ಪ್ರವೇಶದ್ವಾರದ ಸ್ಥಾನ ಮತ್ತು ಇತರ ನಿಯಮಗಳು
ಬಾಗಿಲಿಗೆ ಎರಡು ಕವಾಡಗಳಿರುವಾಗ (ಬಾಗಿಲುಗಳು), ಅವುಗಳಲ್ಲಿ ಎಡಭಾಗದ ಕವಾಡವು ದೊಡ್ಡದಾಗಿರಬೇಕು ಮತ್ತು ಇನ್ನೊಂದು ಚಿಕ್ಕದಾಗಿರಬೇಕು. ದೊಡ್ಡ ಕವಾಡಲಕ್ಕೆ ಮಾತೃ ಕವಾಡ ಎಂದೂ, ಸಣ್ಣ ಕವಾಡಕ್ಕೆ ಪುತ್ರಿಕಾ ಕವಾಡ ಎಂಬ ಸಂಜ್ಞೆ ಇದೆ.
ಬಾಗಿಲಿಗೆ ಎರಡು ಕವಾಡಗಳಿರುವಾಗ (ಬಾಗಿಲುಗಳು), ಅವುಗಳಲ್ಲಿ ಎಡಭಾಗದ ಕವಾಡವು ದೊಡ್ಡದಾಗಿರಬೇಕು ಮತ್ತು ಇನ್ನೊಂದು ಚಿಕ್ಕದಾಗಿರಬೇಕು. ದೊಡ್ಡ ಕವಾಡಲಕ್ಕೆ ಮಾತೃ ಕವಾಡ ಎಂದೂ, ಸಣ್ಣ ಕವಾಡಕ್ಕೆ ಪುತ್ರಿಕಾ ಕವಾಡ ಎಂಬ ಸಂಜ್ಞೆ ಇದೆ.
ಮನೆಯ ಹಿಂಭಾಗದಲ್ಲಿ ಜಾಗವನ್ನು ಪ್ರವೇಶಿಸುವ ದ್ವಾರವಿದ್ದರೆ, ಅದನ್ನು ‘ಪ್ರತ್ಯಕ್ಷಾಯ’ ಎಂದು ಕರೆಯುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಈ ಪ್ರವೇಶವೂ ನಿಂದನೀಯವಾಗಿದೆ. ಇದರ ಪರಿಣಾಮಗಳು ‘ಹೀನಬಾಹು’ ಪ್ರವೇಶದಂತೆಯೇ ವಾಸ್ತು ಮಾಲೀಕನಿಗೆ ಅನುಭವಕ್ಕೆ ಬರುತ್ತವೆ.
ಈ ವಾಸ್ತುಮಂಡಲವು ಎಲ್ಲಾ ಆಕಾರದ ಭೂಮಿಗಳಿಗೂ ಅನ್ವಯಿಸುತ್ತದೆ. ದೊಡ್ಡ ವಾಸ್ತುವಿಗೆ ಅನ್ವಯಿಸುವ ನಿಯಮವೇ ಸಣ್ಣ ವಾಸ್ತುವಿಗೂ ಅನ್ವಯಿಸುತ್ತದೆ. ಹೇಗೆ ಚಂದ್ರನ ಪ್ರತಿಬಿಂಬವು ಸರೋವರದಂತಹ ದೊಡ್ಡ ಕ್ಷೇತ್ರದಲ್ಲಿ ಬೀಳುತ್ತದೆಯೋ, ಅದೇ ರೀತಿ ಸಣ್ಣ ಪಾತ್ರೆಯ ನೀರಿನಲ್ಲೂ ಬೀಳುತ್ತದೆ, ಆದರೆ ಅದು ಆ ಪಾತ್ರೆಯಲ್ಲಿ ಸಂಕುಚಿತವಾಗಿ ಕಾಣಿಸುತ್ತದೆ.
ಮಧ್ಯಭಾಗದಲ್ಲಿ ತಗ್ಗು ಇರುವ ಭೂಮಿಯು ಯಾವಾಗಲೂ ಪ್ರವಾಸವನ್ನು ನೀಡುತ್ತದೆ ಮತ್ತು ಸ್ಥಳಾಂತರಗೊಳ್ಳುವಂತೆ ಮಾಡುತ್ತದೆ.
