ಹಿಂದೂಗಳಿಗೆ ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಪ್ರಯತ್ನ !
ಸಾರಣ (ಬಿಹಾರ) – ಸಾರಣ ಜಿಲ್ಲೆಯ ರವಿಲಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚನ್ನು ಆಕ್ರೋಶಿತ ಜನರು ಕೆಡವಿದರು. ಶಾಲೆಯ ಹೆಸರಿನಲ್ಲಿ ಈ ಚರ್ಚ್ ಅನ್ನು ಕಟ್ಟಲಾಗುತ್ತಿತ್ತು. ಕ್ರಿಶ್ಚಿಯನ್ ಮಿಷನರಿಗಳು ಅವರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಆಶಿಷ ಅವರು ಈ ಸಂದರ್ಭದಲ್ಲಿ ಪ್ರಕರಣ ದಾಖಲಿಸಿ ಗ್ರಾಮಸ್ಥರೊಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 8 ರಂದು, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗಿತ್ತು, ಇದರಲ್ಲಿ ಪ್ರದೇಶದಲ್ಲಿ ಕ್ರಿಶ್ಚಿಯನ್ ಮತಾಂತರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪೊಲೀಸರಿಗೆ ಇನ್ನೂ ಮತಾಂತರದ ಯಾವುದೇ ಪುರಾವೆಗಳು ಸಿಕ್ಕಿಲ್ಲ; ಆದರೆ ಪ್ರಕರಣ ಗಂಭೀರವಾಗಿರುವುದರಿಂದ ಉಪವಿಭಾಗೀಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆಮಿಷವೊಡ್ಡಿ ಮತಾಂತರ ಮಾಡಲು ಪ್ರಯತ್ನಿಸಲಾಗುತ್ತಿತ್ತು!
ಚರ್ಚ್ ನಿರ್ಮಾಣ ಕಾರ್ಯ 2 ವರ್ಷಗಳಿಂದ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಾಮನಾಥ್ ಮಾಂಝಿ ಎಂಬ ಸ್ಥಳೀಯ ವ್ಯಕ್ತಿ ಏಪ್ರಿಲ್ 3, 2025 ರಂದು ಇದರ ವಿರುದ್ಧ ದೂರು ದಾಖಲಿಸಿದ್ದರು.
ಮಾಂಝಿ ಹೇಳುವ ಪ್ರಕಾರ:
1. ಜಹಾನಾಬಾದ್ ನಿಂದ ಜ್ಯೋತಿ ಪ್ರಕಾಶ ಎಂಬ ವ್ಯಕ್ತಿ ಭೂಮಿ ಖರೀದಿಸಿ ಶಾಲೆ ಕಟ್ಟುವ ಬಗ್ಗೆ ಮಾತನಾಡುತ್ತಿದ್ದ. ಗ್ರಾಮಸ್ಥರು ಶಾಲೆಯೆಂದು ತಿಳಿದು ನಿರ್ಮಾಣ ಕಾರ್ಯದಲ್ಲಿ ನೆರವಾದರು; ಆದರೆ ನಂತರ ಅಲ್ಲಿ ಚರ್ಚಿನ ಫಲಕವನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾದರು; ನಂತರ ಮಿಷನರಿಗಳು ಗ್ರಾಮಸ್ಥರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಪ್ರಾರಂಭಿಸಿದರು. ಇದರಿಂದ ಜನರು ಕೋಪಗೊಂಡು ಚರ್ಚ್‌ನ ವಿರುದ್ಧ ನಿಂತರು.
