ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಸಮೀಕ್ಷೆ ಮಾಡಿ ! – ಗೃಹ ಸಚಿವ

ಮಂಗಳೂರು – ಗೃಹ ಸಚಿವ ಅರಗ ಜ್ಞಾನೇಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪೊಲಿಸರಿಗೆ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದಾರೆ. ‘ವೀಸಾದ ಅವಧಿ ಮುಗಿದರೂ ಅನಧಿಕೃತವಾಗಿ ಮತ್ತು ಅಧಿಕೃತ ದಾಖಲೆಗಳು ಇಲ್ಲದಿರುವಾಗಲೂ ಕರ್ನಾಟಕದಲ್ಲಿ ವಾಸಿಸುವ ವಿದೇಶಿ ನಾಗರಿಕರನ್ನು ಹುಡುಕುವುದು ಸಮೀಕ್ಷೆಯ ಉದ್ದೇಶವಾಗಿದೆಯೆಂದು ಜ್ಞಾನೇಂದ್ರ ಇವರು ಹೇಳಿದರು.

ಗೃಹ ಸಚಿವ ತಮ್ಮ ಮಾತನ್ನು ಮುಂದುವರೆಸುತ್ತಾ, ಪೊಲಿಸರಿಗೆ ‘ವಿದೇಶಿ ನಾಗರಿಕರ ಬಳಿ ನಕಲಿ ಆಧಾರಕಾರ್ಡ, ರೇಶನಕಾರ್ಡ ಅಥವಾ ಮತದಾನ ಗುರುತಿನ ಚೀಟಿ ಇದೆಯೇ ?, ಎಂದು ಹುಡುಕಬೇಕಾಗುವುದು. ಈ ಪ್ರಕರಣದಲ್ಲಿ ಪೊಲಿಸರಿಗೆ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಗೃಹ ಸಚಿವ ಜ್ಞಾನೇಂದ್ರ ಇವರು ಜಿಲ್ಲಾ ಪೊಲಿಸರ ಹಿರಿಯ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಬಳಿಕ ಈ ಮಾಹಿತಿಯನ್ನು ನೀಡಿದರು. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಈ ರೀತಿಯ ಸಮೀಕ್ಷೆ ಕೈಕೊಳ್ಳಲಾಗಿದೆಯೆಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿ ಆದೇಶ ಏಕೆ ನೀಡಬೇಕಾಗುತ್ತದೆ ? ಪೊಲಿಸರಿಗೆ ಏಕೆ ಗಮನಕ್ಕೆ ಬರುವುದಿಲ್ಲ ?