‘ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್’ನಿಂದ ನಿಷೇಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !
ಪ್ಯಾರಿಸ್ (ಫ್ರಾನ್ಸ್) – ಇಲ್ಲಿನ ‘ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್’ನಿಂದ ಆಯೋಜಿಸಿದ್ದ ದುರ್ಗಾಪೂಜಾ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ವಂಶವಿಚ್ಛೇದನವನ್ನು ನಿಷೇಧಿಸಿ ಆಂದೋಲನವನ್ನು ಆಯೋಜಿಸಲಾಯಿತು. ಆ ಸಮಯದಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ 1000 ಕ್ಕೂ ಹೆಚ್ಚು ಹಿಂದೂಗಳು ಉಪಸ್ಥಿತರಿದ್ದರು. ಫ್ರಾನ್ಸ್‌ನಲ್ಲಿರುವ ಹಿಂದೂಗಳು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ದುಃಸ್ಥಿತಿಯ ಬಗ್ಗೆ ಚಿಂತಿತರಾಗಿದ್ದಾರೆಂದು ಪ್ಯಾರಿಸ ಮಹಾಮಾಯಾ ಪೂಜಾ ಪರಿಷತ್ತು ಅಕ್ಟೋಬರ 11ರ ಸ್ಥಳೀಯ ವೇಳೆಯನುಸಾರ ರಾತ್ರಿ 8 ಗಂಟೆಗೆ ನಿಷೇಧ ಆಂದೋಲನವನ್ನು ಆಯೋಜಿಸಿದ್ದರು, ಎಂದು ‘ವರ್ಲ್ಡ ಹಿಂದೂ ಫೆಡರೇಶನ’ ಈ ಸಂಘಟನೆಯ ‘ಯುರೋಪಿಯನ್ ಯೂನಿಯನ ಚಾಪ್ಟರ’ನ ಅಧ್ಯಕ್ಷ ಶ್ರೀ. ದೀಪೆನ ಮಿತ್ರಾ ಇವರು `ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದರು.
ಈ ಪ್ರಸಂಗ ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್ತಿನ ಅಧ್ಯಕ್ಷ ಶ್ರೀ. ಸುಕಾಂತಾ ಸರಕಾರ ಮಾತನಾಡಿ, ಬಾಂಗ್ಲಾದೇಶದಲ್ಲಿ ಕೇವಲ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿಲ್ಲ. ಬದಲಾಗಿ ಬಾಂಗ್ಲಾದೇಶದಿಂದ ಅಲ್ಪಸಂಖ್ಯಾತ ಹಿಂದೂಗಳನ್ನು ಹೊರಗಟ್ಟುವ ಪ್ರಕ್ರಿಯೆಯೂ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಬೌದ್ಧರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬಾಂಗ್ಲಾದೇಶ ಸರಕಾರವನ್ನು ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಪೂರ್ಣಾ ಶರ್ಮಾ ಇವರು 1971 ರಿಂದ ಇಂದಿನವರೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿದ್ದಾರೆ. ಆಗಸ್ಟ್ 5, 2024 ರಂದು ಪ್ರಧಾನಿ ಶೇಖ ಹಸೀನಾ ಇವರು ರಾಜೀನಾಮೆ ನೀಡಿ ದೇಶವನ್ನು ತೊರೆದ ನಂತರ, ಮಾತ್ರ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ಮತ್ತು ದೇವಸ್ಥಾನಗಳ ಧ್ವಂಸ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.
‘ವರ್ಲ್ಡ ಹಿಂದೂ ಫೆಡರೇಶನ’ ನ ‘ಯುರೋಪಿಯನ್ ಯೂನಿಯನ್ ಚಾಪ್ಟರ್’ನ ಅಧ್ಯಕ್ಷ ದೀಪನ ಮಿತ್ರಾ ಮಾತನಾಡಿ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು, ಬೌದ್ಧರು ಮತ್ತು ಬುಡಕಟ್ಟು ಜನಾಂಗದವರು ಇಂದು ಸಂಕಟದಲ್ಲಿದ್ದಾರೆ. ಅವರ ಮೇಲಿನ ದಾಳಿಯ ಪ್ರತಿಯೊಂದು ಪ್ರಕರಣದಲ್ಲಿ ಅಪರಾಧಿಗಳಿಗೆ ನಿಷ್ಪಕ್ಷಪಾತ ತನಿಖೆಗೆ ಮತ್ತು ಕಠಿಣ ಶಿಕ್ಷೆ ನೀಡುವಂತೆ, ನಾನು ಕೋರುತ್ತೇನೆ. ಬಾಂಗ್ಲಾದೇಶದ ಅಸಹಾಯಕ ಹಿಂದೂಗಳ ಬೆಂಬಲಕ್ಕೆ ನಿಲ್ಲಬೇಕೆಂದರು ಅವರು ವಿಶ್ವದ ಎಲ್ಲಾ ಜನರಿಗೆ ಮನವಿ ಮಾಡಿದರು.
ನಿಷೇಧ ಚಳವಳಿಯ ಸ್ವರೂಪ !
1. 1971 ರಿಂದ ಇಂದಿನವರೆಗೆ, ಹತ್ಯೆಗೀಡಾಗಿರುವ ಎಲ್ಲ ಅಮಾಯಕ ಹಿಂದೂಗಳನ್ನು ಸ್ಮರಿಸಲು ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಮೇಲೆ ನಡೆದ ರಾಕ್ಷಸಿ ದೌರ್ಜನ್ಯದ ವಿರೋಧದಲ್ಲಿ ಒಂದು ನಿಮಿಷದ ಮೌನ ಆಚರಿಸಲಾಯಿತು.
2. ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಷೇಧಿಸಿ ಮೇಣದಬತ್ತಿಗಳನ್ನು ಉರಿಸಿದರು.
3. ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಸುಕಾಂತ ಸರಕಾರ, ಕಾರ್ಯದರ್ಶಿ ಶ್ರೀ. ಅಮರ ಮುಜುಂದಾರ್, ಮುಖ್ಯ ಸಲಹೆಗಾರರಾದ ಶ್ರೀ. ಅವನಿ ದಾಸ್, ಶ್ರೀ. ರಿಪನ ದೇಬನಾಥ ಮತ್ತು ಶ್ರೀ. ಸಂಜೀವ ಸರ್ಕಾರ ಅವರು ನಿಷೇಧ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.