ದೀಪಜ್ಯೋತಿಯು ನಮ್ಮ ಆಂತರ್ಯದಲ್ಲಿರುವ ಆತ್ಮಜ್ಯೋತಿಯ ಪ್ರತೀಕ

ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆಯು ಅವಶ್ಯಕವಾಗಿದೆ.

ನಾಮದ ಅನುಭವ ನಾಮದಲ್ಲಿದ್ದರೆ ಭಗವಂತನ ಅನುಭವ ಅನುಸಂಧಾನದಲ್ಲಿರುತ್ತದೆ !

ಒಬ್ಬನಿಗೆ ಬಹಳಷ್ಟು ಬಳಗಗಳಿದ್ದರೂ ಅವನು ಬೇರೆಯಾಗಿ ಇರಬಹುದು, ಹಾಗೆ ಭಗವಂತನು ಸರ್ವವ್ಯಾಪಿ ಆಗಿದ್ದರೂ ನಮ್ಮ ಹೃದಯದಲ್ಲಿ ಇರಬಹುದು. ಅವನು ಸೂರ್ಯನ ಪ್ರಕಾಶದಂತೆ ಒಂದೇ ಜಾಗದಲ್ಲಿದ್ದರೂ ಎಲ್ಲ ಕಡೆಗೂ ಅವನ ಅಧಿಪತ್ಯ ಇರುತ್ತದೆ.

ಅನಂತ ಬಲ, ಧೈರ್ಯ ಮತ್ತು ಉತ್ಸಾಹವಿದ್ದರೆ, ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ !

ಬಲವೇ ಏಕೈಕ ಆವಶ್ಯಕ ವಿಷಯವಾಗಿದೆ. ಬಲವೇ ಭವರೋಗದ ಏಕೈಕ ಔಷಧಿಯಾಗಿದೆ. ಶ್ರೀಮಂತರಿಂದ ತುಳಿತಕ್ಕೊಳಗಾದ ಬಡವರಿಗೆ ಬಲವೇ ಏಕೈಕ ಔಷಧಿಯಾಗಿದೆ. ವಿದ್ವಾಂಸರಿಂದ ನುಚ್ಚುನೂರಾಗುವ ಅಜ್ಞಾನಿಗಳಿಗೆ ಬಲವೇ ಏಕೈಕ ಔಷಧಿಯಾಗಿದೆ.

ಜನ್ಮ-ಮರಣದಿಂದ ಬಿಡಿಸುವ ವಿದ್ಯೆಯೇ ನಿಜವಾದ ವಿದ್ಯೆ !

ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?

ದುಷ್ಟ ಮಾರ್ಗದಿಂದ ಸಂಪಾದಿಸಿದ ಸಂಪತ್ತು ಹಠಾತ್ತನೆ ಕಳೆದು ಹೋಗುತ್ತದೆ ಮತ್ತು ಧರ್ಮದಿಂದ ಗಳಿಸಿದ ಸಂಪತ್ತು ಶಾಶ್ವತವಾಗಿರುತ್ತದೆ

ಹೇಗೆ ಹತ್ತಿಯ ಗೋದಾಮಿಗೆ ಬೆಂಕಿ ಬಿದ್ದಾಗ ಹತ್ತಿಯೆಲ್ಲಾ ನಾಶವಾಗುತ್ತದೆಯೋ ಅದೇರೀತಿ ದುಷ್ಟಮಾರ್ಗದಿಂದ ಬಂದ ಸಂಪತ್ತು ಹಠಾತ್ತನೆ ನಷ್ಟವಾಗುತ್ತದೆ.

ಶಿಷ್ಯನ ವಿಶ್ವಾಸ

‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು

ಸದ್ಗುರುಗಳು ಕೂರ್ಮದೃಷ್ಟಿಯಿಂದ ಶಿಷ್ಯರನ್ನು ಕಾಪಾಡುತ್ತಾರೆ

ತಪಸ್ಸು ಮತ್ತು ಶುದ್ಧಿಯಿಂದ ನಿರ್ಮಾಣವಾಗುವ ಕ್ರಿಯೆಯನ್ನು ಸದ್ಗುರುಗಳು ತ್ರಯಸ್ಥರಾಗಿ ದೂರದಿಂದಲೇ ನೋಡುತ್ತಿರುತ್ತಾರೆ ಮತ್ತು ಅದರಿಂದ ಹೊರಹೊಮ್ಮುವ ಕಲೆಯನ್ನು ಶಿಷ್ಯನು ಸ್ವತಃ ಅನುಭವಿಸುತ್ತಿರುತ್ತಾನೆ.

ಗುರುಗಳ ಮಹತ್ವ

ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ (ಮಾನಸಿಕ ಒತ್ತಡ) ಮತ್ತು ಕಲ್ಪತರುವಿನಿಂದ ದೈನ್ಯ (ದಾರಿದ್ರ್ಯ) ದೂರವಾಗುತ್ತದೆ. ತದ್ವಿರುದ್ಧವಾಗಿ ಶ್ರೀಗುರುಗಳ ದರ್ಶನದಿಂದ ಪಾಪ, ತಾಪ ಮತ್ತು ದೈನ್ಯ ಈ ಮೂರೂ ವಿಷಯಗಳ ಹರಣವಾಗುತ್ತದೆ, ಅಂದರೆ ಈ ಮೂರೂ ತೊಂದರೆಗಳು ದೂರವಾಗುತ್ತವೆ.

ಭಗವಂತನ ಸ್ಮರಣೆ ಇದ್ದರೆ, ಅಹಂಕಾರ ತೊಂದರೆ ಕೊಡುವುದಿಲ್ಲ !

ನಮ್ಮಲ್ಲಿ ಒಳ್ಳೆಯ ಗುಣಗಳು ಬಂದರೆ ‘ಆ ಗುಣಗಳು ಯೋಗೇಶ್ವರ ಭಗವಾನನು ನನ್ನ ಬೆನ್ನಿಗೆ ನಿಂತಿದ್ದಾನೆ ಆದುದರಿಂದ ಬಂದಿವೆ’, ಈ ಭಾವನೆ ಇರಬೇಕು. ಈ ಭಾವನೆ ಇದ್ದರೆ, ಅಹಂಕಾರದ ತೊಂದರೆ ಆಗುವುದಿಲ್ಲ

ಎಂಟು ರೀತಿಯ ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನಾಗಿದ್ದಾನೆ !

‘ನೋಡುವುದು, ಕೇಳಿಸಿಕೊಳ್ಳುವುದು, ಪರಿಮಳ ಆಘ್ರಾಣಿಸುವುದು, ರುಚಿ ಸವಿಯುವುದು, ಸ್ಪರ್ಶ ಮಾಡುವುದು, ಶಾರೀರಿಕ ಆರಾಮ, ಯಶಸ್ಸು ಮತ್ತು ಗೌರವ ಈ ಎಂಟು ರೀತಿಯ ಸುಖಗಳಿಗಿಂತ ಪರಾಮಾತ್ಮ-ಸುಖವು ವಿಶೇಷವಾಗಿದೆ. ಈ ಎಂಟು ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನು.’