ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ರಾಜ್ಯದಲ್ಲಿನ ಭಾಜಪ ಸರಕಾರವು ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿನ ಪ್ರವೇಶದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಈಗ ಯಾತ್ರಿಕರು ಗರ್ಭಗುಡಿಗೆ ಹೋಗಿ ದರ್ಶನ ಪಡೆಯಬಹುದು. ಪ್ರತಿವರ್ಷ ಲಕ್ಷಾಂತರ ಭಾವಿಕರು ಕೇದಾರನಾಥ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುತ್ತಿರುತ್ತಾರೆ. ಇಲ್ಲಿ ಬೆಳಗ್ಗಿನ ಜಾವ ೫ ಗಂಟೆಯಿಂದ ರಾತ್ರಿ ೯ ಗಂಟೆಯ ವರೆಗೆ ದರ್ಶನ ನಡೆದಿರುತ್ತದೆ.
केदारनाथ के गर्भगृह में जाकर अब दर्शन कर सकेंगे श्रद्धालु, धामी सरकार ने हटाया प्रतिबंध: दर्शनार्थियों की संख्या ने पिछला रिकॉर्ड तोड़ा#KedarnathTemple #Kedarnathhttps://t.co/baLQsXGu1N
— ऑपइंडिया (@OpIndia_in) July 2, 2022
ಸಂಪಾದಕೀಯ ನಿಲುವುದೇವಸ್ಥಾನದ ಗರ್ಭಗುಡಿಯಲ್ಲಿನ ಪ್ರವೇಶದ ನಿರ್ಣಯವನ್ನು ಧರ್ಮಾಚಾರ್ಯರು ಹಾಗೂ ಅಲ್ಲಿನ ಪೂಜಾರಿಗಳು ತೆಗೆದುಕೊಳ್ಳುವುದು ಅಪೇಕ್ಷಿತವಾಗಿದೆ. ಗರ್ಭಗುಡಿಗೆ ವಿಭಿನ್ನವಾದ ಆಧ್ಯಾತ್ಮಿಕ ಮಹತ್ತ್ವವಿದೆ. ಅಲ್ಲಿ ಪಾವಿತ್ರ್ಯವನ್ನು ಕಾಯ್ದುಕೊಳ್ಳುವುದು ಆವಶ್ಯಕವಾಗಿರುತ್ತದೆ. ದೇಶದಲ್ಲಿನ ಎಲ್ಲ ದೊಡ್ಡ ದೇವಸ್ಥಾನಗಳಲ್ಲಿ ಇದನ್ನು ಪಾಲಿಸಲಾಗುತ್ತದೆ. ಆದುದರಿಂದ ಇಂತಹ ನಿರ್ಣಯವನ್ನು ರಾಜಕಾರಣಿಗಳು ತೆಗೆದುಕೊಳ್ಳುವುದು ಯೋಗ್ಯವಲ್ಲ ! |