2. ಮಿಷನರಿಗಳು ಕ್ರಮೇಣ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬರಲು ಪ್ರಾರಂಭಿಸಿದರು ಮತ್ತು ಪ್ರತಿ ಭಾನುವಾರ ಪ್ರಾರ್ಥನೆ ಮಾಡಲು ಪ್ರಾರಂಭಿಸಿದರು. ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆ ತಲಾ 1 ಸಾವಿರ ರೂಪಾಯಿಗಳನ್ನು ಒಂದು ಪ್ಯಾಕೆಟ್ ನಲ್ಲಿ ನೀಡಲಾಗುತ್ತಿತ್ತು. ಜನರನ್ನು ಹಣ ಮತ್ತು ಆಹಾರ ಧಾನ್ಯಗಳ ಆಮಿಷವೊಡ್ಡಿ ಸಿಲುಕಿಸಲಾಗುತ್ತಿತ್ತು.
3. ಅವರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ, ಅವರ ಹೆಣ್ಣುಮಕ್ಕಳ ಮದುವೆ ಮತ್ತು ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಲಾಗುವುದು ಎಂದು ಮಿಷನರಿಗಳು ಹೇಳಿದರು. ಛಠ್ ಪೂಜೆಯಂತಹ ಹಿಂದೂ ಹಬ್ಬಗಳನ್ನು ಆಚರಿಸದಂತೆ ಜನರನ್ನು ತಡೆಯಲು ಪ್ರಾರಂಭಿಸಿದರು.
4. ಮಿಷನರಿಗಳು ಗ್ರಾಮಸ್ಥರಿಗೆ ವಿಶೇಷ ನೀರಿನ ಬಾಟಲಿಗಳನ್ನು ನೀಡಿ 20 ದಿನಗಳ ಕಾಲ ಕುಡಿಯಲು ಹೇಳಿದರು. ಹಾಗೆಯೇ ‘ಹಲ್ಲೆಲೂಯ’ (ಯೇಸುವನ್ನು ಸ್ತುತಿಸುವುದು) ಎಂದು ಹೇಳಲು ಸಲಹೆ ನೀಡಿದರು. ‘ನಿಮ್ಮ ದೇವರನ್ನು ಪೂಜಿಸುವುದನ್ನು ನಿಲ್ಲಿಸಿ, ಯೇಸುವಿನಲ್ಲಿ ನಂಬಿಕೆ ಇಡಿ, ಆಗ ನಿಮ್ಮ ದುಃಖ ದೂರವಾಗುತ್ತದೆ’ ಎಂದು ಅವರು ಹೇಳುತ್ತಿದ್ದರು.
🚨 Villagers in Revelganj, Saran Dt. (Bihar) demolish a church allegedly being built under the guise of a school 🏫✝️
Attempts were being made to convert Hindus using financial lures 💰
Lack of strict anti-conversion laws is emboldening missionary activities.
What began under… pic.twitter.com/FRVbzVWdyt
— Sanatan Prabhat (@SanatanPrabhat) April 11, 2025
ಸಾರಣದಲ್ಲಿ ಈ ಹಿಂದೆಯೂ ಚರ್ಚಿಗೆ ವಿರೋಧ ವ್ಯಕ್ತವಾಗಿತ್ತು!
ಸಾರಣದಲ್ಲಿ ಈ ಹಿಂದೆಯೂ ಮತಾಂತರದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. 2022 ರಲ್ಲಿ, ಜಟುವಾನ್ ಗ್ರಾಮದಲ್ಲಿ ಚರ್ಚನ್ನು ಕಟ್ಟಲಾಗುತ್ತಿತ್ತು, ಅದನ್ನು ದಲಿತರು ವಿರೋಧಿಸಿದ್ದರು. ಸ್ಥಳೀಯ ನಿವಾಸಿಯೊಬ್ಬರು ತಮಗೆ 1 ಲಕ್ಷ ರೂಪಾಯಿಗಳ ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿದ್ದರು. ಗ್ರಾಮಸ್ಥರ ವಿರೋಧದಿಂದ ಕ್ರಿಶ್ಚಿಯನ್ ಮಿಷನರಿಗಳು ಓಡಿಹೋದರು; ಅವರೆಲ್ಲರೂ ಆಂಧ್ರಪ್ರದೇಶದವರು ಎಂದು ಹೇಳಲಾಗಿತ್ತು.
ಸಂಪಾದಕೀಯ ನಿಲುವು
|