ಭಗವಂತನ ಸ್ಮರಣೆ ಇದ್ದರೆ, ಅಹಂಕಾರ ತೊಂದರೆ ಕೊಡುವುದಿಲ್ಲ !

ನಮ್ಮಲ್ಲಿ ಒಳ್ಳೆಯ ಗುಣಗಳು ಬಂದರೆ ‘ಆ ಗುಣಗಳು ಯೋಗೇಶ್ವರ ಭಗವಾನನು ನನ್ನ ಬೆನ್ನಿಗೆ ನಿಂತಿದ್ದಾನೆ ಆದುದರಿಂದ ಬಂದಿವೆ’, ಈ ಭಾವನೆ ಇರಬೇಕು. ಈ ಭಾವನೆ ಇದ್ದರೆ, ಅಹಂಕಾರದ ತೊಂದರೆ ಆಗುವುದಿಲ್ಲ

‘ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳ ಸಂದರ್ಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಸಾಧನೆಯ ಸುವರ್ಣಾವಕಾಶದ ಲಾಭ ಪಡೆಯಿರಿ !

ವ್ಯಕ್ತಿಯ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳು, ಅವುಗಳ ಪರಸ್ಪರರಲ್ಲಿರುವ ಸಂಯೋಗ, ಚಿಹ್ನೆಗಳು, ಎತ್ತರ ಮತ್ತು ಆಕಾರ ಇವುಗಳ ಆಧಾರದಿಂದ ಒಬ್ಬ ವ್ಯಕ್ತಿಯ ಸ್ವಭಾವ, ಗುಣದೋಷ, ಆಯುಷ್ಯ (ಜೀವಮಾನ), ಭಾಗ್ಯ (ಅದೃಷ್ಟ), ಪ್ರಾರಬ್ಧ ಇತ್ಯಾದಿ ವಿಷಯಗಳನ್ನು ತಿಳಿಯಬಹುದು.

ಘಟನೆಗಳು ಘಟಿಸುವ ಮೊದಲಿನ ಚಿಂತೆ (Anticipatory anxiety) ಇದಕ್ಕೆ ಹೊಮಿಯೋಪಥಿ ಔಷಧಿಗಳ ಮಾಹಿತಿ

ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು.

ಅಮೇರಿಕಾದಲ್ಲಿ ಅಸಮತೋಲನ !

ಅಮೇರಿಕಾ ಎಂದರೆ ಬಲಾಢ್ಯ ಮತ್ತು ಅಷ್ಟೇ ಅಭಿವೃದ್ಧಿ ಹೊಂದಿದ ರಾಷ್ಟ್ರ ! ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಔಷಧಿಗಳ ಮಾರುಕಟ್ಟೆಗಳೂ ಈ ಅಮೇರಿಕಾದಲ್ಲಿಯೇ ಇವೆ; ಆದರೆ ದುರದೃಷ್ಟವಶಾತ್‌ ಇಂದು ಅಲ್ಲಿ ಔಷಧಿಗಳ ಕೊರತೆ ಇದೆ.

ಎಂಟು ರೀತಿಯ ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನಾಗಿದ್ದಾನೆ !

‘ನೋಡುವುದು, ಕೇಳಿಸಿಕೊಳ್ಳುವುದು, ಪರಿಮಳ ಆಘ್ರಾಣಿಸುವುದು, ರುಚಿ ಸವಿಯುವುದು, ಸ್ಪರ್ಶ ಮಾಡುವುದು, ಶಾರೀರಿಕ ಆರಾಮ, ಯಶಸ್ಸು ಮತ್ತು ಗೌರವ ಈ ಎಂಟು ರೀತಿಯ ಸುಖಗಳಿಗಿಂತ ಪರಾಮಾತ್ಮ-ಸುಖವು ವಿಶೇಷವಾಗಿದೆ. ಈ ಎಂಟು ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನು.’

ಇನ್ನು ‘ಕ್ರೆಡಿಟ್‌ಕಾರ್ಡ್ ಪೇಮೆಂಟ್ ನೆಟ್‌ವರ್ಕ್ ಪ್ರೊವೈಡರ‍್ಸಗಳ ಏಕಸ್ವಾಮ್ಯಕ್ಕೆ ಪೂರ್ಣವಿರಾಮ !

ಇದುವರೆಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳು ಹೆಚ್ಚೆಚ್ಚು ಕಾರ್ಡ್ ಗಳನ್ನು ವಿತರಣೆ ಮಾಡಲು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಪ್ರೋತ್ಸಾಹ ಭತ್ತೆ (ಇನ್ಸೆಂಟಿವ್) ನೀಡುತ್ತಿದ್ದವು, ಅದು ಇನ್ನು ಮುಂದೆ ಇರುವುದಿಲ್ಲ. ಈಗ ಗ್ರಾಹಕರಿಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳನ್ನು ಆರಿಸುವ ಅಧಿಕಾರ ನೀಡಿರುವುದರಿಂದ ಈ ‘ಪ್ರೋತ್ಸಾಹ ಭತ್ತೆ’ಯನ್ನು ಬ್ಯಾಂಕಿಗೆ ಕೊಡದೆ ನೇರವಾಗಿ ಗ್ರಾಹಕರಿಗೆ ಕೊಡ ಬೇಕಾಗುತ್ತದೆ.

ದುಷ್ಟ ಮಾರ್ಗದಿಂದ ಸಂಪಾದಿಸಿದ ಸಂಪತ್ತು ಹಠಾತ್ತನೆ ಕಳೆದು ಹೋಗುತ್ತದೆ ಮತ್ತು ಧರ್ಮದಿಂದಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ

ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ.

ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಗ್ರಹಯೋಗ ಇರುವುದರ ಹಿಂದಿನ ಕಾರಣಮೀಮಾಂಸೆ !

ಮನುಷ್ಯನ ಜೀವನದಲ್ಲಿ ಪೂರ್ವಜನ್ಮದ ಸಂಸ್ಕಾರ ಹಾಗೂ ಈ ಜನ್ಮದಲ್ಲಿ ಆಗುವ ಸಂಸ್ಕಾರಗಳ ಪ್ರಭಾವವಿರುತ್ತದೆ. ದೈವೀ ಬಾಲಕರ ಮೇಲೆ ಪೂರ್ವಜನ್ಮದ ಸಾತ್ತ್ವಿಕ ಸಂಸ್ಕಾರಗಳು ಇದ್ದರೂ, ಈ ಜನ್ಮದಲ್ಲಿ ಆಗುವ ಸಂಸ್ಕಾರಗಳೂ ಸಾತ್ತ್ವಿಕವಾಗಿರಬೇಕಾಗುತ್ತದೆ. ದೈವೀ ಬಾಲಕರಿಗೆ ಸಾಧನೆಗಾಗಿ ಪೋಷಕ ವಾತಾವರಣ ನಿರ್ಮಿಸುವ ಮುಖ್ಯ ಹೊಣೆ ಪಾಲಕರದ್ದಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಪೊಲೀಸರು ಮತ್ತು ನ್ಯಾಯಾಧೀಶರುಗಳಿಗೆ ಸಾಧನೆಯನ್ನು ಕಲಿಸಿದ್ದರೆ, ಅವರಿಗೆ ಒಂದೇ ಕ್ಷಣದಲ್ಲಿ ‘ಅಪರಾಧಿ ಯಾರು’ ಎಂಬುದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದ ಜನರ ಕೋಟ್ಯಂತರ ರೂಪಾಯಿಗಳು ಕೇವಲ ತನಿಖೆಗೆ ಖರ್ಚಾಗುತ್ತಿವೆ. ಈಶ್ವರೀ ರಾಜ್ಯದಲ್ಲಿ ಹೀಗಿರಲಾರದು.’

ಅಜ್ಞಾನರೂಪಿ ಅಂಧಕಾರವನ್ನು ಹೋಗಲಾಡಿಸುವ ತೇಜವೇ ಸದ್ಗುರು !

ಸೂರ್ಯನ ಕಾರ್ಯವಿರುವಂತೆಯೇ ಸದ್ಗುರುಗಳ ಕಾರ್ಯವಿರುತ್ತದೆ. ಸದ್ಗುರುಗಳು ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುತ್ತಾರೆ