ಈಜಿಪ್ಟನ ಜನರಲ್ಲಿ ಭಯ ನಿರ್ಮಾಣ ಮಾಡಲು ಗಲ್ಲು ಶಿಕ್ಷೆಯ ಕ್ರಮದ ನೇರ ಪ್ರಸಾರ ಮಾಡಲು ನ್ಯಾಯಾಲಯದ ಆದೇಶ !

ಇದಕ್ಕಾಗಿ ಕಾನೂನಿನಲ್ಲಿ ಸುಧಾರಣೆ ಮಾಡಲು ಸಹ ಆದೇಶ

ಕೈರೋ (ಈಜಿಪ್ಟ್) – ಈಜಿಪ್ತದ ಮಂಸೌರ ಪೌಜದಾರಿ ನ್ಯಾಯಾಲಯವು ನಾಯರಾ ಅಶರಫ ಈ ವಿದ್ಯಾರ್ಥಿನಿಯ ಹತ್ಯೆ ಮಾಡಿದ ಮಹಮ್ಮದ್ ಆದಿಲಗೆ ಗಲ್ಲು ಶಿಕ್ಷೆ ವಿಧಿಸಿದೆ ಹಾಗೂ ಆತನಿಗೆ ಗಲ್ಲು ಶಿಕ್ಷೆ ನೀಡುವ ಘಟನೆಯ ನೇರ ಪ್ರಸಾರ ಮಾಡುವ ಆದೇಶ ನೀಡಿದೆ. ‘ಹೀಗೆ ಮಾಡುವುದರಿಂದ ಈ ರೀತಿಯ ಹತ್ಯೆ ನಿಲ್ಲಿಸಬಹುದು. ಜನರಲ್ಲಿ ಭಯ ನಿರ್ಮಾಣ ಮಾಡಬಹುದು’, ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಇದಕ್ಕಾಗಿ ಸಂಸತ್ತಿನ ಕಾನೂನಿನಲ್ಲಿ ಸುಧಾರಣೆ ಮಾಡಲು ಆದೇಶ ನೀಡಿದೆ. ನಾಯರಾ ವಿವಾಹವಾಗಲು ನಿರಾಕರಿಸಿರುವುದರಿಂದ ಆದಿಲ್ ಆಕೆಯ ಶಿರಚ್ಛೇದ ಮಾಡಿದ್ದ.

ಸಂಪಾದಕೀಯ ನಿಲುವು

‘ಅಪರಾಧಿಗಳಲ್ಲಿ ಭಯ ಹೇಗೆ ಹುಟ್ಟಿಸಬೇಕು ?’, ಇದು ಈಜಿಪ್ಟನ ನ್ಯಾಯಾಲಯದಿಂದ ಕಲಿಯಿರಿ ! ಭಾರತದಲ್ಲಿಯೂ ಕೂಡ ಈ ರೀತಿ ಆಗಲು ಆಡಳಿತಗಾರರು ಪ್ರಯತ್ನ ಮಾಡುವುದು, ಅಪೇಕ್ಷಿತವಿದೆ !