‘ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳ ಸಂದರ್ಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಸಾಧನೆಯ ಸುವರ್ಣಾವಕಾಶದ ಲಾಭ ಪಡೆಯಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ಮನವಿ !

ವ್ಯಕ್ತಿಯ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳು, ಅವುಗಳ ಪರಸ್ಪರರಲ್ಲಿರುವ ಸಂಯೋಗ, ಚಿಹ್ನೆಗಳು, ಎತ್ತರ ಮತ್ತು ಆಕಾರ ಇವುಗಳ ಆಧಾರದಿಂದ ಒಬ್ಬ ವ್ಯಕ್ತಿಯ ಸ್ವಭಾವ, ಗುಣದೋಷ, ಆಯುಷ್ಯ (ಜೀವಮಾನ), ಭಾಗ್ಯ (ಅದೃಷ್ಟ), ಪ್ರಾರಬ್ಧ ಇತ್ಯಾದಿ ವಿಷಯಗಳನ್ನು ತಿಳಿಯಬಹುದು. ಈ ಶಾಸ್ತ್ರವು ‘ಹಸ್ತ ಮತ್ತು ಪಾದ ಸಾಮುದ್ರಿಕ ಶಾಸ್ತ್ರ’ ಎಂದು ಗುರುತಿಸಲ್ಪಡುತ್ತದೆ. ಈ ಪ್ರಾಚೀನ ವಿದ್ಯೆಯ ಸಂವರ್ಧನೆಗಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಂಶೋಧನೆಯ ಕಾರ್ಯ ನಡೆಯಲಿದೆ. ಈ ಸಂಶೋಧನೆಯು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಇರಲಿದೆ. ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇವರು ಹಸ್ತ-ಸಾಮುದ್ರಿಕ ಶಾಸ್ತ್ರದ ಅಭ್ಯಾಸ ಇದ್ದರೆ ಅವರು ಈ ಕಾರ್ಯದಲ್ಲಿ ಭಾಗವಹಿಸಬಹುದು.

ಪ್ರಸ್ತುತ ಫೋಂಡಾ, ಗೋವಾ ಇಲ್ಲಿಯ ಸಂಶೋಧನಾ ಕೇಂದ್ರದಲ್ಲಿ ಹಸ್ತ-ಪಾದ ಸಾಮುದ್ರಿಕ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮುಂದಿನ ಸೇವೆಗಳು ಲಭ್ಯ ಇರುತ್ತವೆ.

೧. ಸಂಶೋಧನೆಯ ಆಧ್ಯಾತ್ಮಿಕ ವಿಷಯಗಳು

೧ ಅ. ಆಧ್ಯಾತ್ಮಿಕ ತೊಂದರೆಗಳಿರುವ ವ್ಯಕ್ತಿ : ವ್ಯಕ್ತಿಯ ಕೆಟ್ಟ ಪ್ರಾರಬ್ಧ ಮತ್ತು ಸದ್ಯದ ಪ್ರತಿಕೂಲಕಾಲದ ಕಾರಣಗಳಿಂದ ಸೂಕ್ಷ್ಮದಲ್ಲಿ ಅಸ್ತಿತ್ವದಲ್ಲಿರುವ ಕೆಟ್ಟ ಶಕ್ತಿಗಳು ವ್ಯಕ್ತಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡುತ್ತವೆ. ‘ಇದಕ್ಕೆ ‘ಆಧ್ಯಾತ್ಮಿಕ ತೊಂದರೆ’ ಎನ್ನುತ್ತಾರೆ. ‘ಒಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆ ಇದೆ ಎಂದು ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದಿಂದ ತಿಳಿದುಕೊಳ್ಳಲು ಆಗುತ್ತದೆಯೆ ?’, ಈ ಸಂದರ್ಭದಲ್ಲಿ ಸಂಶೋಧನೆ ಮಾಡಬೇಕಾಗಿದೆ.

