ ಗುರಿ ಇರುವುದರಿಂದ, ಅವರಿಗೆ ಪೂರೈಸಲಾಗುವ ಇರುವ ಗೃಹಸಂಸ್ಥೆ, ಔಷಧಿಗಳು, ಸೌಂದರ್ಯಪ್ರಸಾಧನಗಳು ಮುಂತಾದ ವಿವಿಧ ವಿಷಯಗಳಿಗೆ `ಹಲಾಲ’ ಪ್ರಮಾಣಪತ್ರ ಸ್ವಲ್ಪದರಲ್ಲಿ `ಅದು ಇಸ್ಲಾಮಾನುಸಾರ ಪ್ರಮಾಣೀಕೃತವಾಗಿದೆ’ ಎನ್ನುವ ಅರ್ಥವಿರುವ ಪ್ರಮಾಣಪತ್ರ ಅನಿವಾರ್ಯಾವಾಗುತ್ತಿದೆ. ಅದಕ್ಕಾಗಿ ಕೆಲವು ಮುಸ್ಲಿಂ ಸಂಘಟನೆಗಳು ಕಾರ್ಯನಿರತವಾಗಿದೆ. ಅವರು ಸಮ್ಮತಿಸಿರುವ ಪ್ರಮಾಣಪತ್ರಕ್ಕೆ `ಹಲಾಲ’ ಪ್ರಮಾಣಪತ್ರವೆಂದು ಹೇಳಲಾಗುತ್ತಿದೆ. ದೇಶಕ್ಕೆ ಸಮಾಂತರ ಇಂತಹ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ನಿರ್ಮಿಸಿ ಈಗಿರುವ ಅರ್ಥವ್ಯವಸ್ಥೆಯನ್ನು ನಾಶಪಡಿಸಲು ಮತಾಂಧರು `ಹಲಾಲ’ ಪ್ರಮಾಣಪತ್ರದ ಮಾಧ್ಯಮದಿಂದ ರಚಿಸಿರುವ ಇದೊಂದು ಸಂಚಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತಿದೆ? ಸಮಾಂತರ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಮತ್ತು ಧರ್ಮನಿರಪೇಕ್ಷತೆಯನ್ನು ಹರಣ ಮಾಡುವ ಹಲಾಲ ಪ್ರಮಾಣ ಪತ್ರದ ಮೇಲೆ ರಾಜಕಾರಣಿಗಳು ತಾವಾಗಿಯೇ ಏಕೆ ನಿಷೇಧ ಹೇರುವುದಿಲ್ಲ?