ಅಮೇರಿಕಾದಲ್ಲಿ ಅಸಮತೋಲನ !

ಅಮೇರಿಕಾ ಎಂದರೆ ಬಲಾಢ್ಯ ಮತ್ತು ಅಷ್ಟೇ ಅಭಿವೃದ್ಧಿ ಹೊಂದಿದ ರಾಷ್ಟ್ರ ! ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಔಷಧಿಗಳ ಮಾರುಕಟ್ಟೆಗಳೂ ಈ ಅಮೇರಿಕಾದಲ್ಲಿಯೇ ಇವೆ; ಆದರೆ ದುರದೃಷ್ಟವಶಾತ್‌ ಇಂದು ಅಲ್ಲಿ ಔಷಧಿಗಳ ಕೊರತೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮತ್ತು ಪ್ರಗತಿಯ ಶಿಖರಗಳನ್ನು ತಲುಪಿದ ಈ ಒಂದು ದೇಶದ ಸಂದರ್ಭದಲ್ಲಿ ಈ ರೀತಿ ಘಟಿಸುವುದು ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದೆ; ಆದರೆ ಇದು ವಾಸ್ತವವಾಗಿದೆ. ದೊಡ್ಡ ದೊಡ್ಡ ರೋಗಗಳು ಮತ್ತು ಅವುಗಳ ಚಿಕಿತ್ಸಾ ಪದ್ಧತಿಯ ಔಷಧಿಗಳೂ ಅಮೇರಿಕಾದಲ್ಲಿ ಸಿಗುತ್ತಿಲ್ಲ. ಅಮೇರಿಕಾದ ಈ ಸ್ಥಿತಿ ಅಪಾಯಕಾರಿ ಮತ್ತು ಅಷ್ಟೇ ಚಿಂತಾಜನಕವೂ ಆಗಿದೆ; ಆದುದರಿಂದಲೇ ಈ ವಿಷಯ ಸದ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ಭಾರತವು ಇದನ್ನು ಒಂದು ದೊಡ್ಡ ಅವಕಾಶವೆಂದು ನೋಡಬೇಕು; ಏಕೆಂದರೆ ಅಮೇರಿಕಾದ ಔಷಧಿ ಉತ್ಪಾದನೆಯ ವ್ಯಾಪಾರವು ಮುಖ್ಯವಾಗಿ ಭಾರತ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳ ಲಾಗುವ ಔಷಧಿ ಉತ್ಪಾದನೆಗಳ ಘಟಕಗಳ ಮೇಲೆ ಅವಲಂಬಿಸಿದೆ. ಈಗಿರುವ ಪರಿಸ್ಥಿತಿಯನ್ನು ಪರಿಗಣಿಸಿ ಭಾರತ ಈ ಅವಕಾಶದ ಲಾಭಪಡೆದು ಈ ಕ್ಷೇತ್ರದಲ್ಲಿ ಗಣನೀಯ ಮಾರ್ಗಕ್ರಮಣ ಮಾಡಬೇಕು. ಇದಕ್ಕಾಗಿ ಅಮೇರಿಕಾದ ಔಷಧಿ ಸಂಸ್ಥೆಗಳನ್ನು ಮೆಟ್ಟಿನಿಂತು ತಮ್ಮ ಪ್ರಾಬಲ್ಯವನ್ನು ನಿರ್ಮಿಸಬೇಕಾಗುತ್ತದೆ. ಭಾರತ ದಲ್ಲಿ ಔಷಧಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿದರೆ ನಾವೂ ಅಮೇರಿಕಾದ ಏಟಿಗೆ ಎದುರೇಟಿನ ಪ್ರತ್ಯುತ್ತರ ನೀಡಬಹುದು. ಅದರಿಂದ ಭಾರತದ ವ್ಯಾಪಾರವನ್ನು ಹೆಚ್ಚಿಸಬಹುದು ! ಸದ್ಯ ಕೆಲವು ಹೆಸರಾಂತ ಔಷಧಿಯ ಸಂಸ್ಥೆಗಳು ದೇಶದ ಹೊರಗೆ ಉತ್ತಮ ಆದಾಯ ಗಳಿಸುತ್ತಿವೆ. ಭಾರತ ಮೇಲಿನ ಹೆಜ್ಜೆಯನ್ನಿಟ್ಟರೆ ಅದಕ್ಕೆ ಬಹಳ ಲಾಭವಾಗುವುದು. ಭಾರತ ಈಗ ಅನೇಕ ಕ್ಷೇತ್ರಗಳಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಗಳಲ್ಲಿ ಭಾರತವು ಸ್ವಾವಲಂಬಿಯಾಗುತ್ತಿದೆ. ಔಷಧಿಗಳ ಉತ್ಪಾದನೆ ಗಳಲ್ಲಿಯೂ ಇದೇ ರೀತಿಯ ಕಾರ್ಯಕ್ಷಮತೆಯನ್ನು ತೋರಿಸಿದರೆ ಜಗತ್ತಿನ ಅತಿ ದೊಡ್ಡ ಔಷಧಿಗಳ ಮಾರುಕಟ್ಟೆಯೆಂದು ಪ್ರಸಿದ್ಧಿ ಪಡೆದ ಅಮೇರಿಕಾದ ಏಕಸ್ವಾಮ್ಯವನ್ನು ಕೊನೆಗೊಳಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಅಮೇರಿಕಾದ ವೈದ್ಯಕೀಯ ಅಸ್ಥಿರತೆ !