೧ ಆ. ಉಚ್ಚ ಲೋಕಗಳಿಂದ ಜನ್ಮತಾಳಿದ ವ್ಯಕ್ತಿ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ವರ್ಗ, ಮಹರ್, ಜನ ಮುಂತಾದ ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನ್ಮ ತಾಳಿದ ೧ ಸಾವಿರಕ್ಕೂ ಹೆಚ್ಚು ಬಾಲಕರನ್ನು ಗುರುತಿಸಿದ್ದಾರೆ. ಅವರನ್ನು ‘ದೈವಿ ಬಾಲಕರು’ ಎಂದು ಕರೆಯಲಾಗುತ್ತದೆ. ಈ ಬಾಲಕರು ಹುಟ್ಟಿದಾಗಿನಿಂದಲೇ ಆಧ್ಯಾತ್ಮಿಕದೃಷ್ಟಿಯಲ್ಲಿ ಪ್ರತಿಭಾಶಾಲಿಗಳಾಗಿದ್ದಾರೆ. ಈ ಬಾಲಕರಲ್ಲಿನ ಯಾವ ಬಾಲಕರು ಈಗ ಯುವ ಸ್ಥಿತಿಗೆ ತಲುಪಿದ್ದಾರೆ, ಅವರ ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ‘ಅವರ ಜನ್ಮ ಉಚ್ಚ ಲೋಕದಿಂದ ಆಗಿರುತ್ತದೆ ಎಂಬುದು ಗಮನಕ್ಕೆ ಬರುತ್ತದೆಯೇ ?’, ಈ ಸಂದರ್ಭದಲ್ಲಿ ಸಂಶೋಧನೆ ಮಾಡಬೇಕಾಗಿದೆ.

೧ ಇ. ಸಂತರು ಮತ್ತು ಸದ್ಗುರುಗಳ ಸಂದರ್ಭದಲ್ಲಿ ಸಂಶೋಧನೆ : ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ೧.೩.೨೦೨೪ ರ ವರೆಗೆ ೧೨೭ ಸಾಧಕರು ಸಂತಪದವಿಯನ್ನು ಪಡೆದಿದ್ದಾರೆ. ಅವರಲ್ಲಿನ ೧೭ ಸಂತರು ಸದ್ಗುರು ಪದವಿಗೆ ತಲುಪಿದ್ದಾರೆ. ‘ಸಂತರು ಮತ್ತು ಸದ್ಗುರುಗಳು ಇವರ ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದ ದೃಷ್ಟಿಯಲ್ಲಿ ಅಧ್ಯಯನ ಮಾಡಿ ಅದರಲ್ಲಿ ವೈಶಿಷ್ಟ್ಯಪೂರ್ಣವಾದ ಅಂಶಗಳು ಏನಾದರೂ ಕಂಡುಬರುತ್ತವೆಯೇ’, ಎಂದು ಅಧ್ಯಯನ ಮಾಡಬೇಕಾಗಿದೆ. ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿ, ಉಚ್ಚ ಲೋಕದಿಂದ ಜನ್ಮ ಪಡೆದಿರುವ ಮಕ್ಕಳು ಮತ್ತು ಸಂತರು ಹಾಗೂ ಸದ್ಗುರು ಪದವಿಯನ್ನು ಪಡೆದಿರುವ ಸಾಧಕರು ಇವರ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಕೆಲವು ಚಿಹ್ನೆಗಳು ಮತ್ತು ಛಾಯಾಚಿತ್ರಗಳು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ಸಂಗ್ರಹದಲ್ಲಿವೆ.

