ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜ್ಯೋಶಿಷ್ಯ ಶಾಸ್ತ್ರೀಯ ಸಂಶೋಧನೆ
‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಭ್ಯಾಸ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡ ಲಾಗಿದೆ. ಇಷ್ಟರವರೆಗೆ ಪ್ರಸಿದ್ಧವಾಗಿರುವ ಲೇಖನಗಳಲ್ಲಿ ನಾವು ‘ದೈವೀ ಬಾಲಕರು ಎಂದರೇನು ? ದೈವೀ ಬಾಲಕರ ವೈಶಿಷ್ಟ್ಯ ಹಾಗೂ ದೈವೀ ಬಾಲಕರ ಸಂದರ್ಭದಲ್ಲಿನ ಜ್ಯೋತಿಷ್ಯಶಾಸ್ತ್ರದ ಸಂಶೋಧನೆಯನ್ನು ಓದಿದೆವು. ಇಂದು ಈ ಲೇಖನದ ಅಂತಿಮ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.
(ಭಾಗ ೩)
೪ ಇ. ನಿರೀಕ್ಷಣೆಗಳು
೪ ಇ ೧. ದೈವೀ ಬಾಲಕರ ಸಂದರ್ಭದ ನಿರೀಕ್ಷಣೆ : ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿ ಅಂಶ ‘೪ ಅ’ ದಲ್ಲಿ ನೀಡಿರುವ ಜ್ಯೋತಿಷ್ಯಶಾಸ್ತ್ರದ ಮಾನದಂಡ ಅಂದರೆ ಗ್ರಹಯೋಗ ಎಷ್ಟು ಪ್ರಮಾಣದಲ್ಲಿ ಕಂಡುಬಂದಿತು, ಎಂಬುದನ್ನು ಈ ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
ಈ ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಮಹರ್ಲೋಕದಿಂದ ಜನ್ಮತಾಳಿದ ೧೦೦ ರಲ್ಲಿ ೬೪ ಬಾಲಕರ ಕುಂಡಲಿಗಳಲ್ಲಿ ೫ ರ ಪೈಕಿ ೨ ಮಾನದಂಡಗಳಿವೆ ಅಂದರೆ ಅವರ ಕುಂಡಲಿಯಲ್ಲಿ ಅಧ್ಯಾತ್ಮದ ದೃಷ್ಟಿಯಲ್ಲಿ ಉತ್ತಮ ಯೋಗವಿದೆ.
೪ ಇ ೨. ಸಾಧಕರ ಸಂದರ್ಭದಲ್ಲಿನ ನಿರೀಕ್ಷಣೆ : ಸಾಧಕರ ಕುಂಡಲಿಗಳಲ್ಲಿ ‘೪ ಅ’ ದಲ್ಲಿ ನೀಡಿರುವ ಜ್ಯೋತಿಷ್ಯಶಾಸ್ತ್ರದ ಮಾನದಂಡ (ಗ್ರಹಯೋಗ) ಎಷ್ಟು ಪ್ರಮಾಣದಲ್ಲಿ ಕಂಡುಬಂದಿದೆ, ಎಂಬುದನ್ನು ಈ ಮುಂದಿನ ಕೋಷ್ಠಕದಲ್ಲಿ ಕೊಡಲಾಗಿದೆ.
