ಬಸ್ ಡ್ರೈವರ್ ಮತ್ತು ಕಂಡಕ್ಟರ್ ಇವರನ್ನು ಸಮಾಧಾನ ಪಡಿಸಲು ಪ್ರಯತ್ನ
ಬೆಂಗಳೂರು – ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ) ಯ ಬಸ್ ಡ್ರೈವರ್ ಗಳಿಗೆ ದಸರಾದ ದಿನದಂದು ವಾಹನ ಪೂಜೆ ಮಾಡುವುದಕ್ಕಾಗಿ (ಆಯುಧ ಪೂಜೆಗಾಗಿ) ಸರಕಾರದಿಂದ ಪ್ರತಿಯೊಂದು ವಾಹನಕ್ಕೆ ೧೦೦ ರೂಪಾಯಿ ನೀಡಲಾಗುತ್ತದೆ. ಈ ಅತ್ಯಲ್ಪ ಹಣದಿಂದ ಡ್ರೈವರ್ ಮತ್ತು ಕಂಡಕ್ಟರ್ ಬೇಸರಪಟ್ಟಿದ್ದರು. ಆದ್ದರಿಂದ ಕೆ.ಎಸ್.ಆರ್.ಟಿ.ಸಿ ಯಿಂದ ಆಯುಧ ಪೂಜೆ ಖರ್ಚಿಗಾಗಿ ಪ್ರತಿ ಬಸ್ಸಿಗೆ ೧೦೦ ರೂಪಾಯಿ ಬದಲು ೨೫೦ ರೂಪಾಯಿ ನೀಡಲಾಗಿದೆ. ‘ಕೆ.ಎಸ್.ಆರ್.ಟಿ.ಸಿ.ಯು ಒಂದು ಮನವಿಯಲ್ಲಿ, ಒಂದು ಯೂನಿಟ್ ನಲ್ಲಿ ೧೦೦ ರಿಂದ ೫೦೦ ಬಸ್ಸುಗಳು ಇವೆ. ಆಯುಧ ಪೂಜೆಗಾಗಿ ೨೦೦೮ ವರೆಗೆ ಪ್ರತಿ ಬಸ್ಸಿಗೆ ೧೦ ರೂಪಾಯಿ ನೀಡಲಾಗುತ್ತಿತ್ತು. ೨೦೦೯ ರಲ್ಲಿ ಈ ಹಣ ಹೆಚ್ಚಿಸಿ ಪ್ರತಿ ಬಸ್ಸಿಗೆ ೩೦ ರೂಪಾಯಿ ಮಾಡಲಾಯಿತು, ೨೦೧೬ ರಲ್ಲಿ ಪ್ರತಿ ಬಸ್ಸಿಗೆ ೫೦ ರೂಪಾಯಿ ಹಾಗೂ ೨೦೧೭ ರಲ್ಲಿ ಈ ಹಣ ಪ್ರತಿ ಬಸ್ಸಿಗೆ ೧೦೦ ಮಾಡಲಾಯಿತು. ಸಾರಿಗೆ ಸಚಿವರು ಆಯುಧ ಪೂಜೆಗಾಗಿ ಈಗನ ೧೦೦ ರೂಪಾಯಿ ಪ್ರತಿ ಬಸ್ಸಿನ ಹಣ ಹೆಚ್ಚಿಸಿ ೨೫೦ ರೂಪಾಯಿ ಮಾಡುವ ಆದೇಶ ನೀಡಿದ್ದಾರೆ. ೨೦೨೪ ರಿಂದ ಸುಧಾರಿತ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುರಾಜ್ಯದ ಕಾಂಗ್ರೆಸ್ ಸರಕಾರ ಸಿಬ್ಬಂದಿಗಳ ಕಣ್ಣು ಒರೆಸುವ ಕೆಲಸ ಮಾಡಿದೆ. ಇಷ್ಟು ಕಡಿಮೆ ಹಣದಲ್ಲಿ ಪೂಜೆಯ ವಸ್ತುಗಳು ದೊರೆಯುತ್ತದೆಯೇ ? ‘ನಾವು ಏನಾದರೂ ಮಾಡುತ್ತಿದ್ದೇವೆ’, ಇದನ್ನು ಜನರಿಗೆ ತೋರಿಸುವುದಕ್ಕಾಗಿ ಸರಕಾರ ಈ ಹಣ ಹೆಚ್ಚಿಸಿದೆ ! |