ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸತ್ಯಯುಗದಲ್ಲಿ ನಿಯತ ಕಾಲಿಕೆ, ದೂರದರ್ಶನ, ಜಾಲತಾಣಗಳು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನು ಸಂಧಾನದಲ್ಲಿ ಇದ್ದುದರಿಂದ ಆನಂದದಲ್ಲಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸತ್ಯಯುಗದಲ್ಲಿ ನಿಯತ ಕಾಲಿಕೆ, ದೂರದರ್ಶನ, ಜಾಲತಾಣಗಳು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನು ಸಂಧಾನದಲ್ಲಿ ಇದ್ದುದರಿಂದ ಆನಂದದಲ್ಲಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ನಮ್ಮ ಪೂರ್ವಜ ಋಷಿಮುನಿಗಳು ಜನನದ ಮೊದಲು ಮತ್ತು ನಂತರದ ಜೀವನ, ಅನೇಕ ಯುಗಗಳು, ಸಪ್ತಲೋಕ ಮತ್ತು ಸಪ್ತಪಾತಾಳ ಇತ್ಯಾದಿ ಎಲ್ಲ ವಿಷಯಗಳ ಮಾಹಿತಿಯನ್ನು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಜನನ-ಮರಣದ ಚಕ್ರಗಳಿಂದ ಹೇಗೆ ಮುಕ್ತರಾಗಬೇಕು…
ಈಗಿನ ಬುದ್ಧಿಜೀವಿಗಳು ‘ಸಂಕುಚಿತ ಬುದ್ಧಿ’ಯನ್ನೇ ಸರ್ವಶ್ರೇಷ್ಠ ಎಂದು ತಿಳಿಯುತ್ತಿದ್ದಾರೆ. ಆದುದರಿಂದ ಬುದ್ಧಿಗೆಮೀರಿದ ವಿವಿಧ ಘಟನೆಗಳಲ್ಲಿ ಅದು ‘ಏಕೆ ಮತ್ತು ಹೇಗೆ ?’, ಎಂಬ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಜೀವನವಿಡೀ ಅದರಲ್ಲಿಯೇ ಸಿಲುಕಿಕೊಳುತ್ತಾರೆ.
ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ಒಟ್ಟಾಗಿರುವ ಹಿಂದೂ ರಾಷ್ಟ್ರವೀರರಿಗೆ ನನ್ನ ನಮಸ್ಕಾರಗಳು ! ಹಿಂದೂ ರಾಷ್ಟ್ರದ ಸ್ಥಾಪನೆಯು ಸುಲಭವಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ‘ನಾನು ಸಹಾಯ ಮಾಡುವೆ’, ಈ ರೀತಿಯ ದೃಷ್ಟಿಕೋನವನ್ನು ಇಟ್ಟುಕೊಳ್ಳದಿರಿ ಬದಲಾಗಿ ‘ಇದು ನನ್ನದೇ ಕರ್ತವ್ಯವಾಗಿದೆ’, ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಿರಿ.
ಶಿಷ್ಯನಿಗೆ ಗುರುಗಳು ಹೇಳುವುದನ್ನು ಕೇಳುವ ಅಭ್ಯಾಸವಾದ ಮೇಲೆಯೇ ಶಿಷ್ಯನು ದೇವರು ಹೇಳುವುದನ್ನು ಕೇಳುತ್ತಾನೆ ಹಾಗಿರುವುದರಿಂದ ಇಂತಹ ಶಿಷ್ಯನಿಗೆ ದೇವರು ದರ್ಶನವನ್ನು ನೀಡುತ್ತಾನೆ, ಹಾಗಾಗಿಯೇ ದೇವರು ಬುದ್ಧಿಜೀವಿಗಳಿಗೆ ದರ್ಶನವನ್ನು ನೀಡುವುದಿಲ್ಲ.
ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.
ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರು ಹಣ ಅಥವಾ ಹುದ್ದೆಯನ್ನು ನೀಡಿದರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತರು ದೇವರ ಪಕ್ಷ ಬಿಟ್ಟು, ದೇವರ ಚರಣಗಳಲ್ಲಿ ಇರುವ ಜಾಗ ಬಿಟ್ಟು ಬೇರೆಕಡೆ ಎಲ್ಲಿಯು ಹೋಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ
ಸ್ವಭಾವದೋಷಗಳ ನಿರ್ಮೂಲನೆ ಮಾಡದೆ ಯಾರೂ ಯಾವುದೇ ಮಾರ್ಗದಲ್ಲಿ ಸಾಧನೆ ಮಾಡುವುದು ಕಠಿಣವಾಗುತ್ತದೆ. ಸ್ವಭಾವದೋಷ ಕಡಿಮೆ ಮಾಡಿಕೊಂಡವರು ಯಾವುದೇ ಮಾರ್ಗದಿಂದ ಬೇಕಾದರೂ ಸಾಧನೆ ಮಾಡಬಹುದು. ಸಮಷ್ಟಿ ಸಾಧನೆ ಮಾಡಿದರೆ ಅವರ ಶೀಘ್ರ ಪ್ರಗತಿಯೂ ಆಗುತ್ತದೆ.
ಈಗ ಒಂದು ಚಿಕ್ಕ ಮಗುವು ತನ್ನ ಪೂರ್ವಜನ್ಮದ ಸಾಧನೆಯ ಸಂಸ್ಕಾರದಿಂದ ಈ ಜನ್ಮದಲ್ಲಿ ಸಾಧನೆ ಎಂದು ಸೇವೆಯನ್ನು ಮಾಡತೊಡಗಿದರೆ, ಅವನ ಪ್ರಶಂಸೆಯಾಗುವುದಿಲ್ಲ, ತದ್ವಿರುದ್ಧವಾಗಿ, ಅವನನ್ನು ಟೀಕಿಸಲಾಗುತ್ತದೆ ಮತ್ತು ಸಾತ್ತ್ವಿಕ ಜೀವವು ಸಹ ಸಾಧನೆಯನ್ನು ಮಾಡದಿರುವುದರಿಂದ ರಜ-ತಮ ಪ್ರಧಾನವಾಗುತ್ತದೆ.
ತನು-ಮನ-ಧನಗಳ ತ್ಯಾಗ ಮಾಡುವುದಿರುತ್ತದೆ ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಹಾಗೂ ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿ ಬೇಗನೆ ಆಗುತ್ತದೆ’.