ಲೈಸೆನ್ಸ್ ಹಾಗೂ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಮುಸಲ್ಮಾನನನ್ನು ತಡೆದ ಟ್ರಾಫಿಕ್ ಪೋಲೀಸ್‌ಗೆ ಜೀವ ಬೆದರಿಕೆ

ಸಂಭಲ್ (ಉತ್ತರ ಪ್ರದೇಶ) – ಲೈಸೆನ್ಸ್ ಹಾಗೂ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ರಾಹಿಶ ಅಹ್ಮದ ಹೆಸರಿನ ವೃದ್ಧ ಮುಸಲ್ಮಾನನ್ನು ಟ್ರಾಫಿಕ್ ಪೊಲೀಸ್ ದೇವೇಂದ್ರ ಕುಮಾರ ಇವರು ಹಿಡಿದಾಗ ಆತ ಪೊಲೀಸರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಪೊಲೀಸರು ರಹಿಶನನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಘಟನೆ ಅಕ್ಟೋಬರ 8 ರಂದು ಸಂಭವಿಸಿದೆ.

ಪೊಲೀಸ್ ಹವಾಲ್ದಾರ ದೇವೇಂದ್ರ ಕುಮಾರ ಇವರು ರಹಿಶನನ್ನು ಬೈಕ್‌ನಿಂದ ಹೋಗುತ್ತಿರುವಾಗ ತಡೆದಾಗ ರಹಿಶನು ದೇವೆಂದ್ರ ಕುಮಾರ ಇವರ ಹೊಟ್ಟೆಯ ಕಡೆಗೆ ಬೆರಳು ತೋರಿಸುತ್ತಾ, ‘ಮತ್ತೊಮ್ಮೆ ನಿಲ್ಲಿಸಿದರೆ ಚಾಕುವಿನಿಂದ ಇರಿಯುತ್ತೇನೆ’ ಎಂದು ಬೆದರಿಕೆ ಹಾಕಿದನು. ದೇವೇಂದ್ರ ಕುಮಾರನೊಂದಿಗೆ ಇರುವ ಇನ್ನೊಬ್ಬ ಪೊಲೀಸರು ಪ್ರಕರಣದ ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗ ರಹಿಶನು ಪೊಲೀಸರ ಮೇಲೆ ಲಂಚದ ಆರೋಪ ಮಾಡಿದನು.

ಸಂಪಾದಕೀಯ ನಿಲುವು

  • ನಿಯಮವನ್ನು ಉಲ್ಲಂಘಿಸುವುದು ಮತ್ತು ಪೊಲೀಸರಿಗೆ ಜೀವ ಬೆದರಿಕೆ ಹಾಕುವವರನ್ನು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿ ಗಲ್ಲು ಶಿಕ್ಷೆಯನ್ನೇ ನೀಡಬೇಕು !
  • ದೇಶದಲ್ಲಿ ‘ಅಸುರಕ್ಷಿತ’ರಾಗಿರುವ ಮುಸ್ಲಿಮರು ಪೊಲೀಸರಿಗೆ ಜೀವ ಬೆದರಿಕೆ ಹಾಕುತ್ತಾರೆ !