ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರಿಂದ ಇಲ್ಲಿಯವರೆಗೆ ೩೫ ದುರ್ಗಾ ಮಂಟಪದ ಮೇಲೆ ದಾಳಿ

ಢಾಕಾ (ಬಾಂಗ್ಲಾದೇಶ) – ಢಾಕಾದ ಪೊಲೀಸ ಅಧಿಕಾರಿ ಮಹಮ್ಮದ್ ಮೋಯಿನುಲ್ ಇಸ್ಲಾಂ ಇವರು, ಅಕ್ಟೋಬರ್ ಒಂದರಿಂದ ದುರ್ಗಾ ಪೂಜೆ ಮಂಟಪದಲ್ಲಿ ೩೫ ದುರ್ಘಟನೆಗಳು ನಡೆದಿವೆ. ಈ ಪ್ರಕರಣಗಳಲ್ಲಿ ೧೧ ದೂರು ದಾಖಲಿಸಲಾಗಿದ್ದು ೨೪ ಘಟನೆಗಳು ಸಾಮಾನ್ಯ ಎಂದು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ೧೭ ಜನರನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಭಾಗಿ ಆಗಿರುವವರನ್ನು ಯಾರನ್ನು ಬಿಡುವುದಿಲ್ಲ ಮತ್ತು ಅವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ.

೧. ದುರ್ಗಾ ಪೂಜೆಯ ಕೆಲವು ವಾರಗಳ ಹಿಂದೆ ಇಸ್ಲಾಮಿ ಗುಂಪಿನಿಂದ ನೀಡಲಾದ ಬೆದರಿಕೆಯ ಹಿನ್ನೆಲೆಯಲ್ಲಿ ಮಧ್ಯಂತರ ಸರಕಾರದ ಧಾರ್ಮಿಕ ವಿಷಯಗಳು ಸಲಹೆಗಾರ ಎ.ಎಂ.ಎಫ್. ಖಾಲಿದ್ ಹುಸೇನ್ ಇವರು ಹಿಂದುಗಳ ಹಬ್ಬಗಳ ಸಮಯದಲ್ಲಿ ಧಾರ್ಮಿಕ ಸೌಹಾರ್ದತೆ ಹಾಳು ಮಾಡುವ ಅಥವಾ ಪ್ರಾರ್ಥನಾ ಸ್ಥಳಗಳನ್ನು ಗುರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆವು ಎಂದು ಘೋಷಿಸಿದ್ದರು.

೨. ಒಂದು ಕಡೆಗೆ ದಾಳಿ ನಡೆಯುತ್ತಿರುವಾಗ, ಇನ್ನೊಂದು ಕಡೆ ಬಾಂಗ್ಲಾದೇಶದ ಸೈನ್ಯದಳದ ಪ್ರಮುಖ ವಾಕರ್-ಉಝ-ಝಾಮಾ, ನೌಕಾಪಡೆಯ ಪ್ರಮುಖ ಎಂ. ನಜಮೂಲ ಹಸನ್ ಮತ್ತು ವಾಯುಪಡೆಯ ಪ್ರಮುಖ ಹಸನ್ ಮಹಮುದ್ ಖಾನ್ ಇವರು ಅಕ್ಟೋಬರ್ ೧೧ ರಂದು ಢಾಕಾದಲ್ಲಿನ ರಮನಾ ಕಾಲಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

೩. ದೇಶದ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ಮಹಮ್ಮದ್ ಸಜೀವ ಇವರು ಕೂಡ ಇಲ್ಲಿಯ ಗಲ್ಲಾಮಾರಿ ಹರಿಚಂದ ಟಾಗೋರ್ ದೇವಸ್ಥಾನ ಮತ್ತು ಬಾಗಮಾರ್ ಗೋವಿಂದ ದೇವಸ್ಥಾನದಲ್ಲಿ ದುರ್ಗಾ ಪೂಜಾ ಮಂಟಪಕ್ಕೆ ಹೋಗಿ ಹಿಂದೂ ಜನಾಂಗದ ಸದಸ್ಯರಿಗೆ ಶುಭಾಶಯಗಳು ಹೇಳಿದರು.

೪. ಅಕ್ಟೋಬರ್ ೧೩ ರಂದು ದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಪ್ರಾ. ಮಹಮ್ಮದ್ ಯುನೂಸ್ ಡಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರ ಹಬ್ಬದ ಸಮಯದಲ್ಲಿ ದಾಳಿ ಮಾಡಿರುವ ಒಂದಾದರೂ ಘಟನೆ ನಡೆದಿದ್ದರೆ, ಆಗ ದೇಶದಲ್ಲಿ ಅವರು ರಸ್ತೆಗೆ ಇಳಿದು ಆಕಾಶ ಪಾತಾಳ ಒಂದುಗೂಡಿಸುತ್ತಿದ್ದರು ಮತ್ತು ಅವರಿಗೆ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಬೆಂಬಲಿಸುತ್ತಿದ್ದರು !