ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರನ ಕೃಪೆ ಆಗುವುದಕ್ಕೆ ಏನು ಮಾಡಬೇಕು?

‘ತನು, ಮನ, ಧನ ಮತ್ತು ಅಹಂಗಳ ತ್ಯಾಗವಾಗಿ, ಈಶ್ವರನ ಬಗ್ಗೆ ಭಾವ-ಭಕ್ತಿ ಹೆಚ್ಚಾದರೆ ಈಶ್ವರನ ಕೃಪೆ ಆಗುತ್ತದೆ’. ಎಲ್ಲಿ ಸಮಯ ವ್ಯರ್ಥ ಮಾಡುವ ಪಾಶ್ಚಿಮಾತ್ಯರ ಸಂಶೋಧನಾಪದ್ಧತಿಗಳು ಮತ್ತು ಎಲ್ಲಿ ಕ್ಷಣಮಾತ್ರದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡುವ ಭಾರತೀಯ ಸಾಧನೆ !

‘ಮಾಹಿತಿಯನ್ನು ಸಂಗ್ರಹಿಸುವುದು, ಅದರ ಅಂಕಿ ಅಂಶಗಳ ವಿಶ್ಲೇಷಣೆ (Statistical analysis) ಮಾಡುವುದು ಮತ್ತು ನಂತರ ನಿಷ್ಕರ್ಷಕ್ಕೆ ಬರುವುದು’ ಇದು ಪಾಶ್ಚಿಮಾತ್ಯರ ಸಂಶೋಧನಾ ಪದ್ಧತಿಯಾಗಿದೆ. ಇದಕ್ಕೆ ಅನೇಕ ವರ್ಷಗಳು ತಗಲುತ್ತವೆ. ಇದಕ್ಕೆ ತದ್ವಿರುದ್ಧವಾಗಿ ಸಾಧನೆಯಲ್ಲಿ ಪ್ರಗತಿಯಾಯಿತೆಂದರೆ ಕ್ಷಣಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ.’

ಸನಾತನವು ಮಾಡುತ್ತಿರುವ ನೂರಾರು ಯಜ್ಞಗಳ ಉದ್ದೇಶ ಮತ್ತು ಅವುಗಳ ಪರಿಣಾಮ !

‘ಸನಾತನವು ಮಾಡುತ್ತಿರುವ ನೂರಾರು ಯಜ್ಞಗಳು ಮತ್ತು ಗ್ರಂಥ ಪ್ರಕಾಶನಗಳ ಮೂಲ ಉದ್ದೇಶವು  ‘ಹಿಂದೂ ರಾಷ್ಟ್ರದ ಸ್ಥಾಪನೆ’ ಆಗಿದೆ; ಹೀಗಿದ್ದರೂ, ಇವುಗಳಿಂದ ಮೊದಲು  ‘ಆದರ್ಶ ರಾಷ್ಟ್ರ’ದ ನಿರ್ಮಾಣವಾಗುವುದು ಮತ್ತು ತದನಂತರವೇ, ಕಾಲಾಂತರದಲ್ಲಿ ನಿಜವಾದ ಅರ್ಥದಲ್ಲಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಯಾಗುವುದು.’

ಈಶ್ವರಪ್ರಾಪ್ತಿ ಅರ್ಧವೇಳೆ ಮಾಡುವ ಕೆಲಸವಲ್ಲ !

‘ಈಶ್ವರಪ್ರಾಪ್ತಿ ಅರ್ಧಸಮಯದ ಕೆಲಸ (‘ಪಾರ್ಟ್ ಟೈಮ್‌ ಜಾಬ್‌’) ಆಗಿರದೇ  ಪೂರ್ಣಸಮಯದ ಸಾಧನೆಯಾಗಿದೆ. ಆದ್ದರಿಂದ ನಮ್ಮ ಪ್ರತಿಯೊಂದು ಕೃತಿಯನ್ನೂ ನಾವು ಭಕ್ತಿಭಾವದಿಂದ ಮಾಡಬೇಕು.’ ಹಿಂದೂಗಳೇ, ಕಾಲಕ್ಕನುಸಾರ ಸಾಧನೆಯು ಬದಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ !

‘ಸಂಪತ್ಕಾಲದಲ್ಲಿ, ಅಂದರೆ ಪ್ರಾಚೀನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಸದ್ಯದ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ‘ಗೋದಾನ ಮಾಡುವುದು’ ಅಲ್ಲ, ‘ಗೋರಕ್ಷಣೆ ಮಾಡುವುದು’ ಮಹತ್ವದ್ದಾಗಿದೆ !’

ಈಶ್ವರೀ ರಾಜ್ಯದಲ್ಲಿ ಸಾಧನೆಯೇ ಆಡಳಿತದ ಅಡಿಪಾಯ !

‘ಪೊಲೀಸರು ಮತ್ತು ನ್ಯಾಯಾಧೀಶರುಗಳಿಗೆ ಸಾಧನೆಯನ್ನು ಕಲಿಸಿದ್ದರೆ, ಅವರಿಗೆ ಒಂದೇ ಕ್ಷಣದಲ್ಲಿ ‘ಅಪರಾಧಿ ಯಾರು’ ಎಂಬುದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದ ಜನರ ಕೋಟ್ಯಂತರ ರೂಪಾಯಿಗಳು ಕೇವಲ ತನಿಖೆಗೆ ಖರ್ಚಾಗುತ್ತಿವೆ. ಈಶ್ವರೀ ರಾಜ್ಯದಲ್ಲಿ ಹೀಗಿರಲಾರದು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