ಈ ಮೇಲಿನ ಕೋಷ್ಠಕದಿಂದ ಗಮನಕ್ಕೆ ಬರುವುದೇನೆಂದರೆ, ೧೦೦ ರಲ್ಲಿ ೪೪ ಸಾಧಕರ ಕುಂಡಲಿಗಳಲ್ಲಿ ೫ ರ ಪೈಕಿ ಕನಿಷ್ಟ ೨ ಗ್ರಹಯೋಗ ಅಂದರೆ ಅವರ ಕುಂಡಲಿಯಲ್ಲಿ ಅಧ್ಯಾತ್ಮದ ದೃಷ್ಟಿಯಲ್ಲಿ ಉತ್ತಮ ಯೋಗವಿದೆ. ದೈವೀ ಬಾಲಕರ ವಿಷಯದಲ್ಲಿ ಸಾಧಕರ ತುಲನೆಯಲ್ಲಿ ಈ ಪ್ರಮಾಣ ಹೆಚ್ಚು ಪ್ರಮಾಣದಲ್ಲಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
೪ ಇ ೩. ಪ್ರತಿಯೊಂದು ಮಾನದಂಡಕ್ಕನುಸಾರ ದೈವೀ ಬಾಲಕರು ಮತ್ತು ಸಾಧಕರ ತುಲನೆ : ಅಂಶ ‘೪ ಅ’ ದಲ್ಲಿ ನೀಡಿರುವ ಪ್ರತಿಯೊಂದು ಜ್ಯೋತಿಷ್ಯಶಾಸ್ತ್ರದ ಮಾನದಂಡವು (ಗ್ರಹಯೋಗ) ೧೦೦ ದೈವೀ ಬಾಲಕರು ಮತ್ತು ೧೦೦ ಸಾಧಕರ ಕುಂಡಲಿಗಳಲ್ಲಿ ಸ್ವತಂತ್ರವಾಗಿ ಎಷ್ಟು ಸಲ ಅನ್ವಯವಾಗುತ್ತದೆ, ಎಂಬುದು ಈ ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
ಸಾಧನೆಗಾಗಿ ಅನುಕೂಲ ಪರಿಸ್ಥಿತಿಯನ್ನು ತೋರಿಸುವ ಜ್ಯೋತಿಷ್ಯಶಾಸ್ತ್ರದ ಮಾನದಂಡ ಮಾನದಂಡದ ಫಲ ಮಾನದಂಡದ ಸ್ತರ ಎಷ್ಟು ಕುಂಡಲಿಗಳಲ್ಲಿ ಮಾನದಂಡ ಅನ್ವಯವಾಗುತ್ತದೆ ?
ಈ ಕೋಷ್ಠಕದಿಂದ ಗಮನಕ್ಕೆ ಬರುವುದೇನೆಂದರೆ ,
ಅ. ಮಾನದಂಡ ಕ್ರ. ೧ ರ ಹೊರತು ಇನ್ನಿತರ ಎಲ್ಲ ಮಾನದಂಡಗಳು ದೈವೀ ಬಾಲಕರ ಕುಂಡಲಿಯಲ್ಲಿ ಹೆಚ್ಚು ಬಾರಿ ಅನ್ವಯವಾಗುತ್ತವೆ. ಜನ್ಮಕುಂಡಲಿಯಲ್ಲಿನ ಮಾನದಂಡ ಕ್ರ. ೧ ಇದ್ದರೆ (ಅಂದರೆ ಧರ್ಮಸ್ಥಾನದ ಸ್ವಾಮಿ ಧರ್ಮಸ್ಥಾನದಲ್ಲಿದ್ದರೆ) ವ್ಯಕ್ತಿಗೆ ವಿದ್ಯೆ, ಬುದ್ಧಿ ಹಾಗೂ ಭಾಗ್ಯ ಇವುಗಳ ಲಾಭವಾಗುತ್ತದೆ, ಆದರೆ ವ್ಯಕ್ತಿಯಲ್ಲಿ ಸಾಧನೆಯ ತಳಮಳ ಇದ್ದೇ ಇರುತ್ತದೆ ಎಂದೇನಿಲ್ಲ.
ಆ. ಉತ್ತಮ ಸ್ತರದ ಮಾನದಂಡದಲ್ಲಿ ‘೨’ ಮತ್ತು ‘೩’ ಕ್ರಮಾಂಕದ ಮಾನದಂಡವು ಮಹತ್ವದ್ದಾಗಿವೆ; ಏಕೆಂದರೆ ಅವು ಕುಂಡಲಿಯಲ್ಲಿ ಅನ್ವಯವಾಗುತ್ತಿದ್ದರೆ ವ್ಯಕ್ತಿ ಮಾಯೆಯಿಂದ ನಿವೃತ್ತನಾಗಿ ತನ್ನ ಸಂಪೂರ್ಣ ಶಕ್ತಿಯಿಂದ ಸಾಧನೆಯನ್ನು ಮಾಡುತ್ತಾನೆ. ದೈವೀ ಬಾಲಕರ ಜನ್ಮಕುಂಡಲಿಯಲ್ಲಿ ಈ ಮಾನದಂಡ ಹೆಚ್ಚು ಬಾರಿ ಅನ್ವಯವಾಗುತ್ತದೆ.
