‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೬)
ಇಂದಿನ ಒತ್ತಡಮಯ ಜೀವನದಲ್ಲಿ ಯಾರಿಗೂ ಯಾವತ್ತೂ ಸೋಂಕಿನ ಕಾಯಿಲೆ ಅಥವಾ ಇನ್ಯಾವುದೊ, ವಿಕಾರವನ್ನು ಎದುರಿಸಬೇಕಾಗಬಹುದು. ಇಂತಹ ಪ್ರಸಂಗಗಳಲ್ಲಿ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಹೇಳಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು. ಈ ಉಪಾಯಪದ್ಧತಿಯನ್ನು ಮನೆಯಲ್ಲಿಯೆ ಹೇಗೆ ಅವಲಂಬಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಜೋಪಾನ ಮಾಡಬೇಕು ? ಇತ್ಯಾದಿ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.
ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೩೩ ರಲ್ಲಿ ನಾವು ‘ಚಿಂತೆ ಅಥವಾ ಭಯ ಇವುಗಳಿಗೆ ಹೋಮಿಯೋಪಥಿ ಔಷಧಗಳ’ ಮಾಹಿತಿಯನ್ನು ನೀಡಿದ್ದೇವು. ಈ ವಾರ ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.
ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.
ಘಟನೆ ಘಟಿಸುವ ಮೊದಲೇ ಚಿಂತೆಯನ್ನು ಮಾಡುವುದು, ಅಂದರೆ ಭವಿಷ್ಯದ ಬಗ್ಗೆ ಚಿಂತೆಯನ್ನು ಮಾಡುವುದು, ಏನಾದರೂ ಕೆಟ್ಟದಾಗಬಹುದು ಅಥವಾ ನಾವು ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಲಾರದು, ಎಂಬುದರ ಚಿಂತೆಯಾಗುವುದು. ಯಾವುದೇ ಕಠಿಣ ನಿರ್ಣಯ, ಕೃತಿ ಅಥವಾ ಪರಿಸ್ಥಿತಿಯನ್ನು ವಾಸ್ತವದಲ್ಲಿ ಎದುರಿಸುವ ಮೊದಲೇ ಕೇವಲ ವಿಚಾರದಿಂದ ಬರುವ ಚಿಂತೆ ಅಂದರೆ ಘಟನಾಪೂರ್ವ ಚಿಂತೆ.
೧. ಜಲ್ಸೆಮಿಯಮ್ ಸೆಮ್ಪರ್ವಿರೆನ್ಸ್ (Gelsemium Sempervirens)
೧ ಅ. ದಿನನಿತ್ಯಕ್ಕಿಂತ ಭಿನ್ನವಾದ ಯಾವುದಾದರೊಂದು ಪರಿಸ್ಥಿತಿಯನ್ನು ಎದುರಿಸುವುದು, ಯಾವುದಾದರೂ ಸಮಾರಂಭಕ್ಕೆ ಹೋಗುವುದು ಅಥವಾ ಯಾರನ್ನಾದರೂ ಭೇಟಿಯಾಗುವುದು, ವೇದಿಕೆಯಲ್ಲಿ ನಿಂತು ಮಾತನಾಡುವುದು, ಪರೀಕ್ಷೆಯನ್ನು ಎದುರಿಸುವುದು, ಜನಸಂದಣಿಯಲ್ಲಿ ಹೋಗುವುದು ಈ ಬಗೆಗಿನ ವಿಚಾರಗಳಿಂದಲೇ ಚಿಂತೆಯೆನಿಸಿ ಭೇದಿಯಾಗುವುದು.
೧ ಆ. ಏಕಾಂತದಲ್ಲಿ ಶಾಂತವಾಗಿ ಇರಬೇಕು, ಯಾರೊಂದಿಗೂ ಮಾತನಾಡಬಾರದು, ಎಂದು ಅನಿಸುವುದು.
೨. ಅರ್ಜೆಂಟಮ್ ನೈಟ್ರಿಕಮ್ (Argentum Nitricum)
೨ ಅ. ಮಹತ್ವದ ಪ್ರಸಂಗಗಳಲ್ಲಿ ಹಾಗೆಯೇ ವೇದಿಕೆಯಲ್ಲಿ ನಿಂತು ಮಾತನಾಡುವುದು ಇವುಗಳ ಬಗ್ಗೆ ಚಿಂತೆ ಮತ್ತು ಭಯವೆನಿಸುವುದು ಮತ್ತು ಭೇದಿಯಾಗುವುದು
೨ ಆ. ಸಮಯ ನಿಧಾನವಾಗಿ ಹೋಗುತ್ತಿದೆ, ಎಂದು ಅನಿಸುವುದು; ಪ್ರತಿಯೊಂದು ವಿಷಯವನ್ನು ಗಡಿಬಿಡಿಯಿಂದ ಮಾಡುವುದು – ವೇಗದಿಂದ ನಡೆಯುವುದು, ಯಾವಾಗಲೂ ಗಡಿಬಿಡಿಯಲ್ಲಿ ಇರುವುದು
೩. ಹನ್ನೆರಡುಕ್ಷಾರ ಔಷಧಿ
೩ ಅ. ಕಾಲಿಯಮ್ ಫಾಸ್ಫೊರಿಕಮ್ (Kalium Phosphorium) :
ಈ ಔಷಧಿಯನ್ನು ‘೬ ಘಿ’ ಪೊಟನ್ಸಿ’ಯಲ್ಲಿ ಮೆದುಳಿಗೆ ಶಕ್ತಿವರ್ಧಕವೆಂದು ತೆಗೆದುಕೊಳ್ಳಬೇಕು.
‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಾಯ !’ ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು. |