ಬಾಂಗ್ಲಾದೇಶದಲ್ಲಿನ ಹಿಂದೂ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಸಂರಕ್ಷಣೆಯ ಕಾಳಜಿ ವಹಿಸಬೇಕು !

ಭಾರತದ ವಿದೇಶಾಂಗ ಸಚಿವಾಲಯದಿಂದ ಬಾಂಗ್ಲಾದೇಶದ ಸರಕಾರಕ್ಕೆ ಮನವಿ !

ನವ ದೆಹಲಿ – ಬಾಂಗ್ಲಾದೇಶದಲ್ಲಿ ನವರಾತ್ರಿ ಉತ್ಸವದ ಸಮಯದಲ್ಲಿ ೩೫ ಪೂಜಾ ಮಂಟಪಗಳ ಮೇಲೆ ನಡೆದಿರುವ ದಾಳಿಗಳು, ಪೆಟ್ರೋಲ್ ಬಾಂಬ್ ಎಸೆತ ಹಾಗೂ ಕಾಲಿ ಮಂದಿರದಲ್ಲಿನ ಕಿರೀಟದ ಕಳ್ಳತನ ಇಂತಹ ಗಂಭೀರ ವಿಷಯಗಳು ಕುರಿತು ಗಮನ ಹರಿಸಿ ಭಾರತದ ವಿದೇಶಾಂಗ ಇಲಾಖೆಯಿಂದ ಬಾಂಗ್ಲಾದೇಶದಲ್ಲಿನ ಹಿಂದುಗಳು, ಎಲ್ಲಾ ಅಲ್ಪಸಂಖ್ಯಾತ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಸುರಕ್ಷೆಯ ಕುರಿತು ಕಾಳಜಿ ವಹಿಸಬೇಕೆಂದು ಬಾಂಗ್ಲಾದೇಶದ ಮಧ್ಯಂತರ ಸರಕಾರಕ್ಕೆ ವಿನಂತಿ ಮಾಡಿದೆ.

೧. ವಿದೇಶಾಂಗ ಸಚಿವಾಲಯವು, ಬಾಂಗ್ಲಾದೇಶದಲ್ಲಿನ ಹಿಂದುಗಳ ಪ್ರಾರ್ಥನಾ ಸ್ಥಳಗಳ ಮೇಲೆ ನಡೆದಿರುವ ದಾಳಿಗಳು ಖಂಡನೀಯವಾಗಿದೆ. ಬಾಂಗ್ಲಾದೇಶದಲ್ಲಿ ಉದ್ದೇಶಪೂರ್ವಕವಾಗಿ ದೇವಸ್ಥಾನಗಳು ಮತ್ತು ಶ್ರದ್ಧಾಸ್ಥಳಗಳ ಪಾವಿತ್ರ್ಯ ಭಂಗ ಮಾಡಲಾಗುತ್ತಿದೆ. ಢಾಕಾದಲ್ಲಿನ ತಾಂತಿಬಜಾರ್ ಇಲ್ಲಿಯ ದುರ್ಗಾಪೂಜೆ ಮಂಟಪದ ಮೇಲೆ ದಾಳಿ ಮತ್ತು ಸಾತಖೀರಾ ಇಲ್ಲಿಯ ಜೋಶೇರೋಶ್ವರಿ ಕಾಲಿ ದೇವಸ್ಥಾನದಲ್ಲಿನ ಕಳ್ಳತನ ಇವುಗಳನ್ನ ನಾವು ಗಂಭೀರವಾಗಿಯೇ ಪರಿಗಣಿಸಿದ್ದೇವೆ.

೨. ಪೂಜಾ ಮಂಟಪಗಳ ಮೇಲೆ ನಡೆಯುವ ದಾಳಿಯ ಘಟನೆಗಳಿಂದ ಆತಂಕ ಮತ್ತು ಭಯ ಇದೆ, ಇಲ್ಲವಾದರೆ ಈ ಉತ್ಸವ ಹೆಚ್ಚಿನ ಉತ್ಸಾಹದಲ್ಲಿ ಆಚರಿಸಲಾಗುತ್ತಿತ್ತು, ಎಂದು ಅಲ್ಲಿಯ ಹಿಂದೂ ನಾಗರಿಕರು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಪರಮಾಣು ಶಕ್ತಿ ಇರುವ ಭಾರತಕ್ಕೆ ಈ ರೀತಿ ಮನವಿ ಮಾಡಬೇಕಾಗುತ್ತದೆ, ಇದು ಲಜ್ಜಾಸ್ಪದವಾಗಿದೆ ! ಇಲ್ಲಿಯವರೆಗೆ ಭಾರತದಿಂದ ಬಾಂಗ್ಲಾದೇಶ ಸರಕಾರಕ್ಕೆ ಎಚ್ಚರಿಕೆ ನೀಡಿ ಸಮಯಮಿತಿ ನೀಡಿ ಹಿಂದೂಗಳ ರಕ್ಷಣೆ ಮಾಡುವ ಆದೇಶ ನೀಡಬೇಕಿತ್ತು !
  • ಶೇಖ್ ಹಸೀನಾ ಇವರ ಸರಕಾರ ಬದಲಾದ ನಂತರದಿಂದ ಬಾಂಗ್ಲಾದೇಶದಲ್ಲಿನ ಹಿಂದುಗಳು ಅಸುರಕ್ಷಿತವಾಗಿರುವಾಗ ದೃಢ ನಿರ್ಧಾರ ತೆಗೆದುಕೊಳ್ಳದಿರುವ ಭಾರತ ಇಸ್ರೈಲ್ ನಿಂದ ತನ್ನ ಧರ್ಮಬಾಂಧವರ ರಕ್ಷಣೆ ಹೇಗೆ ಮಾಡಬೇಕು ? ಇದನ್ನು ಯಾವಾಗ ಕಲಿಯುವುದು ?