ಭಾರತ-ಪಾಕಿಸ್ತಾನ ಗಡಿಯಲ್ಲಿ 150 ಉಗ್ರರು ನುಸುಳುವ ಸಿದ್ಧತೆಯಲ್ಲಿ !

ಶ್ರೀನಗರ – ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಸುಮಾರು 150 ಭಯೋತ್ಪಾದಕರು ಕಾಶ್ಮೀರದಲ್ಲಿ ನುಸುಳಲು ಕಾಯುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. ಚಳಿಗಾಲ ಹತ್ತಿರ ಬರುತ್ತಿರುವುದರಿಂದ ಅವರು ನುಸುಳುವ ಸಿದ್ಧತೆಯಲ್ಲಿದ್ದಾರೆ; ಆದರೆ ಭದ್ರತಾ ದಳವು ಈ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸುತ್ತದೆಯೆಂದು ಈ ಅಧಿಕಾರಿ ಹೇಳಿದರು.

ಸಂಪಾದಕೀಯ ನಿಲುವು

  • ಪ್ರತಿ ಸಲ 100 ರಿಂದ 200 ಭಯೋತ್ಪಾದಕರು ಕಾಶ್ಮೀರದೊಳಗೆ ನುಸುಳಲು ಕಾಯುತ್ತಿರುತ್ತಾರೆ, ಎನ್ನುವ ಮಾಹಿತಿಯನ್ನು ಭದ್ರತಾ ಪಡೆಗಳಿಂದ ನೀಡಲಾಗುತ್ತದೆ; ಆದರೆ, ಅವರು ಒಳನುಸುಳುವ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ, ಅವರನ್ನು ಹತ್ಯೆ ಮಾಡಿ, ಅದರ ಮಾಹಿತಿಯನ್ನು ನೀಡುವ ಪ್ರಯತ್ನಗಳನ್ನು ಎಂದಿಗೂ ಮಾಡಲಾಗುವುದಿಲ್ಲ. ಆದ್ದರಿಂದ ಭಯೋತ್ಪಾದಕರು ಗಡಿಯಿಂದ ನುಗ್ಗುತ್ತಾರೆ. ಹಾಗೂ ಭಾರತೀಯ ನಾಗರಿಕರು ಮತ್ತು ಸೈನಿಕರನ್ನು ಗುರಿ ಮಾಡುತ್ತಿದ್ದಾರೆ ಇದು ಭಾರತಕ್ಕೆ ನಾಚಿಕೆಗೇಡು !
  • ಭಾರತ ಇಸ್ರೈಲ್‌ನಂತೆ ಭಯೋತ್ಪಾದಕರನ್ನು ಅವರ ಮನೆಯಲ್ಲಿ ನುಗ್ಗಿ ಕೊಲ್ಲುವ ಆದರ್ಶವನ್ನು ಎಂದು ಅಳವಡಿಸಿಕೊಳ್ಳುವರು ?