ಮಾರುಕಟ್ಟೆಯಲ್ಲಿ ಔಷಧಿಗಳ ಬೆಲೆ ಏರತೊಡಗಿದವು. ಸಹಜವಾಗಿ ಅದರ ಅವುಗಳ ಉತ್ಪಾದನೆಯ ಮೇಲೆ ಪರಿಣಾಮವಾಗ ತೊಡಗಿತು. ರಷ್ಯಾ-ಉಕ್ರೇನ್‌ನ ಭಯಾನಕ ಪರಿಸ್ಥಿತಿಯು ಔಷಧಿ ಗಳ ಪೂರೈಕೆಯ ಸರಪಳಿಯನ್ನು ನಿಧಾನಗೊಳಿಸಿದೆ. ಹೊಸ ಔಷಧಿಗಳ ಉತ್ಪಾದನೆ ಮಾಡಬೇಕಿದ್ದರೆ, ಅದಕ್ಕೆ ಬೇಕಾಗುವ ಆಡಳಿತಾತ್ಮಕ ಪರವಾನಗಿಯನ್ನು ಪಡೆಯುವ ಪ್ರಕ್ರಿಯೆಯು ಬಹಳ ಜಟಿಲವಾಗಿದೆ. ಆದುದರಿಂದ ಆ ಪ್ರಕ್ರಿಯೆಯಲ್ಲಿ ಪ್ರವೇಶಿಸುವುದು ಯಾರಿಗೇ ಆದರೂ ಕಷ್ಟವಾಗುತ್ತದೆ. ಔಷಧಿಗಳ ಉತ್ಪಾದನೆಗಾಗಿ ಅಮೇರಿಕಾದಲ್ಲಿ ಪ್ರೋತ್ಸಾಹವನ್ನು ನೀಡಲಾಗು ವುದಿಲ್ಲ. ಒಟ್ಟಾರೆ, ಉತ್ಪಾದನೆಗಳ ಕೊರತೆ ಮತ್ತು ಮೇಲಿನ ಸಮಸ್ಯೆಗಳಿಂದಾಗಿ ಕೊನೆಗೆ ಔಷಧೀಯ ಸಂಸ್ಥೆಗಳು ನಿಧಾನ ವಾಗಿ ತಮ್ಮ ಉತ್ಪಾದನೆಗಳನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡವು. ಔಷಧಿಯೇ ಸಿಗದಿದ್ದರೆ ಯಾವುದೋ ಜೀವ ಸಂಕಟಕ್ಕೊಳಗಾಗಬಹುದು. ಆದುದರಿಂದ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಔಷಧಿಗಳನ್ನು ಸಂಗ್ರಹಿಸಿದರು. ಪಾಪ ಜನರಾದರೂ ಇನ್ನೇನು ಮಾಡುವರು ? ನಿಜವಾಗಿಯೂ ಜನರಿಗೆ ಇಂತಹ ಸ್ಥಿತಿ ಬರದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿಯಾಗಿದೆ. ತುರ್ತು ಸ್ಥಿತಿ ಸೃಷ್ಟಿಯಾದರೆ ಮನೆಯಲ್ಲಿಯೇ ಔಷಧಿಗಳು ಲಭ್ಯವಾಗುವವು; ಆದರೆ ಈ ಸಂಗ್ರಹವನ್ನು ಎಷ್ಟು ಕಾಲ ಮನೆಯಲ್ಲಿಟ್ಟುಕೊಳ್ಳಲು ಸಾಧ್ಯ ? ಏಕೆಂದರೆ ಇದರಿಂದ ಔಷಧಿಗಳ ಗುಣಮಟ್ಟದ ಮೇಲೆ ಪರಿಣಾಮವಾದರೆ ಅದಕ್ಕೆ ಯಾರು ಹೊಣೆ ?

