ರಾಜ್ಯದಲ್ಲಿ ಇರಬೇಕಿದ್ದರೆ ಕನ್ನಡ ಭಾಷೆಯನ್ನು ತಿಳಿದುಕೊಳ್ಳಲೇ ಬೇಕು ! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಬೆಂಗಳೂರು – ನವೆಂಬರ 1, ಕರ್ನಾಟಕ ರಾಜ್ಯದ ಸ್ಥಾಪನೆಯ ದಿನವಾಗಿದೆ. ಇದು ಕನ್ನಡಿಗರಿಗೆ ಹಬ್ಬದ ದಿನವಾಗಿದೆ. ನಾನು ಒಂದು ಹೊಸ ಕಾರ್ಯಕ್ರಮವನ್ನು ನಿರ್ಮಿಸಿದ್ದೇನೆ. ಇದರಡಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ(ಐ.ಟಿ) ಕ್ಷೇತ್ರ ಸೇರಿದಂತೆ ಎಲ್ಲ ಶಾಲೆ ಮತ್ತು ಕಾಲೇಜು, ಕಾರ್ಖಾನೆ, ಉದ್ಯೋಗಗಳಲ್ಲಿ ಈ ದಿನ ಕನ್ನಡ ಧ್ವಜವನ್ನು ಹಾರಿಸುದು ಅನಿವಾರ್ಯವಾಗಿದೆ. ಹಾಗೆಯೇ ಕನ್ನಡವನ್ನು ತಿಳಿದುಕೊಳ್ಳದೇ ಕರ್ನಾಟಕದಲ್ಲಿ ಯಾರೂ ವಾಸಿಸಲು ಸಾಧ್ಯವಿಲ್ಲ, ಎನ್ನುವುದನ್ನು ಪ್ರತಿಯೊಬ್ಬರು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಹೇಳಿದ್ದಾರೆ. `ಬೆಂಗಳೂರು ನಗರ ಪ್ರದೇಶದಲ್ಲಿ ವಾಸಿಸುವ ಸುಮಾರು ಶೇ.50 ರಷ್ಟು ಜನರು ಇತರ ರಾಜ್ಯದವರಾಗಿದ್ದಾರೆ ಮತ್ತು ಅವರೂ ಕನ್ನಡ ಕಲಿಯಲು ಪ್ರಾಮುಖ್ಯತೆ ನೀಡಬೇಕು’, ಎಂದೂ ಅವರು ಹೇಳಿದರು.

ಉಪಮುಖ್ಯಮಂತ್ರಿ ಶಿವಕುಮಾರ ಇವರು ಕನ್ನಡ ಬೆಂಬಲಿಸುವ ಸಂಘಟನೆಗಳಿಗೆ ಎಚ್ಚರಿಕೆ ನೀಡಿ, ಅವರು ಈ ಹೆಜ್ಜೆಯನ್ನು ಎತ್ತಲು ಸಂಸ್ಥೆ ಅಥವಾ ಉದ್ಯಮಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೆ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಹಾರಾಷ್ಟ್ರದಲ್ಲಿ ಯಾರಾದರೂ ಮರಾಠಿ ಕಲಿಯುವುದು ಮತ್ತು ಮಾತನಾಡುವುದು ಕಡ್ಡಾಯಗೊಳಿಸಿದರೆ, ಅವರನ್ನು ಸಂಕುಚಿತ ಮನಸ್ಸಿನವರು ಎಂದು ಹೇಳುವ ಕಾಂಗ್ರೆಸ್ ಈಗ ತಾನು ಸ್ವತಃ ಇದನ್ನು ಮಾಡುತ್ತಿದೆ, ಇದು ಕಾಂಗ್ರೆಸ್ಸಿನ ದ್ವಂದ್ವ ನೀತಿಯಾಗಿದೆ !