ಉರ್ದೂ ಶಿಕ್ಷಕರ ಸೌಲಭ್ಯಕ್ಕಾಗಿ ನಿರ್ಣಯ ತೆಗೆದುಕೊಂಡಿರುವುದಾಗಿ ಶಿಕ್ಷಣ ವಿಭಾಗವು ತಿಳಿಸಿದೆ !
ಜಾಮತಾಡಾ (ಝಾರಖಂಡ) – ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಶಾಲೆಗಳಲ್ಲಿ ರವಿವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿರುವ ವಾರ್ತೆಯನ್ನು ದಿನಪತ್ರಿಕೆಯಾದ ‘ಜಾಗರಣ’ವು ಪ್ರಕಟಿಸಿದೆ. ಶಿಕ್ಷಣ ವಿಭಾಗವು ಹೇಳುವಂತೆ, ಈ ಎಲ್ಲ ಶಾಲೆಗಳು ಉರ್ದೂ ಆಗಿರುವುದರಿಂದ ಶಿಕ್ಷಕರ ಸೌಲಭ್ಯಕ್ಕಾಗಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
೧. ದಿನಪತ್ರಿಕೆ ‘ಜಾಗರಣ’ದ ಪತ್ರಕರ್ತರಾದ ಕೌಶಲ ಸಿಂಹರವರು ನೀಡಿರುವ ವಾರ್ತೆಯಲ್ಲಿ, ಶೇ. ೭೦ರಷ್ಟು ವಿದ್ಯಾರ್ಥಿಗಳು ಮುಸಲ್ಮಾನರಾಗಿರುವ ಶಾಲೆಗಳಲ್ಲಿ ಶುಕ್ರವಾರದಂದು ರಜೆ ನೀಡಲಾಗುತ್ತಿದೆ. ಆದರೆ ಸರಕಾರವು ಇಂತಹ ಯಾವುದೇ ರಜೆಯ ಆದೇಶವನ್ನು ನೀಡಿಲ್ಲ. ಶಾಲೆಗಳ ವ್ಯವಸ್ಥಾಪನೆಯೇ ಇಂತಹ ನಿರ್ಣಯವನ್ನು ತೆಗೆದುಕೊಂಡಿದೆ.
#JharkhandNews : जामताड़ा में उर्दू स्कूलों की मनमानी, रविवार की जगह शुक्रवार को छुट्टी@Jagarnathji_mla @IrfanAnsariMLA @pratulshahdeo pic.twitter.com/1Y6ZPRcmpc
— Zee Bihar Jharkhand (@ZeeBiharNews) July 10, 2022
೨. ಶಿಕ್ಷಣ ವಿಭಾಗವು ಹೇಳುವಂತೆ, ಜಿಲ್ಲೆಯಲ್ಲಿನ ಒಟ್ಟೂ ೧ ಸಾವಿರದ ೭೪ ಶಾಲೆಗಳಲ್ಲಿ ಕೇವಲ ೧೫ ಉರ್ದೂ ಶಾಲೆಗಳಿಗೆ ಶುಕ್ರವಾರದಂದು ರಜೆ ನೀಡಲಾಗುತ್ತಿದೆ. (ಸರಕಾರಿ ನಿಯಮಗಳನ್ನು ಉಲ್ಲಂಘಿಸಿ ಶಾಲೆಗಳು ಇಂತಹ ನಿರ್ಣಯವನ್ನು ತೆಗೆದುಕೊಂಡರೆ, ಅದು ಅಪರಾಧವೇ ಆಗಿದೆ. ಶಿಕ್ಷಣ ವಿಭಾಗವು ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು. ಬದಲಾಗಿ ವಿಭಾಗವೇ ಇಂತಹ ಸ್ಪಷ್ಟೀಕರಣವನ್ನು ನೀಡಲು ಪ್ರಯತ್ನಿಸಿದರೆ, ಅದರ ಮೇಲೆಯೂ ಕಾರ್ಯಾಚರಣೆ ನಡೆಯಬೇಕು – ಸಂಪಾದಕರು)
೩. ಬಿರಾಜಪೂರ ಮಾಧ್ಯಮಿಕ ವಿದ್ಯಾಲಯಗಳ ಸಚಿವರಾದ ದೀಪ ನಾರಾಯಣ ಮಂಡಲರವರು ಮಾತನಾಡುತ್ತ ‘ಸುಮಾರು ೮ ತಿಂಗಳುಗಳ ಹಿಂದೆ ಸ್ಥಳೀಯ ಮುಸಲ್ಮಾನ ಗ್ರಾಮಸ್ಥರು ಶಾಲೆಗಳಿಗೆ ಶುಕ್ರವಾರದಂದು ರಜೆ ನೀಡುವ ಬಗ್ಗೆ ಗೊಂದಲವೆಬ್ಬಿಸಿದ್ದರು. ಆಗ ನಾವು ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಗಳು ಈ ವಿಷಯದಲ್ಲಿ ಪತ್ರವನ್ನು ಕಳುಹಿಸಿ ಮಾಹಿತಿ ನೀಡಿದ್ದೆವು. ಆದರೆ ಈ ಬಗ್ಗೆ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ಈಗ ಗ್ರಾಮಸ್ಥರ ಒತ್ತಡದಿಂದ ಶುಕ್ರವಾರದಂದು ರಜೆ ನೀಡಲಾಗುತ್ತಿದೆ’ ಎಂದು ಹೇಳಿದರು.
