ಪಾಕಿಸ್ತಾನದಲ್ಲಿ ಸಿಖ್ ಯುವತಿಯ ಅಪಹರಣ, ಮತಾಂತರ ಮತ್ತು ಮುಸಲ್ಮಾನನೊಂದಿಗೆ ವಿವಾಹ ಮಾಡಿಸಿದ ಘಟನೆ !

ಪಾಕಿಸ್ತಾನದಲ್ಲಿರುವ ಖೈಬರ ಪಖ್ತೂನ ಪ್ರಾಂತ್ಯದ ಬುನೇರ ಜಿಲ್ಲೆಯಲ್ಲಿ ೨೦ ಅಗಸ್ಟ ರಂದು ಗುರುಚರಣ ಸಿಂಹ ಈ ಸಿಖ್ ವ್ಯಕ್ತಿಯ ಪುತ್ರಿ ಟೀನಾ ಕೌರ ಇವಳನ್ನು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ತೋರಿಸಿ ಅಪಹರಣ ಮಾಡಲಾಯಿತು.

ಬ್ಯಾಂಕ್‌ನ ತಪಾಸಣೆಯಲ್ಲೇ ಪತ್ತೆಯಾದ ಎರಡು ಸಾವಿರ ರೂಪಾಯಿಯ ೧೩ ಸಾವಿರದ ೬೦೪ ನಕಲಿ ನೋಟುಗಳು !

ನವ ದೆಹಲಿ – ಕೇಂದ್ರ ಸರಕಾರವು ಸಂಸತ್ತಿನ ಇತ್ತೀಚಿನ ಅಧಿವೇಶನದಲ್ಲಿ ಮಂಡಿಸಿದ ಮಾಹಿತಿಯ ಪ್ರಕಾರ, ೨೦೨೧-೨೦೨೨ರ ಅವಧಿಯಲ್ಲಿ ಬ್ಯಾಂಕ್‌ಗಳ ಸ್ವಯಂ ಪರಿಶೀಲನೆಯ ಸಮಯದಲ್ಲಿ ೨ ಸಾವಿರ ರೂಪಾಯಿಗಳ ೧೩ ಸಾವಿರದ ೬೦೪ ನಕಲಿ ನೋಟುಗಳು ಪತ್ತೆಯಾಗಿವೆ. ಇದಕ್ಕೆ ಹೋಲಿಸಿದರೆ, ೨೦೧೮-೧೯ ಮತ್ತು ೨೦೨೦-೨೧ರ ಅವಧಿಯಲ್ಲಿ ಈ ಅನುಪಾತವು ಕಡಿಮೆಯಿತ್ತು ಎಂದು ಸರಕಾರ ಹೇಳಿಕೊಂಡಿದೆ. ಮತ್ತೊಂದೆಡೆ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ’ದ ವಿವರಗಳ ಪ್ರಕಾರ, ೨೦೧೮ ರಿಂದ ೨೦೨೦ ರ ಅವಧಿಯಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಪೊಲೀಸರು ನಡೆಸಿದ … Read more

ಪಂಜಾಬ್‌ನಲ್ಲಿ ೫ ತಿಂಗಳಲ್ಲಿ ೧೩೫ ಭ್ರಷ್ಟ ಅಧಿಕಾರಿಗಳ ಬಂಧನ

ಬಂಧಿತ ಭ್ರಷ್ಟ ಅಧಿಕಾರಿಗಳ ಸಂಖ್ಯೆ ಇಷ್ಟಿದ್ದರೆ, ಬಂಧನ ಆಗದಿರುವವರ ಸಂಖ್ಯೆ ಎಷ್ಟಿರಬಹುದು, ಯೋಚಿಸದಿರುವುದೇ ಉತ್ತಮ ! ಆಡಳಿತ ವ್ಯವಸ್ಥೆಯು ಭ್ರಷ್ಟಮಯವಾಗಿ ಮಾರ್ಪಟ್ಟಿರುವುದರ ಸೂಚನೆಯಾಗಿದೆ !

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅನೇಕರ ಸಾವು !

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ಹಿಂದೂ ನಿರಾಶ್ರಿತರ ಬಗ್ಗೆ ಸರಕಾರ ಮತ್ತು ಆಡಳಿತ ಇವರ ನಿರ್ಲಕ್ಷ ! – ಹಿಂದೂಗಳು ಖೇದ ವ್ಯಕ್ತಪಡಿಸಿದರು

ಭಾರತದಲ್ಲಿನ ಹಿಂದೂಗಳಿಗೆ ಸಹಾಯ ಮಾಡದಿರುವ ಸರಕಾರಿ ವ್ಯವಸ್ಥೆ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ಎಂದಾದರು ಸಹಾಯ ಮಾಡುವರೇ ?

ದೇಶದಲ್ಲಿ ಕ್ರೈಸ್ತರ ಮೇಲೆ ತಥಾ ಕಥಿತ ದಾಳಿ ತಡೆಯುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ

ದೇಶದಲ್ಲಿ ಕ್ರೈಸ್ತರ ಮೇಲೆ ದಾಳಿಗಳು ನಡೆಯುತ್ತಿವೆ, ಇದೇ ಸುಳ್ಳು ಮಾಹಿತಿ ! – ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿಪಾದನೆ

ಹಿಮಾಚಲ ಪ್ರದೇಶದಲ್ಲಿ ಈಗ ಬಲವಂತವಾಗಿ ಸಾಮೂಹಿಕ ಮತಾಂತರ ಮಾಡಿದರೆ ೧೦ ವರ್ಷದ ಜೈಲು ಶಿಕ್ಷೆ

ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು.

ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿಗಳ ಭೂಮಿಯನ್ನು ಕಬಳಿಸಿದರು !

ಖೇಡಾ ಜಿಲ್ಲೆಯ ನಡಿಯಾದನಲ್ಲಿ ಲ್ಯಾಂಡ್ ಜಿಹಾದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮತಾರ ತಾಲೂಕಿನಲ್ಲಿ ಮುಸಲ್ಮಾನ ಸಮಾಜದ ಜನರು ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿರುವುದು ಬಹಿರಂಗವಾಗಿದೆ.

ತಮಿಳುನಾಡಿನ ‘ಅಂಬೂರ್‌ ಬಿರಿಯಾನಿ ಮೇಳದಲ್ಲಿ’ ಗೋಮಾಂಸ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ !

ಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ !

ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು !

ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ.