ಭಾರತದ ಮೇಲೆ ಒತ್ತಡ ಹೇರುವ ಚೀನಾದ ಪ್ರಯತ್ನವನ್ನು ಎಲ್ಲ ಭಾರತೀಯರೂ ಸಂಘಟಿತರಾಗಿ ವಿಫಲಗೊಳಿಸಬೇಕು !

ಚೀನಾ ಭಾರತದ ಮಾರುಕಟ್ಟೆಯಲ್ಲಿ ಅದರ ಉತ್ಪಾದನೆಗಳನ್ನು ಮಾರಾಟ ಮಾಡಿ ತುಂಬಾ ಹಣವನ್ನು ಗಳಿಸುತ್ತದೆ. ಅದರಿಂದ ಅದರ ಆರ್ಥಿಕ ಬಲ ಹೆಚ್ಚಾಗುತ್ತದೆ ಹಾಗೂ ಅದರ ಸೈನ್ಯದ ಬಜೆಟ್ ಹೆಚ್ಚಾಗುತ್ತಿದೆ. ಕೊರೋನಾ ವಿಷಾಣುವಿನಿಂದ ಅಥವಾ ಚೀನಾದ ವಿಷಾಣುವಿನಿಂದ ಎಲ್ಲ ದೇಶಗಳು ತಮ್ಮ ಸೈನ್ಯದ ಬಜೆಟ್‌ನ್ನು ಕಡಿಮೆ ಮಾಡುತ್ತಿವೆ.

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಮಹತ್ವದ ಸೂಚನೆ

ವಿದ್ಯುತ್ ಕಂಬ, ವಿದ್ಯುತ್ ತಂತಿ, ಹಾಗೆಯೇ ಮರಗಳ ಕೆಳಗೆ ದ್ವಿಚಕ್ರ ವಾಹನ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಿದರೆ ಬಿರುಗಾಳಿಯಿಂದ ಕಂಬ ಅಥವಾ ಮರಗಳು ಬುಡಮೇಲಾಗಿ ಅವುಗಳ ಮೇಲೆ ಬಿದ್ದರೆ ದೊಡ್ಡ ಹಾನಿಯಾಗಬಹುದು. ಆದುದರಿಂದ ಅಲ್ಲಿ ವಾಹನಗಳನ್ನು ನಿಲ್ಲಿಸುವುದು, ವಾಹನಗಳನ್ನು ನಡೆಸುವುದು ಇತ್ಯಾದಿ ಮಾಡಬಾರದು.

ಜಾತಿ, ಸಂಪ್ರದಾಯಗಳು ಮತ್ತು ಅಲ್ಪಸಂಖ್ಯಾತರನ್ನು ಓಲೈಕೆ ಇವು ರಾಜಕಾರಣಿಗಳ ಸಾಧನವಾಗಿ ಮಾರ್ಪಟ್ಟಿದೆ !

ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರವು ದ್ವಿತೀಯ ಸ್ಥಾನದಲ್ಲಿದೆ. ಜಾತಿ, ಸಂಪ್ರದಾಯ ಮತ್ತು ಅಲ್ಪಸಂಖ್ಯಾತರ ಓಲೈಸುವುದು ರಾಜಕಾರಣಿಗಳಿಗೆ ‘ಕಾಮಧೇನು (ಇಚ್ಛಿತ ಪಡೆಯುವ ಸಾಧನ) ಆಗಿ ಮಾರ್ಪಟ್ಟಿದೆ.

ಬಂಗಾಲದ ಪ್ರಖರ ಹಿಂದುತ್ವನಿಷ್ಠ ನಾಯಕ ತಪನ ಘೋಷ ಇವರಿಗೆ ದೇಶದಾದ್ಯಂತದ ಹಿಂದುತ್ವನಿಷ್ಠ ಮುಖಂಡರಿಂದ ಶ್ರದ್ಧಾಂಜಲಿ

ಬಂಗಾಲದ ಪ್ರಖರ ಹಿಂದುತ್ವನಿಷ್ಠ ಮುಖಂಡ ಹಾಗೂ ‘ಹಿಂದೂ ಸಂಹತಿ’ ಈ ಸಂಘಟನೆಯ ಸಂಸ್ಥಾಪಕರು ಹಾಗೂ ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ತಪನ ಘೋಷ ಇವರು (೬೭ ವರ್ಷ) ಇವರು ಜುಲೈ ೧೨ ರಂದು ಕೊರೊನಾ ಸೋಂಕಿನಿಂದಾಗಿ ನಿಧನರಾದರು. ತಪನದಾ ಇವರು ಬಂಗಾಲದ ಹಿಂದೂಗಳಿಗೆ ದೊಡ್ಡ ಆಧಾರಸ್ತಂಭವಾಗಿದ್ದರು. 

ಕೊರೋನಾ ರೋಗಕ್ಕೆ ಯೋಗ ಹಾಗೂ ಧ್ಯಾನಧಾರಣೆ ಈ ಪ್ರಾಚೀನ ಭಾರತೀಯ ಚಿಕಿತ್ಸಾಪದ್ದತಿ ಹೆಚ್ಚು ಪರಿಣಾಮಕಾರಿ ! – ಅಂತರರಾಷ್ಟ್ರೀಯ ತಜ್ಞರ ಹೇಳಿಕೆ

ಕೊರೋನಾ ಪೀಡಿತರ ಮೇಲಿನ ಚಿಕಿತ್ಸೆಗಾಗಿ ಯೋಗ ಹಾಗೂ ಧ್ಯಾನ ಧಾರಣೆ ಈ ೨ ಪ್ರಾಚೀನ ಚಿಕಿತ್ಸಾಪದ್ದತಿಗಳು ಪರಿಣಾಮಕಾರಿಯಾಗಿವೆ ಎಂದು ಅಂತರರಾಷ್ಟ್ರೀಯ ತಜ್ಞರು ಕಂಡುಹಿಡಿದ್ದಾರೆ. ಅಮೇರಿಕಾದ ‘ಮೆಸಾಚ್ಯುಸೆಟ್ಸ್ ಆಫ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಾಜಿ’, ‘ಕ್ಯಾಲಿಫೋರ್ನಿಯಾ ಯುನಿವರ್ಸಿಟಿ’, ‘ಚೋಪಡಾ ಲೈಬ್ರೇರಿ’ ಹಾಗೂ ‘ಹಾವರ್ಡ್ ಯುನಿವರ್ಸಿಟಿ’ಯ ಸಂಶೋಧಕರು

ಕೊರೋನಾದ ಮೇಲೆ ಲಸಿಕೆ ತಯಾರಿಸಲು ಹಾಗೂ ಅದನ್ನು ಜಗತ್ತಿಗೆ ಪೂರೈಸುವ ಕ್ಷಮತೆ ಭಾರತಕ್ಕೆ ಇದೆ ! – ಬಿಲ್ ಗೆಟ್ಸ್

ಭಾರತವು ದೊಡ್ಡ ಆಕಾರದ ಹಾಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಆದ್ದರಿಂದ ಭಾರತವು ಕೊರೊನಾ ದೊಡ್ಡ ಸವಾಲವನ್ನು ಎದುರಿಸಬೇಕಾಗುತ್ತಿದೆ. ಭಾರತದ ಔಷಧಿ ಉದ್ಯಮಕ್ಕೆ ಕೇವಲ ಸ್ವಂತಕ್ಕಾಗಿ ಅಲ್ಲ, ಸಂಪೂರ್ಣ ಜಗತ್ತಿಗೆ ಕೊರೋನಾ ಮೇಲಿನ ಲಸಿಕೆಯನ್ನು ತಯಾರಿಸುವ ಕ್ಷಮತೆ ಇದೆ.

ಈ ಸಲದ ರಕ್ಷಾಬಂಧನಕ್ಕೆ ಭಾರತೀಯ ರಾಖಿಯನ್ನು ಕಟ್ಟಿರಿ ! – ‘ಕನ್ಫೇಡರೇಶನ ಆಫ್ ಆಲ್ ಇಂಡಿಯಾ ಟ್ರೇಡರ್ಸ’ ನಿಂದ ಕರೆ

ಆಗಸ್ಟ್ ೩ ರಂದು ಇರುವ ರಕ್ಷಾಬಂಧನಕ್ಕಾಗಿ ಯಾರೂ ಚೀನಾ ಸಾಹಿತ್ಯದಿಂದ ನಿರ್ಮಿಸಿದ ರಾಖಿಗಳನ್ನು ಉಪಯೋಗಿಸಬಾರದು, ಎಂದು ದೇಶದ ಎಲ್ಲಕ್ಕಿಂತ ದೊಡ್ಡದಾದ ವ್ಯಾಪಾರಿ ಸಂಘಟನೆಯಾದ ‘ಕನ್ಫೇಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ’ (‘ಕ್ಯಾಟ್’ವು) ಕರೆ ನೀಡಿದೆ. ಜೂನ್ ೧೦ ರಿಂದ ‘ಕ್ಯಾಟ್’ನಿಂದ ‘ಭಾರತೀಯ ವಸ್ತು ನಮ್ಮ ಅಭಿಮಾನ’ ಈ ಅಭಿಯಾನದ ಅಂತರ್ಗತ ಚೀನಾದ ವಸ್ತುವಿನ ಮೇಲೆ ಬಹಿಷ್ಕಾರ ಹಾಕಲು ಆರಂಭಿಸಲಾಗಿದೆ.

ಕುಲಗಾಮನಲ್ಲಿ ೩ ಭಯೋತ್ಪಾದಕರ ಹತ್ಯೆ

ಇಲ್ಲಿ ಜುಲೈ ೧೭ ರಂದು ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ೩ ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ. ಇದರಲ್ಲಿ ೩ ಸೈನಿಕರೂ ಗಾಯಗೊಂಡಿದ್ದಾರೆ. ಈ ಚಕಮಕಿ ಸಂಜೆಯ ತನಕ ನಡೆಯುತ್ತಿತ್ತು. ಈ ಹಿಂದೆ ಜುಲೈ ೧೬ ರಂದು ಕುಪವಾಡಾದ ಕೆರನ ಸೆಕ್ಟರ್‌ನಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ಓರ್ವ ಭಯೋತ್ಪಾದಕನ ಹತ್ಯೆ ಮಾಡಲಾಗಿದೆ.

ಸೀತಾಪುರ (ಉತ್ತರಪ್ರದೇಶ) ಇಲ್ಲಿ ಮತಾಂಧರಿಂದ ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಸ್ಥಿತಿ ಉದ್ವಿಗ್ನ

ಇಲ್ಲಿಯ ಪಕರಿಯಾ ಗ್ರಾಮದಲ್ಲಿ ಜಾಹಿದ, ರಾಶಿದ ಹಾಗೂ ಸಾಹಿರ ಈ ಮೂವರು ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಪೀಡಿತೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದಾದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಇಬ್ಬರು ಹಿಂದೂ ಯುವಕರ ಹತ್ಯೆ : ಅರೆಬೆಂದಾವಸ್ಥೆಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಇಲ್ಲಿಯ ಮಿಟಿಯಾರಿ ಹಾಲಾ ಪ್ರದೇಶದಲ್ಲಿ ಮೊಹನ ಬಾಗರಿ ಹೆಸರಿನ ಹಿಂದೂ ಯುವಕನ ಅರೆಬೆಂದ ಮೃತದೇಹವು ಪತ್ತೆಯಾಗಿದೆ. ಇದರ ಮಾಹಿತಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ರಾಹತ ಆಸ್ಟೀನ್ ಇವರು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದ್ದಾರೆ.