ಮದರಸಾಗಳಿಗೆ ಸರಕಾರಿ ಹಣ ನೀಡಬೇಡಿ, ಮದರಸಾ ಬೋರ್ಡ್ ವಿಸರ್ಜಿಸಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ ಇವರಿಂದ ರಾಜ್ಯ ಸರಕಾರಗಳಿಗೆ ಪತ್ರ

ನವ ದೆಹಲಿ – ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ(ನ್ಯಾಷನಲ್ ಕಮಿಷನ್ ಫಾರ್ ಚೈಲ್ಡ್ ಪ್ರೊಟೆಕ್ಷನ್ ನ) ಅಧ್ಯಕ್ಷ ಪ್ರಿಯಾಂಕ ಕಾನೂನಗೊ ಇವರು ಮದರಸಾಗಳಿಗೆ ರಾಜ್ಯ ಸರಕಾರದಿಂದ ಸಿಗುವ ಹಣವನ್ನು ನಿಲ್ಲಿಸುವುದು ಹಾಗೂ ಮದರಸಾ ಬೋರ್ಡ್ ಕೂಡ ನಿಲ್ಲಿಸಬೇಕೆಂದು ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಶಾಸಕ ಪ್ರದೇಶದ ಮುಖ್ಯ ಸಚಿವರಿಗೆ ಪತ್ರ ಕೂಡ ಬರೆದಿದ್ದಾರೆ.

ಅವರು ಪತ್ರದಲ್ಲಿ ಮದರಸಾದ ಸಂದರ್ಭದಲ್ಲಿನ ಆಯೋಗದ ವರದಿಯ ಆಧಾರ ನೀಡಿದ್ದಾರೆ. ಹಾಗೂ ಈ ಪತ್ರದಲ್ಲಿ ಪ್ರಿಯಾಂಕ ಕಾನೂನಗೊ ಇವರು ಮದರಸಾದಿಂದ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ಸೇರಿಸುವ ಅವಶ್ಯಕತೆಯ ಬಗ್ಗೆ ಒತ್ತು ನೀಡಿದ್ದಾರೆ. ಪ್ರಿಯಾಂಕ ಕಾನೂನಗೊ ಇವರ ಪ್ರಕಾರ, ಇದರಿಂದ ದೇಶದಲ್ಲಿನ ಎಲ್ಲಾ ಮಕ್ಕಳ ಭವಿಷ್ಯಕ್ಕಾಗಿ ಅನುಕೂಲ ವಾತಾವರಣ ನಿರ್ಮಾಣವಾಗುವುದು. ಈ ಪತ್ರದಲ್ಲಿ ಕಾನೂನಗೊ ಇವರು ಚಿಕ್ಕ ಮಕ್ಕಳ ಮೂಲಭೂತ ಹಕ್ಕು ಮತ್ತು ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳು ಇದರಲ್ಲಿ ಆಬಾಸ ಕಾಣುತ್ತಿದೆ ಎಂದು ದಾವೆ ಮಾಡಿದ್ದಾರೆ. ಅದರ ಕಾರಣ ಸ್ಪಷ್ಟಪಡಿಸುವಾಗ ಅವರು, ಮದರಸಾಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಭಾಜಪ ಸರಕಾರ ಇದೆ. ಅವರು ಮೊದಲು ಮದರಸಾಗಳಿಗೆ ನೀಡುವ ಕೋಟ್ಯಾಂತರ ರೂಪಾಯಿ ಆರ್ಥಿಕ ಸಹಾಯ ನಿಲ್ಲಿಸಿ ಮದರಸಾ ಬೋರ್ಡ್ ವಿಸರ್ಜಿಸಿದರೆ, ಇತರ ಪಕ್ಷದ ಸರಕಾರ ಇರುವ ರಾಜ್ಯಗಳಲ್ಲಿ ಕೂಡ ಹೀಗೆ ಮಾಡಲು ಒತ್ತಡ ನಿರ್ಮಾಣವಾಗುವುದು !