ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಇನ್ನುಮುಂದೆ ಒಂದು ಸಾವಿರ ರೂಪಾಯಿಗಳ ದಂಡ

ಶೀಘ್ರದಲ್ಲೇ ಕಾನೂನು

ಹೊಸ ದೆಹಲಿ – ರಸ್ತೆಯಲ್ಲಿ ತಪ್ಪಾಗಿ ವಾಹನ ನಿಲ್ಲಿಸುವವರಿಗೆ ಇನ್ನುಮುಂದೆ ಒಂದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ ಗಡಕರಿ ಇವರು ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ಶೀಘ್ರವೇ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಗಡಕರಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, “ರಸ್ತೆಯಲ್ಲಿ ತಪ್ಪಾದ ಪದ್ದತಿಯಲ್ಲಿ ವಾಹನ ನಿಲುಗಡೆ ಮಾಡುವುದು ತುಂಬಾ ಆಪಾಯಕಾರಿ ಇದೆ. ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯು ತಪ್ಪಾದ ಪದ್ದತಿಯಲ್ಲಿ ನಿಲುಗಡೆಯ ಘಟನೆಗಳು ನಡೆಯುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಾರು ಹೊಂದಿದ್ದರೂ ಅವರು ನಿಲುಗಡೆಯ ವ್ಯವಸ್ಥೆಯನ್ನು ಮಾಡಿರುವದಿಲ್ಲ. ಪ್ರಸ್ತುತ ವಿಶಾಲವಾದ ರಸ್ತೆಗಳು ‘ನಿಲುಗಡೆ ಸ್ಥಳ’ಗಳಾಗಿ ಕಂಡುಬರುತ್ತಿವೆ. ರಸ್ತೆಯಲ್ಲಿ ತಪ್ಪಾಗಿ ನಿಲುಗಡೆ ಮಾಡುವ ಛಾಯಾಚಿತ್ರವನ್ನು ಕಳುಹಿಸುವವರಿಗೆ ೫೦೦ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಸ್ಯಾತಂತ್ರ್ಯ ನಂತರದ ೭೪ ವರ್ಷಗಳಲ್ಲಿ ಜನರನ್ನು ಶಿಸ್ತು ಹೇರದಿರುವ ಪರಿಣಾಮವಾಗಿದೆ !