ರತ್ನಾಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಲನದ ಸಮಯದಲ್ಲಿ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ ಘೋಷಣೆ!

  • ಮುಸ್ಲಿಮರ ಮೇಲೆ ಕ್ರಮಕೈಕೊಳ್ಳುವಂತೆ ಹಿಂದೂಗಳ ಆಗ್ರಹ

  • ನೂರಾರು ಹಿಂದೂಗಳು ರಾತ್ರಿಯಿಡೀ ಪೊಲೀಸ ಠಾಣೆಯಲ್ಲಿ ಧರಣಿ ಆಂದೋಲನ ನಡೆಸಿದ ನಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದರು

ರತ್ನಾಗಿರಿ – ವಿಜಯದಶಮಿಯ ಹಿಂದಿನ ದಿನ ಇಲ್ಲಿನ ಕೊಕಣನಗರ ಪ್ರದೇಶದಲ್ಲಿ ಪೊಲೀಸ ಬಂದೋಬಸ್ತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನೆಯ ಸಮಯದಲ್ಲಿ ಮುಸಲ್ಮಾನರು `ಅಲ್ಲಾಹೂ ಅಕಬರ’ ಘೋಷಣೆ ನೀಡಿದರು. ಇದರಿಂದ ‘ನಮ್ಮ ಧರ್ಮಭಾವನೆ ನೋಯಿಸುವ ಘೋಷಣೆಯನ್ನು ಕೂಗಿರುವವರ ಮೇಲೆ ತಕ್ಷಣವೇ ಕ್ರಮ ಕೈಕೊಳ್ಳಬೇಕು” ಎಂದು ಆಗ್ರಹಿಸಿ ಇಲ್ಲಿನ ಹಿಂದೂಗಳು ಪೊಲೀಸ ಠಾಣೆಯಲ್ಲಿ ಆಂದೋಲನ ನಡೆಸಿದರು. ತದನಂತರ ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸುವ ಕ್ರಮ ತಡರಾತ್ರಿ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಅಕ್ಟೋಬರ 12 ರ ಬೆಳಿಗ್ಗೆ 4 ಜನರನ್ನು ವಶಕ್ಕೆ ಪಡೆದರು.

ಹಿಂದೂಗಳು ಆಂದೋಲನದ ಮೂಲಕ ಮಾಡಿದ ಆಗ್ರಹದ ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಧನಂಜಯ ಕುಲಕರ್ಣಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಯಶ್ರೀ ಗಾಯಕವಾಡ, ಪೊಲೀಸ್ ಉಪವಿಭಾಗೀಯ ಅಧಿಕಾರಿ ನೀಲೇಶ ಮಾಯಿಣಕರ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರು.

1. ಪ್ರತಿ ವರ್ಷದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಆಡಳಿತಾತ್ಮಕ ಅನುಮತಿ ಪಡೆದ ನಂತರ ಅಕ್ಟೋಬರ್ 11 ಶುಕ್ರವಾರ ಸಂಜೆ 7 ಗಂಟೆಗೆ ಘೋಷಣೆಯೊಂದಿಗೆ ಪಥ ಸಂಚಲನವನ್ನು ಪ್ರಾರಂಭಿಸಿದರು. ಈ ಸಂಚಲನ ಕೊಕಣನಗರ, ಮಾರುತಿ ಮಂದಿರ, ಮಾಳಾನಾಕಾ ಮಾರ್ಗದ ಮೂಲಕ ರಾ.ಭಾ. ಶಿರ್ಕೆ ಪ್ರಶಾಲೆಯಲ್ಲಿ ಕೊನೆಗೊಳ್ಳುವುದರಲ್ಲಿತ್ತು.

2. ಪೊಲೀಸ್ ಬಂದೋಬಸ್ತಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಡೆದಿದ್ದ ಈ ಸಂಚಲನ ಕೊಕಣನಗರ ಇಲ್ಲಿಗೆ ಬಂದಾಗ ಮುಸ್ಲಿಮರು ಜಮಾಯಿಸಿ ಈ ಸಂಚಲನವನ್ನು ತಡೆಯಲು ಪ್ರಯತ್ನಿಸುತ್ತಾ ‘ನಾರಾ-ಎ-ತಕ್ಬೀರ್’ (ಅಲ್ಲಾಹ್ ಎಲ್ಲರಿಗಿಂತ ದೊಡ್ಡವನು), ‘ಅಲ್ಲಾಹು ಅಕ್ಬರ್’ ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು.

3. ಸಂಚಲನದ ಮಾರ್ಗದಲ್ಲಿ ಮುಸ್ಲಿಮರು ಬರುತ್ತಿರುವಾಗಲೇ ಪೊಲೀಸರು ಮೊದಲು ಅವರನ್ನು ತಡೆದು ಹಿಂದೆ ಅಟ್ಟಿಇದರು.

4. ತದನಂತರ ಸ್ವಯಂಸೇವಕರು ಈ ಸಂಚಲನವನ್ನು ಪೂರ್ಣಗೊಳಿಸಿ ವಿಜಯದಶಮಿಯ ಕಾರ್ಯಕ್ರಮವನ್ನು ಶಿರ್ಕೆ ಪ್ರಾಶಾಲೆಯಲ್ಲಿ ಪೂರ್ಣ ಗೊಳಿಸಿದರು. ಅಲ್ಲಿಂದಲೇ ಸ್ವಯಂಸೇವಕರು, ಎಲ್ಲ ಹಿಂದೂ ಸಮುದಾಯ ಮತ್ತು ಎಲ್ಲೆಡೆಯ ನೂರಾರು ಹಿಂದೂಗಳು ಒಗ್ಗೂಡಿ ರಾತ್ರಿ ನಗರ ಪೊಲೀಸ್ ಠಾಣೆಗೆ ರಾತ್ರಿ ಒಂಬತ್ತುವರೆ ಗಂಟೆಗೆ ತಲುಪಿದರು.

