ಮನೆಯ ಕೆಲಸಗಳನ್ನು ಆಶ್ರಮಸೇವೆಯೆಂದು ಮಾಡುವ ಮತ್ತು ಗುರುದೇವರ ಬಗ್ಗೆ ಶ್ರದ್ಧೆ ಇರುವ ಮಂಗಳೂರಿನ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಮೋಕ್ಷಾ ವಿಜಯೇಂದ್ರ ಕುಡ್ವ (ವಯಸ್ಸು ೧೫ ವರ್ಷ) !

೨೦೨೨ ರಲ್ಲಿ ಮೋಕ್ಷಳ ಹನ್ನೆರಡನೇ ಜನ್ಮದಿನದಂದು ಅವಳ ಅತ್ತೆ ಕೇಕ್ ತಂದಿದ್ದರು; ಆದರೆ ಮೋಕ್ಷಳಿಗೆ ‘ಅನ್ನಬ್ರಹ್ಮ’ನ ಮೇಲೆ ಚಾಕು ಬಳಸಿ ಕೇಕ್ ಕತ್ತರಿಸುವುದು ಇಷ್ಟವಾಗಲಿಲ್ಲ; ಹಾಗಾಗಿ ಅವಳು ತುಂಬಾ ಅಳತೊಡಗಿದಳು.

ವ್ಯಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಮನ್ವಿತಾ ಪ್ರಕಾಶ (ವಯಸ್ಸು ೮ ವರ್ಷ) !

ಅವಳು ಪ್ರತಿದಿನ ‘ದತ್ತ’, ‘ರಾಮ’ ಮತ್ತು ‘ಕೃಷ್ಣ’ ಇವರ ನಾಮಜಪ ಮಾಡುತ್ತಾಳೆ. ಅವಳು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ವಹಿಯಲ್ಲಿ ಬರೆಯುತ್ತಾಳೆ. ಅವಳು ರಾತ್ರಿ ಮಲಗುವಾಗ ಕೃಷ್ಣನಲ್ಲಿ ಕ್ಷಮೆ ಯಾಚನೆ ಮಾಡಿ ಆತ್ಮನಿವೇದನೆ ಮಾಡುತ್ತಾಳೆ.

ದೈವೀ ಬಾಲಕರನ್ನು ರೂಪಿಸುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನ

ಈ ಚಿಕ್ಕ ಮಕ್ಕಳಿಗೆ ವ್ಯಾವಹಾರಿಕ ಅನುಭವ ಇರುವುದಿಲ್ಲ ? ನೀವು ಮಗಳೊಂದಿಗೆ ಮಾತನಾಡಬೇಕು ಮತ್ತು ಅವಳಿಗೆ ವ್ಯಾವಹಾರಿಕ ವಿಷಯಗಳನ್ನು ಕಲಿಸಬೇಕು

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಧಾರವಾಡದ ಚಿ. ಶ್ರೀಹರಿ ಬಸವರಾಜ ಗೋರವರ (ವಯಸ್ಸು ೫ ವರ್ಷ) !

ಅವನು, ”ನಾನು ರಾಮನಾಥಿ ಆಶ್ರಮಕ್ಕೆ ಹೋಗಿ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ದರ್ಶನವನ್ನು ಪಡೆಯುತ್ತೇನೆ,” ಎಂದು ಹೇಳುತ್ತಾನೆ. ಅವನು ಪ್ರತಿದಿನ ಬೆಳಗ್ಗೆ ಎದ್ದ ನಂತರ ಗುರುದೇವರ ಪಾದಪೂಜೆಯನ್ನು ಮಾಡಲು ಪ್ರಯತ್ನಿಸುತ್ತಾನೆ.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶಿವಮೊಗ್ಗದ ಕು. ವಿದ್ಯಾಶ್ರೀ ಮುಕುಂದ ಮೊಗೆರ (ವಯಸ್ಸು ೯ ವರ್ಷ) !

ಅವಳಿಗೆ ಚಿಕ್ಕಂದಿನಿಂದಲೂ ಸೇವೆಯನ್ನು ಮಾಡಲು ತುಂಬಾ ಇಷ್ಟವಾಗುತ್ತದೆ. ಯಾವುದೇ ಸೇವೆಯನ್ನು ಮಾಡಿದರೂ, ಅವಳು ಮನಃಪೂರ್ವಕವಾಗಿ ಮಾಡುತ್ತಾಳೆ. ಕಳೆದ ೧ ವರ್ಷದಿಂದ ಅವಳು ‘ಆನ್‌ಲೈನ್’ ಬಾಲಸಂಸ್ಕಾರವರ್ಗದಲ್ಲಿ ಪಾಲ್ಗೊಂಡು ಅದರಂತೆ ಕೃತಿ ಮಾಡುತ್ತಿದ್ದಾಳೆ.

ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ರಾಯಚೂರು ಜಿಲ್ಲೆಯ ಚಿ. ನೀಲಲೋಹಿತ ಮಾರುತಿ ನಾಯಕ (ವಯಸ್ಸು ೯ ವರ್ಷ) !

ನೀಲಲೋಹಿತನು ಯಾವಾಗಲೂ ಶ್ರೀಕೃಷ್ಣನ ಮೂರ್ತಿಯ ಪೂಜೆಯನ್ನು ಮಾಡುವುದು, ನೈವೇದ್ಯವನ್ನು ತೋರಿಸುವುದು ಮತ್ತು ಮೂರ್ತಿಯ ಮುಂದೆ ನೃತ್ಯವನ್ನು ಮಾಡುವುದು, ಇಂತಹ ಕೃತಿಗಳನ್ನು ಮಾಡುತ್ತಾನೆ. ಅವನು ಕೇವಲ ಕೃಷ್ಣನ ಅನುಸಂಧಾನದಲ್ಲಿರುತ್ತಾನೆ.

ಸಂತರ ಬಗ್ಗೆ ಭಾವವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶೇ. ೫೮ ರಷ್ಟು ಆಧ್ಯಾತ್ಮಿಕ ಮಟ್ಟದ ಮಂಗಳೂರಿನ ಕು. ಚರಣದಾಸ ರಮಾನಂದ ಗೌಡ (ವಯಸ್ಸು ೧೧ ವರ್ಷ) !

ಒಮ್ಮೆ ಪರೀಕ್ಷೆಯಿಂದ ಬಂದ ನಂತರ ಅವನು ನನಗೆ, ”ನೀನು ಹೇಳಿದಂತೆ ಪ್ರಾರ್ಥನೆ ಮಾಡಿ ನಾನು ಪರೀಕ್ಷೆ ಕೊಟ್ಟೆನು. ಗುರುದೇವರ ಕೃಪೆಯಿಂದ ನನಗೆ ಎಲ್ಲ ಪ್ರಶ್ನೆಗಳ ಉತ್ತರಗಳು ನೆನಪಾದವು. ಆ ಸಮಯದಲ್ಲಿ ಗುರುದೇವರು ನನ್ನ ಜೊತೆಯಲ್ಲಿದ್ದರು,’’ ಎಂದು ಹೇಳಿದನು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬಗ್ಗೆ ಭಾವವಿರುವ ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಳಗಾವಿಯ ಕು. ಶ್ರೀಕೃಷ್ಣ ಕದಮ (ವಯಸ್ಸು ೯ ವರ್ಷ) !

ಅವನು ಪ್ರತಿದಿನ ಪೂಜೆಯನ್ನು ಮಾಡುತ್ತಾನೆ ಮತ್ತು ದೇವರಿಗೆ ನಮಸ್ಕಾರ ಮಾಡಿ ಸಾತ್ತ್ವಿಕ ಊದುಬತ್ತಿಯನ್ನು ಹಚ್ಚುತ್ತಾನೆ.

ಸಂತರ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಚಿ. ರೂಪಶ್ರೀ ಶಶಿಧರ ಗೌಡ (ವಯಸ್ಸು ೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಚಿ. ರೂಪಶ್ರೀ ಶಶಿಧರ ಗೌಡ ಈ ಪೀಳಿಗೆಯಲ್ಲಿ ಒಬ್ಬಳು !

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಉಡುಪಿಯ ಕು. ಶಿವಾನಿ ಬಾಲಕೃಷ್ಣ ನಾಯಕ (ವಯಸ್ಸು ೬ ವರ್ಷ) !

ಶಿವಾನಿಯು ಸತ್ಸಂಗಕ್ಕೆ ಹೋದಾಗ ನೀರಿನ ಬಾಟಲಿಗಳನ್ನು ತುಂಬಿಸಿಡುವುದು ಮತ್ತು ಕುರ್ಚಿಗಳನ್ನು ಒರೆಸಿ ಒಂದು ಸಾಲಿನಲ್ಲಿ ಇಡುವುದು, ಈ ಸೇವೆಗಳನ್ನು ಮಾಡುತ್ತಾಳೆ.