ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.

ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.

ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ.

ಎದ್ದು ಕಾಣಬೇಕಾಗಿರುವುದು ನೀವಲ್ಲ, ನಿಮ್ಮ ಕೆಲಸ – ನೂತನ ಸಚಿವರಿಗೆ ಮೋದಿ ಕಿವಿಮಾತು

ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.

ಉಯಿಘರ್ ಮುಸಲ್ಮಾನರ ವಿರುದ್ಧ ಚೀನಾದಿಂದಾಗುತ್ತಿರುವ ದಮನಕ್ಕೆ ಪಾಕಿಸ್ತಾನದ ಬೆಂಬಲ !

ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದ ಆಂಧ್ರಪ್ರದೇಶ ಸರಕಾರ!

ರಶಿಯಾ, ಜರ್ಮನಿ, ಫ್ರಾನ್ಸ್, ಜಪಾನ ಇತ್ಯಾದಿ ಅಭಿವೃದ್ಧಿಹೊಂದಿದ ದೇಶಗಳು ಹಾಗೂ ಚೀನಾ ಕೂಡ ಮಾತೃಭಾಷೆಯಿಂದಲೇ ಪ್ರಗತಿ ಸಾಧಿಸಿರುವಾಗ ಭಾರತಿಯರಿಗೆ ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರವೂ ಆಂಗ್ಲ ಭಾಷೆಯ ಗುಲಾಮರಾಗಬೇಕಾಗುತ್ತಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿರುವ ಕೇಂದ್ರ ಸರಕಾರ !

೨೦೧೯ ರ ಆಗಸ್ಟ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರವು ರದ್ದುಪಡಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಜೂನ್ ೨೪ ರಂದು ಕರೆಯಲಾಗಿದೆ. ಸಭೆಯು ದೆಹಲಿಯಲ್ಲಿ ನಡೆಯಲಿದೆ.

ನಿರ್ಬಂಧಗಳನ್ನು ಸಡಿಲಿಸಿದಾಗ ನಿಯಮಗಳನ್ನು ಉಲ್ಲಂಘನೆಯಾಗುತ್ತದೆ, ಇದರಿಂದ ಮೂರನೇ ಅಲೆಯು ಭಯಾನಕವಾಗಬಹುದು ! – ಕೇಂದ್ರ ಗೃಹಮಂತ್ರಾಲಯಕ್ಕೆ ಆತಂಕ

ಕೊರೊನಾದ ಎರಡನೇ ಅಲೆಯು ಕಡಿಮೆಯಾಗುತ್ತಿದ್ದಂತೆ, ಅನೇಕ ರಾಜ್ಯಗಳು ಕೇಂದ್ರ ಗೃಹ ಸಚಿವಾಲಯ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಪ್ರಾರಂಭಿಸಿವೆ. ಇದರಿಂದ ಮತ್ತೆ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಇದರಿಂದ ಕೇಂದ್ರ ಗೃಹ ಸಚಿವಾಲಯವು ಆತಂಕವನ್ನು ವ್ಯಕ್ತಪಡಿಸಿದೆ.