೪. ನಾವಾಡೀಹ ಪಂಚಾಯತ್ತಿನ ಮಹಿಳಾ ಸರಪಂಚರವರ ಪತಿ ಸಜ್ಜಾದ ಅಂಸಾರಿಯವರು ಮಾತನಾಡುತ್ತ ‘ಶುಕ್ರವಾರದಂದು ರಜೆ ನೀಡುವ ವ್ಯವಸ್ಥೆಯು ಹಿಂದಿನಿಂದಲೂ ಚಾಲ್ತಿಯಲ್ಲಿದೆ’ ಎಂದು ಹೇಳಿದರು.
देश में लंबे समय से जनसंख्या नियंत्रण कानून की मांग की जा रही है।
तमाम संगठन विभिन्न माध्यमों से जनसंख्या नियंत्रण कानून की मांग के लिए आवाज उठा रहे हैं।
जनसंख्या नियंत्रण कानून क्यों जरूरी है? झारखंड के जामताड़ा से इससे जुड़ी बड़ी खबर सामने आई है। #Jharkhand (1/8) pic.twitter.com/MXWHONL82u
— TheRitamApp | द ऋतम् एप (@TheRitamApp) July 9, 2022
೫. ಜಾಮತಾಡಾ ಜಿಲ್ಲೆಯ ಶಿಕ್ಷಣಾಧಿಕಾರಿಗಳಾದ ಅಭಯ ಶಂಕರರವರು ಮಾತನಾಡುತ್ತ, ‘ಇಲ್ಲಿ ಶುಕ್ರವಾರದಂದು ರಜೆ ನೀಡಲಾಗುತ್ತಿದೆ, ಎಂಬಂತಹ ಯಾವುದೇ ಮಾಹಿತಿ ನಮಗೆ ದೊರೆತಿಲ್ಲ. ಹೀಗೆ ನಡೆಯುತ್ತಿದ್ದರೆ ನಾವು ಅದನ್ನು ತಡೆಯುತ್ತೇವೆ ಹಾಗೂ ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡುತ್ತೇವೆ’ ಎಂದು ಹೇಳಿದರು. (ಶಿಕ್ಷಣ ವಿಭಾಗವು ಒಂದು ಹೇಳಿದರೆ, ಶಿಕ್ಷಣಾಧಿಕಾರಿಗಳು ಇನ್ನೊಂದು ಹೇಳುತ್ತಾರೆ. ಇದರಿಂದಲೇ ಅವರ ನಡುವೆ ಎಷ್ಟು ಗೊಂದಲವಿದೆ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು)
೬. ಈ ಬಗ್ಗೆ ಝಾರಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪದ ನೇತಾರರಾದ ಬಾಬೂಲಾಲ ಮರಾಂಡಿಯವರು ಟ್ವೀಟ್ ಮಾಡಿ ‘ಈ ಹಿಂದೆಯೂ ರಾಜ್ಯದಲ್ಲಿನ ಗಢವಾದಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುವುದರ ಮೇಲೆ ನಿರ್ಬಂಧ ಹೇರಲಾಗಿದೆ ಹಾಗೂ ಈಗ ಜಾಮತಾಡಾದಲ್ಲಿ ರವಿವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿದೆ. ಮುಂದೆ ಈ ಶಾಲೆಗಳ ಮೇಲೆ ‘ಉರ್ದೂ ಶಾಲೆ’ ಎಂದೂ ಬರೆದು ಹಾಕಬೇಕು. ಮುಖ್ಯಮಂತ್ರಿ ಹೇಮಂತ ಸೋರೆನಜೀ, ನೀವು ಝಾರಖಂಡವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವಿರಿ ?’ ಎಂದು ಕೇಳಿದ್ದಾರೆ.
ಸಂಪಾದಕೀಯ ನಿಲುವುಹಾಗಿದ್ದರೆ, ಸಂಪೂರ್ಣ ದೇಶದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ಹಿಂದೂಗಳಾಗಿದ್ದಾರೆ, ಅಲ್ಲಿ ಗುರುವಾರದಂದು (ಇದು ಭಗವಾನ ದತ್ತಗುರುಗಳೊಂದಿಗೆ ಸಂಬಂಧಿಸಿರುವ ವಾರವಾಗಿರುವುದರಿಂದ ಈ ದಿನ ಹೆಚ್ಚಿನ ಹಿಂದೂಗಳು ಉಪಾಸನೆಯನ್ನು ಮಾಡುತ್ತಿರುವುದರಿಂದ) ರಜೆ ಘೋಷಿಸಿ ! ರವಿವಾರದ ರಜೆಯು ಕ್ರೈಸ್ತ ಆಂಗ್ಲರು ಭಾರತಕ್ಕೆ ತಂದ ಪರಂಪರೆಯಾಗಿದೆ ! |