ಒಂದೇ ರಾತ್ರಿಯಲ್ಲೇ ಎರಡು ಸೇತುವೆ ಕಟ್ಟಿ ಅಮರನಾಥ ಯಾತ್ರೆಯ ಮಾರ್ಗ ತೆರವುಗೊಳಿಸಿದ ಸೈನ್ಯ !

ಶ್ರೀನಗರ – ಭಾರತೀಯ ಸೈನ್ಯ ಒಂದೇ ರಾತ್ರಿಯಲ್ಲೇ ಜಮ್ಮು ಕಾಶ್ಮೀರದ ಎರಡು ಸೇತುವೆಗಳನ್ನು ಕಟ್ಟಿದ್ದಾರೆ. ಆದ್ದರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಬಾಲಟಾಲ ಎಂಬಲ್ಲಿ ಎರಡು ಸೇತುವೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದ್ದವು, ಅಮರನಾಥ ಯಾತ್ರೆಯ ಮಾರ್ಗದಲ್ಲಿ ವಿಘ್ನ ನಿರ್ಮಾಣವಾಗಿತ್ತು. ಅದರ ನಂತರ ಸರಕಾರ ಸೈನ್ಯದ ಚೀನಾರ ಕೋರ್ ವಿಭಾಗಕ್ಕೆ ಸೇತುವೆ ಮತ್ತೆ ತಯಾರಿಸಲು ವಿನಂತಿಸಿತು. ಸೈನ್ಯವು ಹವಾಮಾನ ವೈಪರಿತ್ಯ ಮತ್ತು ಕತ್ತಲೆಯ ತೊಂದರೆಯ ಎದುರಿಸುತ್ತ ಮತ್ತೆ ಸೇತುವೆ ಕಟ್ಟಿದೆ.

ಅಮರನಾಥ ಯಾತ್ರೆ ಜೂನ್ ೩೦ ರಂದು ಪ್ರಾರಂಭವಾಗಿದ್ದು, ಮೊದಲ ಗುಂಪಿನಲ್ಲಿ ೨ ಸಾವಿರ ೭೫೦ ಭಕ್ತರು ಭಾರಿ ಬಂದೋಬಸ್ತಿನಲ್ಲಿ ದರ್ಶನಕ್ಕಾಗಿ ತೆರಳಿದ್ದಾರೆ.

ಸಂಪಾದಕೀಯ ನಿಲುವು

ಜನಪರ ಕಾರ್ಯ ಪೂರ್ಣಗೊಳಿಸಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವ ಸರಕಾರ ಇದರಿಂದ ಏನಾದರೂ ಕಲಿಯುವುದೇ ?