5. ಭಾಜಪ ಜಿಲ್ಲಾಧ್ಯಕ್ಷ ರಾಜೇಶ್ ಸಾವಂತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೀಣ್ ಜೋಶಿ ಸೇರಿದಂತೆ ಅನೇಕ ಮುಖಂಡರು ನಗರದ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿಯವರೆಗೂ ಬೀಡುಬಿಟ್ಟಿದ್ದರು. ಈ ಸಮಯದಲ್ಲಿ ಹಿಂದೂಗಳು, ‘ಈ ಘೋಷಣೆಯನ್ನು ಯಾರಿಂದ ನೀಡಲಾಗುತ್ತಿದೆ ?’ ಎನ್ನುವ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಅವರಿಗೆ ವೀಡಿಯೋ ತೋರಿಸಿದರು ಮತ್ತು ಪೊಲೀಸರು ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

6. ರಾತ್ರಿ ಹನ್ನೆರಡುವರೆಯ ನಂತರ ಪೊಲೀಸರು ನಾವು ‘ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು; ಆದರೆ ಅದರ ನಂತರವೂ ಹಿಂದೂಗಳು ಆಂದೋಲನವನ್ನು ಮುಂದುವರಿಸಿದರು. ‘ಎಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ’ ಎಂದು ನಿರ್ಧಾರವನ್ನು ವ್ಯಕ್ತಪಡಿಸಿದರು.

7. ರತ್ನಾಗಿರಿ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಮಾಯಿಣಕರ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ತೋರಸಕರ ಅವರ ಮಾರ್ಗದರ್ಶನದಲ್ಲಿ 4 ಜನರನ್ನು ವಶಕ್ಕೆ ಪಡೆದು ಅಕ್ಟೋಬರ್ 12 ರ ವಿಜಯದಶಮಿಯ ಮುಂಜಾನೆ ಠಾಣೆಗೆ ಕರೆತರಲಾಯಿತು. ಅದರ ನಂತರ ಹಿಂದೂಗಳು ಆಂದೋಲನವನ್ನು ನಿಲ್ಲಿಸಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರನ್ನು ಒಲೈಸುವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದಕ ಸಂಘಟನೆಯೆಂದು ಹೇಳುತ್ತಾ, ಹೀಯಾಳಿಸುವ ಕಾಂಗ್ರೆಸ್ಸಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆಯ ಹಿಂದೆ ಏನಾದರೂ ಸಂಚು ಇದೆಯೇ ಎನ್ನುವ ತನಿಖೆ ನಡೆಯಬೇಕು !
  • `ಹಿಂದೂಗಳಿಗೆ ಮಾತ್ರ `ಗಂಗಾ ಜಮುನಿ ತಹಜೀಬ’ ನ ಉಪದೇಶ ನೀಡುವ ಜಾತ್ಯತೀತವಾದಿಗಳು ಈಗ ಈ ಘಟನೆಯ ಬಗ್ಗೆ ಮುಸಲ್ಮಾನರಿಗೆ ಚಕಾರವನ್ನೂ ಮಾತನಾಡುವುದಿಲ್ಲ ! ಇದರಿಂದ ಮುಸಲ್ಮಾನರಿಗಿಂತ ಈ ಜಾತ್ಯತೀತವಾದಿಗಳೇ ಹಿಂದೂಗಳು ಹೆಚ್ಚು ಅಪಾಯಕಾರಿ ಶತ್ರುಗಳಾಗಿದ್ದಾರೆ ಎಂದು ಹೇಳಬೇಕಾಗುವುದು !
  • ಪ್ರಖರ ರಾಷ್ಟ್ರ ಮತ್ತು ಹಿಂದುತ್ವನಿಷ್ಠ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಈ ಬಗ್ಗೆ ಕಠೋರವಾದ ನಿಲುವು ತೆಗೆದುಕೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !
  • ಒಂದು ವೇಳೆ ಮುಸಲ್ಮಾನರ ಮೆರವಣಿಗೆಯಲ್ಲಿ ಹಿಂದೂಗಳು `ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರೆ, ಇದೇ ರತ್ನಾಗಿರಿ ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡಿ ಅವರ ವಿರುದ್ಧ ಶೀಘ್ರವಾಗಿ ಅಪರಾಧವನ್ನು ದಾಖಲಿಸುತ್ತಿದ್ದರು. ಇದರಿಂದ ಪೊಲೀಸರ ದೃಷ್ಟಿಯಲ್ಲಿ ಹಿಂದೂಗಳ ಮೌಲ್ಯವೇನು, ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ ?
  • ಈ ಘಟನೆಯಿಂದ ಭಾರತದಲ್ಲಿರುವ ಮುಸ್ಲಿಮರ ಉದ್ಧಟತನವೇ ಕಂಡು ಬರುತ್ತದೆ. ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನವನ್ನು ಜೀವಿಸುತ್ತಿದ್ದಾರೆ ಎಂದು ಹಸಿ ಸುಳ್ಳುಗಳನ್ನು ಹೇಳುವ ಅಂತರಾಷ್ಟ್ರೀಯ ಪ್ರಸಾರ ಮಾಧ್ಯಮಗಳನ್ನು ಈಗ ಹಿಂದೂಗಳು ಈ ಬಗ್ಗೆ ಪ್ರಶ್ನಿಸಬೇಕು !