ಬಾಂಗ್ಲಾದೇಶದಲ್ಲಿನ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆತ !

  • ಕಳ್ಳರು ಬಾಂಬ್ ಎಸೆದಿದ್ದಾರೆಂದು ಪೊಲೀಸರ ದಾವೆ

  • ೩ ಕಳ್ಳರ ಬಂಧನ, ಮೂವರು ಕೂಡ ಹಿಂದುಗಳು

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ತಾಂತಿ ಬಾಜಾರದಲ್ಲಿನ ದುರ್ಗಾ ಪೂಜಾ ಮಂಟಪದ ಮೇಲೆ ಓರ್ವ ವ್ಯಕ್ತಿಯು ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಈ ಘಟನೆ ಅಕ್ಟೋಬರ್ ೧೧ ರಂದು ರಾತ್ರಿ ನಡೆದಿದೆ; ಆದರೆ ಬಾಂಬ್ ಸ್ಪೋಟವಾಗಿಲ್ಲ. ಆ ಸಮಯದಲ್ಲಿ ಮಂಟಪದ ಸುರಕ್ಷೆಗಾಗಿ ಇರುವವರು ಬಾಂಬ್ ಎಸೆದ ವ್ಯಕ್ತಿಯನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವನ ಜೊತೆಗಾರರು ಮುಂದೆ ಬಂದು ಐದು ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ಇದರಲ್ಲಿ ಇವರೆಲ್ಲರೂ ಗಾಯಗೊಂಡರು, ಈ ಘಟನೆ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೩ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಇವರ ಹೆಸರುಗಳು ಆಕಾಶ್, ಹೃದೋಯ ಮತ್ತು ಜೀವನ್ ಎಂದು ಗುರುತಿಸಲಾಗಿದೆ.

ಇಲ್ಲಿಯ ಕೋಟ್ಯಾಳಿ ಪೊಲೀಸ ಠಾಣೆಯ ಪೊಲೀಸ ಅಧಿಕಾರಿ ಇನೆಮುಲ್ ಹಸನ್ ಇವರು, ರಾತ್ರಿ ಸುಮಾರು ೮ ಗಂಟೆಗೆ ಕೆಲವು ಕಳ್ಳರು ಮಂಟಪದಲ್ಲಿನ ಓರ್ವ ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡುರು. ಅಲ್ಲಿ ನೆರೆದಿದ್ದವರು ಕಳ್ಳರನ್ನು ತಡೆಯುವ ಪ್ರಯತ್ನ ಮಾಡಿದಾಗ ೫ ಜನರ ಮೇಲೆ ಚಾಕುವಿನಿಂದ ದಾಳಿ ಮಾಡಿದರು. ಈ ಕಳ್ಳರು ಬಾಟಲಿ ಕೂಡ ಎಸೆದರು. ಅದರಲ್ಲಿ ಸೀಮೆಎಣ್ಣೆ ತುಂಬಿಸಿ ಅದನ್ನೇ ಬಾಂಬ್ ಎಂದು ಉಪಯೋಗಿಸಿದ್ದರು ಎಂದು ಹೇಳಲಾಗುತ್ತಿದೆ; ಆದರೆ ಬಾಟಲಿ ಒಡೆಯಲಿಲ್ಲ. ಆ ಬಾಟಲಿ ಜನರನ್ನು ಹೆದರಿಸುವುದಕ್ಕಾಗಿ ಎಸೆಯಲಾಗಿತ್ತು. ಜನರು ಹೆದರಬೇಕು ಮತ್ತು ಅವರ ಭಯದ ಲಾಭ ಪಡೆದು ಓಡಿ ಹೋಗಬೇಕೆಂದು ಕಳ್ಳರಿಗೆ ಅನಿಸಿತ್ತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಈಗಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳು ನೋಡುತ್ತಿದ್ದಾರೆ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಪ್ರಯತ್ನ ಹಿಂದುಗಳು ಏಕೆ ಮಾಡುವರು ? ಹಿಂದೂಗಳು ಪೆಟ್ರೋಲ್ ಬಾಂಬ್ ಎಸೆಯುವರು, ಇದರ ಮೇಲೆ ಯಾರು ವಿಶ್ವಾಸ ಇಡುವರು ?