ಜೈಲಿನಲ್ಲಿ ರಾಮಲೀಲಾ ನಾಟಕ ನಡೆಯುತ್ತಿರುವಾಗ ವಾನರರ ಪಾತ್ರ ಮಾಡುತ್ತಿದ್ದ 2 ಕೈದಿಗಳು ಪರಾರಿ

ನಿದ್ರಾವಸ್ಥೆಯಲ್ಲಿರುವ ಜೈಲು ಆಡಳಿತ !

ಹರಿದ್ವಾರ (ಉತ್ತರಾಖಂಡ) – ಇಲ್ಲಿನ ರೋಶನಾಬಾದ್ ಜೈಲಿನಲ್ಲಿ ರಾಮಲೀಲಾದಲ್ಲಿ ವಾನರರ ಪಾತ್ರ ಮಾಡುತಿದ್ದ ಇಬ್ಬರು ಕೈದಿಗಳು ಸೀತಾಮಾತೆಯ ಹುಡುಕಾಟದ ಪ್ರಸಂಗದ ವೇಳೆ ಜೈಲಿನಿಂದ ಪರಾರಿಯಾಗಿದ್ದಾರೆ. ಈ ಬಂಧಿತರ ಉತ್ತರಾಖಂಡದಲ್ಲಿನ ರೂಡ್ಕಿನಲ್ಲಿನ ಪಂಕಜ್ ಮತ್ತು ಉತ್ತರ ಪ್ರದೇಶದ ಗೊಂಡಾ ನಿವಾಸಿ ರಾಜ್‌ಕುಮಾರ್ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಪಂಕಜ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. ಸೀತಾಮಾತೆಯನ್ನು ಹುಡುಕುವ ಸಲುವಾಗಿ, ಅವರು ಸ್ಟೇಜ್ ನಿಂದ ನಿರ್ಮಾಣ ಹಂತದಲ್ಲಿರುವ ಅತಿ ಸುರಕ್ಷತೆಯ (ಹೈ-ಸೆಕ್ಯುರಿಟಿ) ಬ್ಯಾರಕ್‌ಗಳನ್ನು ತಲುಪಿದರು. ಅಲ್ಲಿ ಇಟ್ಟಿದ್ದ ಏಣಿಯ ಸಹಾಯದಿಂದ ಜೈಲಿನ 22 ಅಡಿ ಎತ್ತರದ ಗೋಡೆಯನ್ನು ಹತ್ತಿ ಅವರು ಪರಾರಿಯಾದರು. ರಾತ್ರಿ ಕೈದಿಗಳನ್ನು ಎಣಿಸುವಾಗ ಕಾರಾಗೃಹದಲ್ಲಿನ ಅಧಿಕಾರಿಗಳಿಗೆ ಗಮನಕ್ಕೆ ಬಂದಿದೆ. ಈ ಕಾರಾಗೃಹ 8 ರಿಂದ 10 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 1 ಸಾವಿರದ 400 ಕೈದಿಗಳಿದ್ದಾರೆ.