ಅಮೇರಿಕಾದಲ್ಲಿ ಕೇವಲ ಔಷಧಿಗಳದ್ದಷ್ಟೇ ಅಲ್ಲ, ಆದರೆ ಆಧುನಿಕ ವೈದ್ಯರ ಅಭಾವವೂ ಇದೆ. ಆದುದರಿಂದ ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿಯೂ ಇದರ ಪರಿಣಾಮ ಕಂಡು ಬರುತ್ತದೆ. ಆಧುನಿಕ ವೈದ್ಯರೇ ಲಭ್ಯವಿಲ್ಲದಿರುವಾಗ ಯಾವುದೇ ರೋಗಕ್ಕೆ ಸಂಬಂಧಿಸಿದಂತೆ ಹೆಸರು ನೋಂದಾಯಿಸುವುದಿದ್ದರೆ, ಅದಕ್ಕೆ ೧ ತಿಂಗಳು ಮೊದಲೇ ನೋಂದಣಿ ಮಾಡ ಬೇಕಾಗುತ್ತದೆ. ೧ ತಿಂಗಳ ನಂತರ ಸಂಬಂಧಿತ ರೋಗಿಯ ಸರದಿ ಬರುತ್ತದೆ. ಸಾಕಷ್ಟು ಆಧುನಿಕ ವೈದ್ಯರಿಲ್ಲದ ಕಾರಣ ಆಸ್ಪತ್ರೆಗಳಲ್ಲಿ, ಚಿಕಿತ್ಸಾಲಯಗಳಲ್ಲಿ ರೋಗಿಗಳ ಬಹಳ ದೊಡ್ಡ ಸಾಲು ಕಂಡು ಬರುತ್ತವೆ. ಕೆಲವೊಮ್ಮೆ ಯಾರಾದರೂ ರೋಗಿಯು ಗಂಭೀರ ಅಥವಾ ಮರಣ್ಮೋಖನಾಗಿದ್ದರೆ ಅವನಿಗೂ ಸಕಾಲದಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಸ್ವಲ್ಪದರಲ್ಲಿ, ಅಮೇರಿಕಾದಲ್ಲಿ ಆರೋಗ್ಯ ವ್ಯವಸ್ಥೆಯೇ ಹದಗೆಟ್ಟಿರುವುದು ಕಾಣಿಸುತ್ತದೆ.

