ಉಡುಪಿ – ಉಡುಪಿ ಜಿಲ್ಲೆಯ ಥೆಲಾರು ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದರ್ಶನಕ್ಕೆ ಹೋದ ವಿಶ್ವನಾಥ ಎಂಬ ಹಿಂದೂ ಯುವಕನ ಮೇಲೆ ಕೆಲವು ಮುಸ್ಲಿಮ ಯುವಕರು ದಾಳಿ ನಡೆಸಿದ್ದಾರೆ.
ವಿಶ್ವನಾಥ ದೇವಸ್ಥಾನಕ್ಕೆ ತಲುಪಿದ ತಕ್ಷಣ ರಿಯಾಜ್ ನು ತನ್ನ ಸ್ನೇಹಿತರಾದ ರಿಹಾನ್, ರೀಮನ್ ಮತ್ತು ರೆಫಾನ್ ಅವರು ಆತನನ್ನು ತಡೆದು ‘ನೀನು ಈ ದೇವಸ್ಥಾನಕ್ಕೆ ಏಕೆ ಬಂದೆ?’ ಎಂದು ಪ್ರಶ್ನಿಸಿದ್ದಾರೆ. ನಂತರ ಅವರ ನಡುವೆ ವಾಗ್ವಾದ ನಡೆದು ವಿಶ್ವನಾಥನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ವಿಶ್ವನಾಥ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಗಳಿಗೆ ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಹಾಗೂ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಪ್ರತಿಯೊಬ್ಬರ ಹಕ್ಕು. ಈ ರೀತಿ ಯಾರ ಮೇಲೂ ದಾಳಿ ಮಾಡುವುದು ಕೋಮು ಸೌಹಾರ್ದತೆ ಕೆಡಿಸುವ ಷಡ್ಯಂತ್ರ ಎಂದು ಹಿಂದೂ ಸಂಘಟನೆಗಳು ಹೇಳಿವೆ.
ಆರೋಪಿ ನಕಲಿ ಪತ್ರಕರ್ತ!
ರಿಯಾಜ್ ತಾನು ಪತ್ರಕರ್ತನೆಂದು ಹೇಳಿಕೊಳ್ಳುತ್ತಾನೆ. ಆತ ತನ್ನ ಮನೆ, ಕಾರು ಮತ್ತು ತೆಂಗಿನ ಮರದ ಮೇಲೂ ‘ಪತ್ರಕರ್ತ’ ಎಂದು ಬೋರ್ಡ್ ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಪತ್ರಕರ್ತನೆಂದು ಹೇಳಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಗ್ಗೆ ರಿಯಾಜ್ ವಿರುದ್ಧ ಈ ಮೊದಲೇ ಹಲವು ದೂರುಗಳು ದಾಖಲಾಗಿವೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ ಹಾಗಾಗಿ ಇದಕ್ಕಿಂತ ಭಿನ್ನವಾಗಿ ಏನು ನಡೆಯಲು ಸಾಧ್ಯ? |