ಭಗವಂತನ ಸ್ಮರಣೆ ಇದ್ದರೆ, ಅಹಂಕಾರ ತೊಂದರೆ ಕೊಡುವುದಿಲ್ಲ !

ನಮ್ಮಲ್ಲಿ ಒಳ್ಳೆಯ ಗುಣಗಳು ಬಂದರೆ ‘ಆ ಗುಣಗಳು ಯೋಗೇಶ್ವರ ಭಗವಾನನು ನನ್ನ ಬೆನ್ನಿಗೆ ನಿಂತಿದ್ದಾನೆ ಆದುದರಿಂದ ಬಂದಿವೆ’, ಈ ಭಾವನೆ ಇರಬೇಕು. ಈ ಭಾವನೆ ಇದ್ದರೆ, ಅಹಂಕಾರದ ತೊಂದರೆ ಆಗುವುದಿಲ್ಲ. ಆದುದರಿಂದ ಅಹಂಕಾರ ಬಂದರೂ, ‘ಅದರ ಕಾರಣದ ಹಿಂದೆ ಈಶ್ವರೀಶಕ್ತಿ ಇದೆ’, ಎಂದು ಯಾವಾಗಲೂ ಅರಿಯನ್ನು ಇಟ್ಟುಕೊಳ್ಳಿರಿ. ಭವಸಾಗರದ ಕೊನೆಯ ತುದಿ ಅಂದರೆ ಅಹಂಕಾರ. ಈ ಜಗತ್ತಿನಲ್ಲಿ ೨ ತುದಿಗಳಿವೆ. ಒಬ್ಬ ಗುಲಾಮ ಇನ್ನೊಬ್ಬ ರಾಜ. ಯಾರು ಹೆಂಡತಿಯ, ಅಧಿಕಾರದ ಅಥವಾ ಇತರರ ವಶವಾದರೋ, ಅವರು ಗುಲಾಮ ಮತ್ತು ಯಾರು ಭಗವಂತನವರಾದರೋ, ಅವರು ರಾಜ. ಆದುದರಿಂದ ಒಂದು ವಿಷಯವನ್ನು ಗಮನದಲ್ಲಿಡಬೇಕು, ‘ಗುಣ, ಅಧಿಕಾರ ವನ್ನು ನೀಡುವ ಯಾವುದಾದರೊಂದು ಶಕ್ತಿ ಇದೆ. ಅದರ ವಿಸ್ಮರಣೆಯಾಗಬಾರದು. ಅದು ಆಗದಿದ್ದರೆ ಅಹಂಕಾರ ತೊಂದರೆ ನೀಡುವುದಿಲ್ಲ.’

(ಆಧಾರ : ಗ್ರಂಥ ‘ಭಾರತೀಯರ ಸಾಂಸ್ಕೃತಿಕ ಆದರ್ಶ ಜೀವನ’ – ಪ.ಪೂ. ಪಾಂಡುರಂಗಶಾಸ್ತ್ರಿ ಆಠವಲೆಯವರ ಪ್ರವಚನಗಳು)

ಪರಿಶ್ರಮದಿಂದ ಸಂಪತ್ತನ್ನು ಪ್ರಾಪ್ತಮಾಡಿಕೊಳ್ಳಬೇಕು, ಎಂದು ಹೇಳುವ ಶ್ರೇಷ್ಠ ಭಾರತೀಯ ಸಂಸ್ಕೃತಿ !

‘ತಂದೆಯ ಸಂಪತ್ತು (ಆಸ್ತಿ) ಸಿಕ್ಕರೆ, ಅದನ್ನು ಭಗವಂತನ ಕೆಲಸಕ್ಕಾಗಿ ಬಳಸಿರಿ ಮತ್ತು ನೀವು ನಿಮ್ಮ ಸ್ವಂತ ಪರಿಶ್ರಮದಿಂದ ಸಂಪತ್ತನ್ನು ಗಳಿಸಿರಿ’, ಎಂದು ಭಾರತಿಯ ಸಂಸ್ಕೃತಿ ಹೇಳುತ್ತದೆ.’

(ಆಧಾರ : ಗ್ರಂಥ ‘ಭಾರತೀಯರ ಸಾಂಸ್ಕೃತಿಕ ಆದರ್ಶ ಜೀವನ’ – ಪ.ಪೂ. ಪಾಂಡುರಂಗಶಾಸ್ತ್ರೀ ಆಠವಲೆಯವರ ಪ್ರವಚನಗಳು)