೪ ಈ. ಸಾರಾಂಶ : ದೈವೀ ಬಾಲಕರು ಮತ್ತು ಸಾಧಕರ ಜನ್ಮಕುಂಡಲಿ ಗಳ ತುಲನಾತ್ಮಕ ಅಭ್ಯಾಸದಿಂದ ಗಮನಕ್ಕೆ ಬರುವುದೇನೆಂದರೆ, ದೈವೀ ಬಾಲಕರ ಜನ್ಮಕುಂಡಲಿಯಲ್ಲಿ ಅಧ್ಯಾತ್ಮದ ದೃಷ್ಟಿಯಲ್ಲಿ ಉತ್ತಮ ಯೋಗದ ಪ್ರಮಾಣ ಹೆಚ್ಚು ಇದೆ. ಇದು ಈ ದೈವೀ ಬಾಲಕರ ಪೂರ್ವಜನ್ಮದ ಸಾಧನೆಯ ಪರಿಣಾಮವಾಗಿದೆ. ಆದ್ದರಿಂದ ಅವರಿಗೆ ಸಾಧನೆಗಾಗಿ ಅನುಕೂಲ ಪರಿಸ್ಥಿತಿ ಲಭಿಸುತ್ತದೆ.
ಅವರಲ್ಲಿ ಸಾಧನೆಯನ್ನು ಮಾಡುವ ತಳಮಳ ಇರುತ್ತದೆ ಹಾಗೂ ವಿವಿಧ ಆಧ್ಯಾತ್ಮಿಕ ಗುಣಗಳು ಹುಟ್ಟಿನಿಂದಲೇ ಇರುತ್ತವೆ. ಅವರ ಆಚಾರ ವಿಚಾರಗಳು ಸಾತ್ತ್ವಿಕವಾಗಿರುತ್ತವೆ ಹಾಗೂ ಅವರಲ್ಲಿ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆ ಇರುತ್ತದೆ. ದೈವೀ ಬಾಲಕರ ಜನ್ಮಕುಂಡಲಿಯಲ್ಲಿನ ಉತ್ತಮ ಆಧ್ಯಾತ್ಮಿಕ ಗ್ರಹಯೋಗದಿಂದ ‘ದೈವೀ ಬಾಲಕರು’ ಅಂದರೆ ಉಚ್ಚ ಲೋಕದಿಂದ ಜನ್ಮ ಪಡೆದ ಜೀವಗಳು’, ಎಂಬುದಕ್ಕೆ ಪುಷ್ಟಿ ಸಿಗುತ್ತದೆ.
೫. ದೈವೀ ಬಾಲಕರ ಜನ್ಮ ಇಂದಿನ ಪರಿವರ್ತನೆಯ ಕಾಲದಲ್ಲಿ ಆಗುವುದು, ಇದು ಈಶ್ವರೀ ನಿಯೋಜನೆಯೆ ಆಗಿದೆ !
ದೈವೀ ಬಾಲಕರು ತಮ್ಮ ಮತ್ತು ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಪೃಥ್ವಿಯಲ್ಲಿ ಜನ್ಮ ತಾಳಿದ್ದಾರೆ. ಸದ್ಯದ ಕಾಲ ಇದು ಪರಿವರ್ತನೆಯ ಕಾಲವಾಗಿದೆ. ಆಧುನಿಕ ವಿಚಾರಶೈಲಿ ಹಾಗೂ ಆಧುನಿಕ ವಿಜ್ಞಾನದ ಉಚ್ಚತಮ ಉತ್ಕರ್ಷವಾಗಿದ್ದರೂ ಸಮಾಜ ಸುಖಿಯಾಗುವ ಬದಲು ಹೆಚ್ಚೆಚ್ಚು ದುಃಖಿ ಆಗುತ್ತಿದೆ ಹಾಗೂ ಸಾಮಾಜಿಕ ಸಮಸ್ಯೆಗಳು ದಿನಕಳೆದಂತೆ ಇನ್ನೂ ಕಠಿಣವಾಗುತ್ತಿವೆ. ಇದರಿಂದ ಮಾರ್ಗ ತೆಗೆಯಲು ಸಮಾಜ ‘ಧರ್ಮ ಮತ್ತು ಅಧ್ಯಾತ್ಮದ ಮೊರೆ ಹೋಗಬೇಕು’ ಹಾಗೂ ಆ ದೃಷ್ಟಿಯಿಂದ ಸಮಾಜದ ಮನಸ್ಸು ಪರಿವರ್ತನೆಯಾಗುತ್ತಿದೆ. ಅನೇಕ ಸಂತರು ಮುಂಬರುವ ಕಾಲ ಸಾತ್ತ್ವಿಕವಾಗಿರುವುದು ಎಂದು ಹೇಳಿದ್ದಾರೆ. ಇಂತಹ ಸಾತ್ತ್ವಿಕ ಕಾಲದಲ್ಲಿ ಸಮಾಜಕ್ಕೆ ‘ಧರ್ಮ ಮತ್ತು ಅಧ್ಯಾತ್ಮ’ದ ಬೋಧನೆ ಮಾಡಲು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿರುವ ಜೀವಗಳ ಅವಶ್ಯಕತೆಯಿರುತ್ತದೆ.
