ಲಾವೋಸನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದಾಗಿ ಕೆನಡಾ ಪ್ರಧಾನಿಯವರ ದಾವೆಯನ್ನು ತಿರಸ್ಕರಿಸಿದ ಭಾರತ !

ವಿಯೆಂಟಿಯನ (ಲಾವೋಸ) – ಥೈಲ್ಯಾಂಡ್ ಪಕ್ಕದಲ್ಲಿರುವ ಲಾವೋಸ ದೇಶದಲ್ಲಿ ಇತ್ತೀಚೆಗೆ ಪೂರ್ವ ಏಷ್ಯಾ ಶೃಂಗಸಭೆ (‘ಏಶಿಯಾನ’) ಆಯೋಜಿಸಲಾಗಿತ್ತು. ಈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿದ್ದಾರೆ. ‘ಈ ಸಭೆಯಲ್ಲಿ ಮಹತ್ವದ ಅಂಶಗಳ ಮೇಲೆ ಕೆಲಸ ಮಾಡಲು ಚರ್ಚಿಸಲಾಗಿದೆಯೆಂದೂ’ ಅವರು ಹೇಳಿದರು. ಆದರೆ ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ಉಭಯ ನಾಯಕರಲ್ಲಿ ಇಂತಹ ಯಾವುದೇ ಭೇಟಿಯಾಗಿಲ್ಲ ಎಂದು ತಿಳಿಸಿದೆ.

1. ಕಳೆದ ವರ್ಷ ಪ್ರಧಾನಿ ಟ್ರುಡೋ ಇವರು ಭಾರತದ ಮೇಲೆ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಇವರ ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದರು. ತದನಂತರ ಉಭಯ ದೇಶಗಳ ಸಂಬಂಧದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು.

2. ಕೆನಡಾದ ವಿದೇಶಾಂಗ ಸಚಿವ ಮೆಲನಿ ಜೋಲಿಯವರು ಒಂದು ದಿನದ ಹಿಂದೆಯಷ್ಟೇ ‘ಕೆನಡಾದ ಭಾರತದೊಂದಿಗಿನ ಸಂಬಂಧ` ಉದ್ವೇಗಪೂರ್ಣ ಮತ್ತು ಬಹಳ ಪ್ರಕ್ಷುಬ್ದತೆಯಿಂದ ಕೂಡಿದೆ’ಯೆಂದು ಹೇಳಿದ್ದರು. ಮೆಲನಿಯವರು ಮಾತನಾಡಿ, ಸರಕಾರ ನಿಜ್ಜರನ ಹತ್ಯೆಯ ತನಿಖೆಗಾಗಿ ಭಾರತದ ನೆರವನ್ನು ಪಡೆಯುತ್ತಿದೆ. ಆದರೆ ಭಾರತದಿಂದ ಇದುವರೆಗೂ ಸಹಾಯ ದೊರಕಿಲ್ಲ. ನಾವು ಕೆನಡಾದ ಜನರ ಭದ್ರತೆಯ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಟ್ರುಡೊ ಇವರ ಸುಳ್ಳುತನವೂ ಈಗ ಬಹಿರಂಗವಾಗಿರುವುದು ಇದರಿಂದ ಗಮನಕ್ಕೆ ಬರುತ್ತದೆ ! ಇಂತಹ ದೇಶದ ಪ್ರಧಾನಿಯೊಂದಿಗೆ ಭಾರತವು ಸಂಬಂಧವನ್ನಾದರೂ ಏಕೆ ಇಟ್ಟುಕೊಳ್ಳಬೇಕು ?