ಅಜ್ಞಾನರೂಪಿ ಅಂಧಕಾರವನ್ನು ಹೋಗಲಾಡಿಸುವ ತೇಜವೇ ಸದ್ಗುರು !

ಗುರು ಈ ಪದದಲ್ಲಿ ಎರಡು ಅಕ್ಷರಗಳಿದೆ. ‘ಗುಕಾರ’, ಅಂದರೆ ಅಂಧಕಾರ ಮತ್ತು ‘ರುಕಾರ’ ಅಂದರೆ ತೇಜ. ಅಂಧಕಾರವನ್ನು ನಾಶಗೊಳಿಸುವ ತೇಜ. ಸೂರ್ಯನ ಕಾರ್ಯವಿರುವಂತೆಯೇ ಸದ್ಗುರುಗಳ ಕಾರ್ಯವಿರುತ್ತದೆ. ಸದ್ಗುರುಗಳು ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುತ್ತಾರೆ. ದೃಶ್ಯ ಕತ್ತಲೆಗಿಂತ ಅಜ್ಞಾನದ ಕತ್ತಲೆ ದೊಡ್ಡದು. ಇದು ಶಕ್ತಿಯುತವಾಗಿದೆ. ಅಸತ್ಯಕ್ಕೆ ಸತ್ಯದ ರೂಪ ನೀಡುವಂತದ್ದಾಗಿದೆ. ಅಜ್ಞಾನರೂಪಿ ಅಂಧಕಾರದ ವೈಶಿಷ್ಟ್ಯವೆಂದರೆ ಅದು ಕತ್ತಲೆ ಅನಿಸುವುದಿಲ್ಲ.bಇದು ಪ್ರಕಾಶಮಾನವೆಂದೆನಿಸುತ್ತದೆ. ‘ಗು’ ಮತ್ತು ‘ರು’ ಗಳ ಸಂಯೋಗದಿಂದ ಪ್ರಕಟವಾಗುವ ತೇಜಸ್ಸು ಅಜ್ಞಾನರೂಪಿ ಅಂಧಕಾರದ ಕಣವನ್ನೂ ಉಳಿಸುವುದಿಲ್ಲ.

– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ’)