ಈಗ ಜನ್ಮ ಪಡೆಯುವ ದೈವೀ ಬಾಲಕರು ಸಮಾಜದ ಈ ಅವಶ್ಯಕತೆಯನ್ನು ಪೂರ್ಣಗೊಳಿಸುವರು. ಆದ್ದರಿಂದ ಈ ಪರಿವರ್ತನೆಯ ಕಾಲದಲ್ಲಿ ಅವರ ಜನ್ಮವಾಗುವುದೆಂದರೆ ಇದು ಈಶ್ವರನ ನಿಯೋಜನೆಯೇ ಆಗಿದೆ !
೬. ದೈವೀ ಬಾಲಕರ ಪಾಲಕರು ತಮ್ಮ ಮಕ್ಕಳ ಸಾಧನೆಗೆ ಪ್ರಾಧಾನ್ಯತೆಯನ್ನು ನೀಡಬೇಕು !
ಮನುಷ್ಯನ ಜೀವನದಲ್ಲಿ ಪೂರ್ವಜನ್ಮದ ಸಂಸ್ಕಾರ ಹಾಗೂ ಈ ಜನ್ಮದಲ್ಲಿ ಆಗುವ ಸಂಸ್ಕಾರಗಳ ಪ್ರಭಾವವಿರುತ್ತದೆ. ದೈವೀ ಬಾಲಕರ ಮೇಲೆ ಪೂರ್ವಜನ್ಮದ ಸಾತ್ತ್ವಿಕ ಸಂಸ್ಕಾರಗಳು ಇದ್ದರೂ, ಈ ಜನ್ಮದಲ್ಲಿ ಆಗುವ ಸಂಸ್ಕಾರಗಳೂ ಸಾತ್ತ್ವಿಕವಾಗಿರಬೇಕಾಗುತ್ತದೆ. ದೈವೀ ಬಾಲಕರಿಗೆ ಸಾಧನೆಗಾಗಿ ಪೋಷಕ ವಾತಾವರಣ ನಿರ್ಮಿಸುವ ಮುಖ್ಯ ಹೊಣೆ ಪಾಲಕರದ್ದಾಗಿದೆ. ದೈವೀ ಬಾಲಕರನ್ನು ಕುಸಂಗತಿಯಿಂದ ದೂರವಿಡುವುದು, ಅವರನ್ನು ಅನಾವಶ್ಯಕವಾಗಿ ಮುದ್ದು ಮಾಡದಿರುವುದು, ಅವರಿಗೆ ಸಂತರ ಚರಿತ್ರೆಗಳನ್ನು ಹೇಳುವುದು,
ಅಧ್ಯಾತ್ಮದ ಜ್ಞಾನ ನೀಡುವುದು ಅವರೊಂದಿಗೆ ಸಾಧನೆಯ ಬಗ್ಗೆ ಚರ್ಚೆ ಮಾಡುವುದು, ತಾವು ಸ್ವತಃ ಚೆನ್ನಾಗಿ ಸಾಧನೆಯನ್ನು ಮಾಡುವುದು ಇತ್ಯಾದಿ ಪ್ರಯತ್ನಗಳನ್ನು ಪಾಲಕರು ಮಾಡ ಬೇಕು. ಇದರಿಂದ ಅವರ ಸಾಧನೆಯೂ ಆಗುವುದು ಹಾಗೂ ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ ಮಾಡಲು ಅವರ ಯೋಗದಾನ ಆಗುವುದು !’
(ಮುಗಿಯಿತು)
– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ಯಶವಂತ ಕಣಗಲೆರಕರ್ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧.೨೦೨೪)