ಮಾನೇಸರದ ಹಮ್‌ದರ್ದ ಕಂಪನಿಗೆ ಮಹಾಪಂಚಾಯತಿಯ ಎಚ್ಚರಿಕೆ
ಮಾನೆಸರ (ಹರಿಯಾಣ) : ಇಲ್ಲಿಯ ಪ್ರಸಿದ್ಧ ಔಷಧಿ ನಿರ್ಮಿಸುವ ಹಮ್‌ದರ್ದ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ೫೦% ಮೀಸಲಾತಿ ನೀಡುವ ಮನವಿ ಇಲ್ಲಿ ನಡೆದಿರುವ ಮಹಾಪಂಚಾಯತಿಯಲ್ಲಿ ಮಾಡಲಾಯಿತು. ಏನಾದರೂ ಈ ಮನವಿಯನ್ನು ತಳ್ಳಿಹಾಕಿದರೆ ಆಗ ಕಂಪನಿ ಮುಚ್ಚಲಾಗುವುದು, ಎಂಬ ಎಚ್ಚರಿಕೆ ಮಹಾಪಂಚಾಯತಿಯಿಂದ ನೀಡಲಾಗಿದೆ. ಈ ಮಹಾಪಂಚಾಯಾತಿಯಲ್ಲಿ ಹಮ್‌ದರ್ದ ಕಂಪನಿ ಹಿಂದೂಗಳ ಜೊತೆ ತಾರತಮ್ಯ ಮಾಡುತ್ತಿದೆ, ಎಂದು ಆರೋಪಿಸಲಾಯಿತು. ಮಹಾಪಂಚಾಯತಿಯ ನಂತರ ಗ್ರಾಮಸ್ಥರು ಮತ್ತು ಕೆಲವು ಹಿಂದೂ ಸಂಘಟನೆಯವರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘Hamdard does not employ Hindus’: Mahapanchayat in Haryana demands 50% reservation for local Hindus in jobs in the companyhttps://t.co/ohcZ5R1sPB
— OpIndia.com (@OpIndia_com) July 9, 2022
ಹಮ್‌ದರ್ದ ಕಂಪನಿಯ ಅಧಿಕಾರಿ ಶೈಲೇಶ್ ತಿವಾರಿ ಇವರು ಗ್ರಾಮಸ್ಥರ ಆರೋಪ ತಿರಸ್ಕರಿಸಿ ‘ಇದು ಪ್ರಸಿದ್ಧಿಗಾಗಿ ಮಾಡಿರುವ ಪ್ರಯತ್ನ’ ಎಂದು ಪ್ರತ್ಯಾರೋಪ ಮಾಡಿದರು. ಈ ಮೊದಲು ರಾಜ್ಯ ಸರಕಾರ ಕಂಪನಿಯಲ್ಲಿ ರಾಜ್ಯದ ನಾಗರಿಕರಿಗೆ ೭೫% ಮೇಸಲಾತಿ ನೀಡುವುದಾಗಿ ಘೋಷಿಸಿತ್ತು.
ಮಾನೆಸರದ ಮಾಜಿ ಸರಪಂಚ ರಾಮ ಅವತಾರ ಇವರ ಪ್ರಕಾರ, ಹಮ್‌ದರ್ದ ಕಂಪನಿಯ ಕಾರಖಾನೆ ಸ್ಥಳೀಯ ರೈತರ ಭೂಮಿಯ ಮೇಲೆ ಕಟ್ಟಲಾಗಿದೆ. ಈ ಕಂಪನಿಗೆ ನ್ಯಾಸದ ಹೆಸರಿನ ಮೇಲೆ ಅನೇಕ ರೀತಿಯ ಸವಲತ್ತುಗಳು ಸಿಗುತ್ತವೆ, ಹೀಗಿರುವಾಗ ಈ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ಇಲ್ಲಿಯವರೆಗೆ ನೌಕರಿ ನೀಡಲಾಗಿಲ್ಲ. ಈ ಕಂಪನಿಯಲ್ಲಿ ಇಲ್ಲಿಯವರೆಗೆ ಎಷ್ಟು ಸ್ಥಳೀಯ ಹಿಂದೂಗಳಿಗೆ ನೌಕರಿ ನೀಡಿದ್ದಾರೆ? ಇದರ ಬಗ್ಗೆ ಸರಕಾರ ವಿಚಾರಣೆ ನಡೆಸಬೇಕು ಎಂದು ಹೇಳಿದರು.