೨. ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದ ಕುರಿತು ಗ್ರಂಥಗಳ ರಚನೆ ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದ ಬಗ್ಗೆ ಸಮಾಜಕ್ಕೆ ತಿಳಿಯಬೇಕು, ಹಾಗೆಯೇ ಹೊಸ ಸಂಶೋಧನೆ ನಡೆಸಿ ಶಾಸ್ತ್ರದ ಸಂವರ್ಧನೆ ಯಾಗಬೇಕು, ಇದಕ್ಕಾಗಿ ಈ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳನ್ನು ರಚಿಸಬೇಕೆಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಉದ್ದೇಶಿಸಿದೆ. ವಿಶ್ವವಿದ್ಯಾಲಯದ ಸಂಗ್ರಹದಲ್ಲಿರುವ ಲೇಖನ, ಸಂದರ್ಭಗ್ರಂಥ ಮತ್ತು ಹೊಸ ಸಂಶೋಧನೆ ಇವುಗಳನ್ನು ಆಧರಿಸಿ ಗ್ರಂಥ ರಚಿಸಬಹುದಾಗಿದೆ. ಗ್ರಂಥಗಳ ರಚನೆ ಶೀಘ್ರವಾಗಿ ಆಗಬೇಕೆಂದು ಲೇಖನದ ಸಂಕಲನ ಮಾಡುವುದು, ಗ್ರಂಥಗಳ ಅನುಕ್ರಮಣಿಕೆ ಸಿದ್ಧಪಡಿಸುವುದು, ಅನುಕ್ರಮಣಿಕೆಯಂತೆ ಲೇಖನಗಳನ್ನು ಜೋಡಿಸಿ ಅವುಗಳ ಅಂತಿಮ ಸಂಕಲನ ಮಾಡುವುದು ಇತ್ಯಾದಿ ಸೇವೆಗಳಿಗಾಗಿ ಸಾಧಕರ ಅವಶ್ಯಕತೆ ಇದೆ.

ಆವಶ್ಯಕ ಕೌಶಲ್ಯ

ಇದಕ್ಕಾಗಿ ಹಸ್ತ-ಪಾದ ಸಾಮುದ್ರಿಕ ಶಾಸ್ತ್ರದ ಜ್ಞಾನ, ಹಾಗೆಯೇ ಗಣಕಯಂತ್ರ ನಡೆಸಲುಬೇಕಾದ ಜ್ಞಾನ ಅಗತ್ಯವಿದೆ. ಮರಾಠಿ ಭಾಷೆಯ ವ್ಯಾಕರಣ ಮತ್ತು ಪದಗಳ ರಚನೆ ಇವುಗಳ ಜ್ಞಾನ ಇರುವುದು ಅವಶ್ಯಕವಿದೆ. ಇದರಿಂದ ಗ್ರಂಥ ಸಂಕಲನ ಕಲಿಸಲು ಸುಲಭ ವಾಗುವುದು. ಈ ಸೇವೆಯನ್ನು ಮನೆಯಲ್ಲಿದ್ದು ಸಹ ಮಾಡಬಹುದು. ಮೇಲಿನ ಸೇವೆಯನ್ನು ಮಾಡಲು ಬಯಸುವವರು ಜಿಲ್ಲಾಸೇವಕರ ಮುಖಾಂತರ ಮುಂದಿನ ಕೋಷ್ಟಕದಲ್ಲಿ ತಮ್ಮ ವಿವರಗಳನ್ನು [email protected]  ಈ ವಿ-ಅಂಚೆ ವಿಳಾಸಕ್ಕೆ ಅಥವಾ  ಅಂಚೆ ವಿಳಾಸಕ್ಕೆ ಕಳುಹಿಸಬೇಕು. ವಿ-ಅಂಚೆ ಕಳುಹಿಸುವಾಗ ಅದರ ವಿಷಯದಲ್ಲಿ ದಯವಿಟ್ಟು ‘ಹಸ್ತ-ಪಾದ ಸಾಮುದ್ರಿಕ’ (Hast-Paad Samudrik) ಎಂದು ಉಲ್ಲೇಖಿಸಬೇಕು.

ಅಂಚೆ ವಿಳಾಸ

– ಶ್ರೀ. ಆಶಿಷ ಸಾವಂತ, C/O ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಭಗವತಿಕೃಪಾ ಅಪಾರ್ಟಮೆಂಟ್ಸ್‌, ಎಸ್‌-೧, ಎರಡನೇ ಮಹಡಿ, ಬಿಲ್ಡಿಂಗ ಎ, ಢವಳಿ, ಫೋಂಡಾ, ಗೋವಾ – ೪೦೩೪೦೧