ದೇಶದಲ್ಲಿ ಎಲ್ಲೆಡೆಯ ಆರೋಗ್ಯ ಇಲಾಖೆಗಳು ಸಕ್ಷಮವಾಗಿ ಕಾರ್ಯನಿರತರಾಗಿರುವುದು, ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪೂರ್ಣ ಸಾಮರ್ಥ್ಯದಿಂದ ಎದುರಿಸುವುದು, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಚಿಕಿತ್ಸಾಪದ್ಧತಿಗಳು ಅಭಿವೃದ್ಧಿಯಾಗುವುದು, ಇವು ಸಾಧ್ಯವಾದರೆ ಮಾತ್ರ ನಾಗರಿಕರ ಆರೋಗ್ಯ ಚೆನ್ನಾಗಿ ಉಳಿಯಬಹುದು. ಇದರಿಂದಲೇ ವ್ಯಕ್ತಿಯು ನಿರೋಗಿ ಮತ್ತು ರೋಗಮುಕ್ತ ಜೀವನವನ್ನು ಜೀವಿಸಬಹುದು. ಪ್ರತಿಯೊಬ್ಬರ ಆರೋಗ್ಯ ಸ್ವಾಸ್ಥ್ಯ ಉತ್ತಮವಾಗಿರುವುದು, ಇದು ದೇಶದ ಪರೋಕ್ಷ ಬುನಾದಿಯೇ ಆಗಿದೆ; ಆದರೆ ಅಮೇರಿಕಾದ ವಿಷಯದಲ್ಲಿ ಅದು ಹೊಯ್ದಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಕಟಗಳು ಅಮೇರಿಕಾದ ಮುಂದೆ ನಿಂತಿವೆ. ಅಮೇರಿಕಾ ದಂತಹ ದೇಶದಲ್ಲಿ ವೈದ್ಯಕೀಯ ಮಟ್ಟದಲ್ಲಿ ಇಂತಹ ತುರ್ತು ಪರಿಸ್ಥಿತಿ ಉತ್ಪನ್ನವಾಗುವುದು ಯೋಗ್ಯವಲ್ಲ. ಅಮೇರಿಕಾ ತಾನು ಎಲ್ಲ ಮಟ್ಟಗಳಲ್ಲಿ ಸಾಮರ್ಥ್ಯಶಾಲಿಯೆಂದು ಮೆರೆಯುತ್ತದೆ; ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಗಳ ದೃಷ್ಟಿಯಿಂದ ಅದರ ಕ್ಷಮತೆಗೂ ಮಿತಿ ಇರುವುದು ಕಂಡು ಬರುತ್ತದೆ. ಅನೇಕ ಭಾರತೀಯರಿಗೆ ಅಮೇರಿಕಾಗೆ ಹೋಗಬೇಕು, ಅಲ್ಲಿ ನೆಲೆಗೊಳ್ಳಬೇಕು, ಭಾರತಕ್ಕಿಂತ ಅಮೇರಿಕಾ ಶ್ರೇಷ್ಠವಾಗಿದೆ’, ಎಂದು ಅನಿಸುತ್ತಿರಬಹುದು; ಆದರೆ ಮೇಲಿನ ಸ್ವರೂಪದಲ್ಲಿ ಪ್ರಸ್ತುತ ಪಡಿಸಲಾದ ಘಟನೆಗಳನ್ನು ನೋಡಿದರೆ ಭಾರತವು ಎಷ್ಟು ಮಹಾನ ಇದೆ, ಎಂಬುದನ್ನು ಆಳವಾಗಿ ವಿಚಾರ ಮಾಡಿದರೆ ಮಾತ್ರ, ಅದರಿಂದ ಅಮೇರಿಕಾದ ನಿಜಸ್ವರೂಪ ಬಹಿರಂಗವಾಗುವುದು. ಅಭಿವೃದ್ಧಿಯ ಬಗ್ಗೆ ದೊಡ್ಡದಾಗಿ ಮಾತನಾಡಿದರೆ, ಶ್ರೀಮಂತಿಕೆಯ ಹೊಳಪನ್ನು ತೋರಿಸಿದರೆ, ತಮ್ಮ ಬೆನ್ನು ತಟ್ಟಿಕೊಳ್ಳಬಹುದು; ಆದರೆ ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಯಾದ ಟೊಳ್ಳುತನ ಅಮೇರಿಕದ ವಾಸ್ತವವನ್ನು ಜಗತ್ತಿನೆದುರು ತರುವುದನ್ನು ತಡೆಯುವುದಿಲ್ಲ. ಔಷಧಿಗಳ ಉತ್ಪಾದನೆಯಲ್ಲಿ ಭಾರತವು ನೇತೃತ್ವ ವಹಿಸಿದರೆ ವೈದ್ಯಕೀಯ ದೃಷ್ಟಿಯಿಂದ ದುರ್ಬಲವಾಗಿರುವ ಅಮೇರಿಕಾಗೆ ಭಾರತದ ಮೇಲೆ ಅವಲಂಬಿಸುವುದನ್ನು ಬಿಟ್ಟು ಬೇರೆ ಪರ್ಯಾಯವೇ ಉಳಿಯಲಾರದು !

ಅಮೇರಿಕಾ ಅಭಿವೃದ್ಧಿ ಹೊಂದಿದ ದೇಶವಂತೆ !

