ಭೋಪಾಲ (ಮಧ್ಯಪ್ರದೇಶ) – ಸಿಹೊರ ಜಿಲ್ಲೆಯ ‘ವೆಲ್ಲೋರ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಾಜಿ’ ಯ ವಸತಿಗೃಹದಲ್ಲಿ ಹನುಮಾನ ಚಾಲಿಸಾ ಸಾಮೂಹಿಕ ಪಠಣ ಮಾಡಿದ್ದರಿಂದ ಮಹಾವಿದ್ಯಾಲಯದ ಆಡಳಿತವು ೭ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ದಂಡ ವಿಧಿಸಿದೆ. ಇತರ ಕೆಲವು ವಿದ್ಯಾರ್ಥಿಗಳು ನೀಡಿರುವ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆಯ ಬಗ್ಗೆ ಮಹಾವಿದ್ಯಾಲಯದ ಅಧಿಕಾರಿಗಳು, ಯಾರಾದರೂ ವೈಯಕ್ತಿಕವಾಗಿ ಪೂಜೆ ಅಥವಾ ಪಠಣ ಮಾಡಿದ್ದಾರೆ ಅದು ಆಯೋಗ್ಯವಲ್ಲ; ಆದರೆ ಯಾವುದೇ ಅನುಮತಿಯಿಲ್ಲದೆ ಯಾರಾದರೂ ಸಾಮೂಹಿಕವಾಗಿ ಹೀಗೆ ಮಾಡಿದರೆ ಅದು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
VIT Bhopal: 7 Hindu students penalised for reciting Hanuman Chalisa. Here is what we know so farhttps://t.co/IeL7DAhMHb
— OpIndia.com (@OpIndia_com) July 8, 2022
ಹನುಮಾನ ಚಾಲಿಸಾ ಭಾರತದಲ್ಲಿ ಅಲ್ಲದೆ ಬೇರೆ ಎಲ್ಲಿ ಹೇಳಬೇಕು ? – ಗೃಹ ಸಚಿವ ನರೋತ್ತಮ ಮಿಶ್ರಾ
ರಾಜ್ಯದ ಗೃಹ ಸಚಿವ ನರೊತ್ತಮ ಮಿಶ್ರಾ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅದರ ವಿಚಾರಣೆಯನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಅವರು, ಹನುಮಾನ ಚಾಲಿಸಾ ಭಾರತದಲ್ಲಿ ಅಲ್ಲದೆ ಬೇರೆ ಎಲ್ಲಿ ಹೇಳಬೇಕು ? ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಮಹಾವಿದ್ಯಾಲಯದ ಆಡಳಿತದಿಂದ ೭ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ದಂಡ ! ಒಂದು ವೇಳೆ ಇಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿದ್ದರೆ, ಆಗ ಮಹಾವಿದ್ಯಾಲಯ ಆಡಳಿತದಿಂದ ಇದೆ ರೀತಿ ಕ್ರಮ ಕೈಗೊಳ್ಳಲಾಗುತ್ತಿತ್ತೆ ? |