Amarnath Yatra 2024 : ಅಮರನಾಥ ಯಾತ್ರೆಗಾಗಿ ನೋಂದಣಿ ಪ್ರಾರಂಭ

ಅಮರನಾಥ ಯಾತ್ರೆ ಈ ವರ್ಷ ಜೂನ್ 29 ರಿಂದ ಪ್ರಾರಂಭವಾಗಲಿದೆ. ಈ ಯಾತ್ರೆಯು ಆಗಸ್ಟ್ 19 ರವರೆಗೆ ನಡೆಯಲಿದ್ದು ಅದಕ್ಕಾಗಿ ಏಪ್ರಿಲ್ 15 ರಿಂದ ನೋಂದಣಿ ಪ್ರಾರಂಭವಾಗಿದೆ.

ಅಮರನಾಥ ಯಾತ್ರೆ ಸತತ ಎರಡನೇ ದಿನವೂ ಸ್ಥಗಿತ !

ದಕ್ಷಿಣ ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಸತತ ೨ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಧಾರಾಕಾರ ಮಳೆಯ ನಂತರವೂ ಇಲ್ಲಿಯವರೆಗೆ ೮೪ ಸಾವಿರದ ೭೬೮ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದಾರೆ. ಮಳೆಯಿಂದಾಗಿ ಕೆಲವುಕಡೆಗೆ ಭೂ ಕುಸಿತ ಉಂಟಾಗಿ ರಸ್ತೆಗಳನ್ನು ಬಂದ್ ಮಾಡಲಾಯಿತು.

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ !

ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜೂನ್ 28 ರಂದು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಯಾತ್ರೆಯು ತಂಬಾಕು ಮುಕ್ತವಾಗಿರುತ್ತದೆ.

ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು.

ಅಮರನಾತ ಯಾತ್ರೆಗೆ ನೋಂದಣಿ ಆರಂಭ

ಅಮರನಾಥ ಯಾತ್ರೆಗೆ ಏಪ್ರಿಲ್ 17 ರಿಂದ ನೋಂದಣಿ ಆರಂಭವಾಗಿದೆ. 13 ರಿಂದ 70 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು.

ಅಮರನಾಥ ಗೂಹೆಯ ಬಳಿ ಬಂದಿರುವ ನೆರೆಯಿಂದಾಗಿ ೧೬ ಜನರ ಮೃತ್ಯುವಾದರೆ ೪೦ ಜನರು ಕಾಣೆಯಾಗಿದ್ದಾರೆ

ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ.

ಒಂದೇ ರಾತ್ರಿಯಲ್ಲೇ ಎರಡು ಸೇತುವೆ ಕಟ್ಟಿ ಅಮರನಾಥ ಯಾತ್ರೆಯ ಮಾರ್ಗ ತೆರವುಗೊಳಿಸಿದ ಸೈನ್ಯ !

ಭಾರತೀಯ ಸೈನ್ಯ ಒಂದೇ ರಾತ್ರಿಯಲ್ಲೇ ಜಮ್ಮು ಕಾಶ್ಮೀರದ ಎರಡು ಸೇತುವೆಗಳನ್ನು ಕಟ್ಟಿದ್ದಾರೆ. ಆದ್ದರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಬಾಲಟಾಲ ಎಂಬಲ್ಲಿ ಎರಡು ಸೇತುವೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದ್ದವು, ಅಮರನಾಥ ಯಾತ್ರೆಯ ಮಾರ್ಗದಲ್ಲಿ ವಿಘ್ನ ನಿರ್ಮಾಣವಾಗಿತ್ತು.

ಅಮರನಾಥ ಯಾತ್ರಿಕರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ !

ಕೇಂದ್ರ ಸರಕಾರ ಜಾರಿ ಮಾಡಿರುವ ನಿರ್ಣಯದ ಪ್ರಕಾರ ಅಮರನಾಥ ಯಾತ್ರೆಗಾಗಿ ಹೋಗುವ ಎಲ್ಲಾ ಯಾತ್ರೆಗಳಿಗೆ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದು !

ಕೊರೊನಾದ ಎರಡನೇ ಅಲೆಯ ಪರಿಣಾಮದಿಂದ ಈ ವರ್ಷವೂ ಕಾಶ್ಮೀರದ ಅಮರನಾಥ ಯಾತ್ರೆ ರದ್ದುಗೊಳಿಸಲು ನಿರ್ಧಾರವನ್ನು ಉಪರಾಜ್ಯಪಾಲ ಮನೋಜ ಸಿನ್ಹಾ ಇವರು ತೆಗೆದುಕೊಂಡಿದ್ದಾರೆ. ‘ಜನರ ಆರೋಗ್ಯಕ್ಕೆ ಆದ್ಯತೆ ನೀಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’, ಎಂದು ಸಿನ್ಹಾ ರವರು ಹೇಳಿದರು