ಈಗ ಬಾಂಗ್ಲಾದೇಶ ಅಲ್ಲ, ಕೊಲಕೊತಾದಲ್ಲೇ ಮುಸಲ್ಮಾನರು ದುರ್ಗಾಪೂಜಾ ಮಂಟಪದಲ್ಲಿ ನುಗ್ಗಿ ಬೆದರಿಕೆ !

ಅಜಾನ ನಡೆಯುತ್ತಿರುವುದರಿಂದ ಧ್ವನಿವರ್ಧಕಗಳನ್ನು ನಿಲ್ಲಿಸುವಂತೆ ಬೆದರಿಕೆ

ಕೋಲಕಾತಾ (ಬಂಗಾಳ) – ಇಲ್ಲಿನ ಗಾರ್ಡನರೀಚ ಪ್ರದೇಶದಲ್ಲಿ ಒಂದು ದುರ್ಗಾಪೂಜೆಯ ಮಂಟಪದಲ್ಲಿ ಮುಸಲ್ಮಾನ ಹುಡುಗರು ನುಗ್ಗಿ `ಅಜಾನ ನಡೆಯುತ್ತಿದೆ ಆದ್ದರಿಂದ ಧ್ವನಿವರ್ಧಕ ನಿಲ್ಲಿಸಿರಿ’, ಎಂದು ಬೆದರಿಕೆ ಹಾಕಿದರು. ಈ ಸಮಯದಲ್ಲಿ ದುರ್ಗಾಪೂಜೆಯ ಆಯೋಜಕರು ಮತ್ತು ಮುಸಲ್ಮಾನ ಹುಡುಗರ ನಡುವೆ ವಿವಾದ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಿದಾಗ ಪೊಲೀಸರು ಘಟನಾಸ್ಥಳವನ್ನು ತಲುಪಿ ಘಟನೆಯ ಮಾಹಿತಿಯನ್ನು ಪಡೆದರು. ಪೊಲೀಸರು ದುರ್ಗಾಪೂಜೆಯ ಆಯೋಜಕರ ದೂರಿನ ಮೇರೆಗೆ 2 ಅಪರಿಚಿತರ ವಿರುದ್ಧ ಅಪರಾಧ ದಾಖಲಿಸಿದರು.

ಇದು ಕೋಲಕಾತಾ, ಢಾಕಾ ಅಲ್ಲ. ಎನ್ನುವುದನ್ನು ಪೊಲೀಸರು ತೋರಿಸಬೇಕು ! – ಭಾಜಪ

ಈ ಘಟನೆಯ ವಿಡಿಯೋ ರಾಜ್ಯ ವಿರೋಧ ಪಕ್ಷದ ನಾಯಕ ಹಾಗೂ ಭಾಜಪ ಶಾಸಕ ಶುಭೇಂದು ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಕೋಲಕಾತಾ ಪೊಲೀಸ ಆಯುಕ್ತರಿಗೆ ಈ ವಿಷಯದಲ್ಲಿ ಟ್ಯಾಗ್ ಮಾಡಿ ‘ದುರ್ಗಾಪೂಜೆ ಮಂಟಪದಲ್ಲಿ ಗೂಂಡಾಗಳು ಹೇಗೆ ತಲುಪಿದರು? ಈ ಗೂಂಡಾಗಳು ದುರ್ಗಾಮಾತೆಯ ಮೂರ್ತಿಯನ್ನು ಧ್ವಂಸಗೊಳಿಸುವ ಬೆದರಿಕೆಯನ್ನು ಹಾಕುತ್ತಿದ್ದರು. ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಆಯೋಜಕರು ಪ್ರಸಾರ ಮಾಡಿದ್ದಾರೆ. ಕೋಲಕಾತಾ ಪೊಲೀಸ ಆಯುಕ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಇದೆ. ಹಾಗೆಯೇ ‘ಇದು ಕೋಲಕಾತಾ, ಢಾಕಾ ಅಲ್ಲ’ ಎಂದು ತೋರಿಸುವರು ಎಂದು ಶುಭೇಂದು ಅಧಿಕಾರಿಯವರು ಹೇಳಿದ್ದಾರೆ.

ಆಯೋಜಕರಾದ ಅಶೋಕ ಸಾಧುಖಾನ ಇವರು, ಮಂಟಪದಲ್ಲಿ 50 ರಿಂದ 60 ಮುಸಲ್ಮಾನ ಹುಡುಗರು ಬಂದು ಮಹಿಳೆಯರ ಮೈಮೇಲೆ ಕೈಯೆತ್ತಿದರು, ಅವರನ್ನು ನೂಕಿದರು ಮತ್ತು ಕೆಳಗೆ ಬೀಳಿಸಿದರು.