ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯಾದ ನಂತರ ಅದು ಭಾರತ ವಿರೋಧಿ ಆಗಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಈಗ ಚೀನಾದ ನೌಕಾಪಡೆ ಅಕ್ಟೋಬರ್ ೧೨ ರಂದು ಬಾಂಗ್ಲಾದೇಶದ ಚಿತಗಾವ ಬಂದರಕ್ಕೆ ಭೇಟಿ ನೀಡಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರ ಅಧಿಕಾರಕ್ಕೆ ಬಂದ ನಂತರ ಇದು ದೇಶಕ್ಕೆ ಬಂದಿರುವ ಮೊದಲ ವಿದೇಶಿ ಪಡೆ ಆಗಿದೆ.
ಚೀನಾದ ರಾಯಭಾರಿಯಿಂದ ಒಂದು ಮನವಿಯಲ್ಲಿ, ಬಾಂಗ್ಲಾದೇಶದ ದೇಶಾಂತರ್ಗತದ ಪರಿಸ್ಥಿತಿಯಲ್ಲಿನ ಬದಲಾವಣೆಯನ್ನು ಲೆಕ್ಕಿಸದೆ ಚೀನಾ ಬಾಂಗ್ಲಾದೇಶ ಸಂಬಂಧ ವಿಕಸಿತಗೊಳಿಸುವುದಕ್ಕಾಗಿ ಚೀನಾದ ವಚನ ಬದ್ಧತೆ ಹಾಗೆಯೇ ಇದೆ. ಚೀನಾ ತನ್ನ ಪಾರಂಪಾರಿಕ ಸ್ನೇಹ ದೃಢಗೊಳಿಸುವುದಕ್ಕಾಗಿ, ಮೈತ್ರಿ ಪೂರ್ಣ ವ್ಯವಹರಿಸಲು ಮತ್ತು ವಿವಿಧ ಕ್ಷೇತ್ರದಲ್ಲಿ ಪರಸ್ಪರ ಲಾಭದಾಯಕ ಸಹಕಾರ ಹೆಚ್ಚಿಸುವುದಕ್ಕಾಗಿ ಮತ್ತು ಉನ್ನತಮಟ್ಟದ ಸಾರಿಗೆ ಪ್ರಕಲ್ಪಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಬಾಂಗ್ಲಾದೇಶದ ಜೊತೆಗೆ ಕಾರ್ಯನಿರ್ವಹಿಸಲು ಉತ್ಸುಕವಾಗಿದೆ.
ಸಂಪಾದಕೀಯ ನಿಲುವುಚೀನಾ ಭಾರತವನ್ನು ನಾಲ್ಕು ದಿಕ್ಕಿನಿಂದಲೂ ಸುತ್ತುವರೆಯುವ ಪ್ರಯತ್ನ ಮಾಡುತ್ತಿದೆ. ಅದರದೇ ಇದು ಒಂದು ಘಟನೆ ಆಗಿದೆ. ಭಾರತವು ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದರೆ, ಆಗ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ! |