ದುಷ್ಟ ಮಾರ್ಗದಿಂದ ಸಂಪಾದಿಸಿದ ಸಂಪತ್ತು ಹಠಾತ್ತನೆ ಕಳೆದು ಹೋಗುತ್ತದೆ ಮತ್ತು ಧರ್ಮದಿಂದಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ

ಪುರುಷಾರ್ಥ ಮತ್ತು ಪುಣ್ಯ ಇವುಗಳ ವೃದ್ದಿಯಿಂದ ಲಕ್ಷ್ಮಿಯು ಬರುತ್ತಾಳೆ. ದಾನ, ಪುಣ್ಯ ಮತ್ತು ಕೌಶಲ್ಯದಿಂದ ಲಕ್ಷ್ಮಿಯು ವೃದ್ಧಿಸುತ್ತಾಳೆ. ತಾಳ್ಮೆ ಮತ್ತು ಸದಾಚಾರಗಳಿಂದ ಅವಳು ಸ್ಥಿರವಾಗುತ್ತಾಳೆ. ಪಾಪ, ಮನಸ್ಥಾಪ ಮತ್ತು ಭಯಗಳಿಂದ ಬಂದ ಲಕ್ಷ್ಮಿಯು ಜಗಳ ಮತ್ತು ಭಯ ನಿರ್ಮಿಸುತ್ತಾಳೆ. ಅವಳು ೧೦ ವರ್ಷಗಳಲ್ಲಿ ನಷ್ಟವಾಗುತ್ತಾಳೆ. ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ. ಉದ್ಯೋಗ, ಸದಾಚಾರ, ಧರ್ಮ ಮತ್ತು ತಾಳ್ಮೆ ಇವುಗಳಿಂದ ಸುಖ ಕೊಡುವ ಧನಪ್ರಾಪ್ತಿಯಾಗುತ್ತದೆ. ಆ ಧನವು ‘ಬಹುಜನ ಸುಖಾಯ |’ ಪ್ರವೃತ್ತಿಯನ್ನು ನಿರ್ಮಿಸಿ ಇಹ ಮತ್ತು ಪರಲೋಕದಲ್ಲಿ ಸುಖ ನೀಡುತ್ತದೆ ಮತ್ತು ಶಾಶ್ವತವಾಗಿರುತ್ತದೆ.’ (ಆಧಾರ : ಗ್ರಂಥ ‘ಸದಾ ದಿವಾಳಿ’)