ಅಮೇರಿಕಾ ತನ್ನನ್ನು ತಾನು ಅಭಿವೃದ್ಧಿ ಹೊಂದಿದ ದೇಶವೆಂದು ಅಂದುಕೊಂಡರೂ, ಆ ಅಭಿವೃದ್ಧಿಯ ಅರ್ಧಕ್ಕಿಂತ ಹೆಚ್ಚು ಬುನಾದಿಯು ಭಾರತಿಯರ ಮೇಲೆಯೇ ಅವಲಂಬಿಸಿದೆ; ಏಕೆಂದರೆ ಭಾರತದಿಂದ ಅಮೇರಿಕಾಗೆ ಸ್ಥಳಾಂತರಗೊಂಡ ಬುದ್ಧಿವಂತ ಭಾರತೀಯರಿಂದಾಗಿಯೇ ಅಮೇರಿಕಾದಲ್ಲಿ ಅಭ್ಯುದಯವಾಗಿದೆ, ಎಂದು ಅಲ್ಲಿನ ಸ್ಥಳೀಯ ನಾಗರಿಕರೇ ಹೇಳುತ್ತಾರೆ. ಹೀಗಿರುವಾಗ ತನ್ನ ಶ್ರೇಷ್ಠತೆಯನ್ನು ಮೆರೆಸುವುದು ಅಯೋಗ್ಯವಲ್ಲವೇ ? ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಭಾರತವು ಅನೇಕ ದೇಶಗಳಿಗೆ ಲಸಿಕೆಗಳನ್ನು ಪೂರೈಸಿತ್ತು ಮತ್ತು ಅಂತಾರಾಷ್ಟ್ರೀಯ ಜಗತ್ತಿನಲ್ಲಿ ‘ಮಾನವತಾವಾದಿ’ ಎಂಬ ಸ್ಥಾನ ಪ್ರಾಪ್ತಮಾಡಿ ಕೊಂಡಿತು. ಅದೇ ಕಾಲಾವಧಿಯಲ್ಲಿ ಎಲ್ಲೆಡೆ ‘ರೆಮಡೆಸಿವಿರ್’ ಈ ಇಂಜೆಕ್ಶನ್‌ನ ದೊಡ್ಡ ಅಭಾವವಿತ್ತು; ಆದರೆ ಅಮೇರಿಕಾ ಈ ಇಂಜೆಕ್ಷನ್ನ್ನು ತನ್ನ ದೇಶದಲ್ಲಿ ಉತ್ಪಾದಿಸುತ್ತಿದ್ದರೂ ರಫ್ತಿಗೆ  ನಿಷೇಧ ಹೇರಿತ್ತು. ಇದರಿಂದಲೇ ಅಮೇರಿಕಾದ ಸ್ವಾರ್ಥಿ ಮನೋ ವೃತ್ತಿ ಕಂಡು ಬರುತ್ತದೆ. ಅಮೇರಿಕಾದಲ್ಲಿ ಶ್ರೀಮಂತಿಕೆ, ಅಭಿವೃದ್ಧಿ, ವೈಜ್ಞಾನಿಕ ಪ್ರಗತಿ ಸಾಧ್ಯವಾಗಿದ್ದರೂ, ಆರ್ಥಿಕ, ಸಾಮಾಜಿಕ, ವೈದ್ಯಕೀಯ ಈ ಕ್ಷೇತ್ರಗಳಲ್ಲಿ ಅಲ್ಲಿನ ವ್ಯವಸ್ಥೆಗೆ ಇಂದಿಗೂ ಸಮತೋಲನ ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದ ಅಲ್ಲಿನ ನಾಗರಿಕರು ಅಸಮಾಧಾನದಲ್ಲಿದ್ದಾರೆ. ಅಮೇರಿಕಾದ ಈ ಸದ್ಯದ ಸ್ಥಿತಿಯನ್ನು ಗಮನದಲ್ಲಿಡಬೇಕು. ಅಭಿವೃದ್ಧಿಯ ನಗಾರಿಯನ್ನು ಬಾರಿಸುವ ಅಮೇರಿಕಾದ ನಿಜ ಸ್ವರೂಪವನ್ನು ಗುರುತಿಸಿ ಭಾರತ ಸರಿಯಾದ ಬೋಧನೆ ತೆಗೆದುಕೊಂಡು ಮುನ್ನಡೆಯುವುದು ಸೂಕ್ತ !