ವಾಸ್ತುವಿನ ದೃಷ್ಟಿಯಿಂದ ಅಧ್ಯಯನ ಮಾಡುವಾಗ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಅಧ್ಯಯನವನ್ನೂ ಮಾಡಬೇಕು. ಆಧುನಿಕ ಕಾಲದಲ್ಲಿ ಅನೇಕ ಯಂತ್ರಗಳ ಮಾಧ್ಯಮದಿಂದ ನಾವು ಜಾಗದ ಶಕ್ತಿಯನ್ನು ಅಧ್ಯಯನ ಮಾಡಬಹುದು; ಆದರೆ ಹಿಂದಿನ ತಜ್ಞರು ನಕಾರಾತ್ಮಕ ಶಕ್ತಿಯ ಕೆಲವು ಸ್ಥೂಲ ಲಕ್ಷಣಗಳನ್ನು ಹೇಳಿದ್ದಾರೆ.
ಕೆಲವರ ಅಂಗೈಗಳ ಮೇಲೆ ಈ ೨ ಚಿಹ್ನೆಗಳು ಹುಟ್ಟಿದಾಗಿನಿಂದಲೇ ಇರುತ್ತವೆ, ಇನ್ನು ಕೆಲವರ ಅಂಗೈಗಳ ಮೇಲೆ ಅವು ನಂತರ ವಿಕಸನಗೊಳ್ಳುತ್ತವೆ. ಈ ಚಿಹ್ನೆಗಳು ಅಂಗೈಗಳ ಮೇಲೆ ಹುಟ್ಟಿದಾಗಿನಿಂದಲೇ ಇರುವ ವ್ಯಕ್ತಿಗಳು ಈ ಜನ್ಮದಲ್ಲಿ ಮಾಡಬೇಕಾಗಿರುವ ಸಮಷ್ಟಿ ಕಾರ್ಯವು ಈ ಮೊದಲೇ ಆಯ್ಕೆಯಾಗಿರುತ್ತದೆ.
ಯಾವ ಸ್ಥಳದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮತ್ತು ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದೋ, ಅಥವಾ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆಯೋ ಹಾಗೂ ಕಟ್ಟಡಕ್ಕೆ (ವಾಸ್ತುವಿಗೆ) ಅಪಾಯವಿರುತ್ತದೆಯೋ, ಅಂತಹ ಭೂಮಿಯನ್ನು ವಾಸ್ತುಶಾಸ್ತ್ರಜ್ಞರು ಕಟ್ಟಡ ನಿರ್ಮಾಣಕ್ಕೆ ನಿಷೇಧಿಸಿದ್ದಾರೆ(ವರ್ಜ್ಯವೆಂದು ಹೇಳಿದ್ದಾರೆ)
ಈ ಗ್ರಹಣವು ಗ್ರಸ್ತೋದಿತವಾಗಿರುವುದರಿಂದ ಮಂಗಳವಾರ, ೩ ಮಾರ್ಚ್ ೨೦೨೬ ರಂದು ಸೂರ್ಯೋದಯದಿಂದ ಗ್ರಹಣ ಮೋಕ್ಷದವರೆಗೆ (ಸಂಜೆ ೬.೪೮ ರವರೆಗೆ) ಗ್ರಹಣದ ವೇಧವನ್ನು ಪಾಲಿಸಬೇಕು.
ಭೂಮಿಯು ಕೀಟಗಳು, ಬಿಳಿ ಇರುವೆಗಳು (ಗೆದ್ದಲು), ಇಲಿಗಳು, ಬುರುಡೆಗಳು, ಮೂಳೆಗಳು, ಶಂಖಗಳು, ರಂಧ್ರಗಳು ಇತ್ಯಾದಿಗಳಿಂದ ಮುಕ್ತವಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಇಲ್ಲದಿದ್ದರೆ ಈ ಶಲ್ಯದೋಷಗಳಿಂದ ವಾಸ್ತುಮಾಲೀಕನು ವಿವಿಧ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಲಾಭ : ಇದು ಬುಧನ ದಿಕ್ಕಾಗಿರುವುದರಿಂದ ಇದು ಶುಭವಾಗಿದ್ದರೆ ಬುದ್ಧಿಯ ವಿಕಾಸವು ಚೆನ್ನಾಗಿ ಆಗುತ್ತದೆ. ಬುಧನು ವ್ಯಾಪಾರದ ಕಾರಕನಾಗಿರುವುದರಿಂದ ಅದಕ್ಕಾಗಿ ಸಹ ಈ ದಿಕ್ಕು ಲಾಭದಾಯಕವಾಗಿದೆ.