ರಾಯಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 345ನೇ ಪುಣ್ಯತಿಥಿ ನಮನ ಸಮಾರಂಭ!
ರಾಯಗಡ – ಛತ್ರಪತಿ ಶಿವಾಜಿ ಮಹಾರಾಜರ 345ನೇ ಪುಣ್ಯತಿಥಿ ಇದೆ. ನಾನು ಶಿವಾಜಿ ಚರಿತ್ರೆ ಓದಿದ್ದೇನೆ. ಜೀಜಾಮಾತೆ ಛತ್ರಪತಿ ಶಿವಾಜಿ ಮಹಾರಾಜರಿಗೆ ಕೇವಲ ಜನ್ಮವನ್ನಷ್ಟೇ ನೀಡಲಿಲ್ಲ, ಬದಲಿಗೆ ಸ್ವರಾಜ್ಯ, ಸ್ವಧರ್ಮ ಮತ್ತು ಭಾಷೆಯನ್ನು ಪುನರುಜ್ಜೀವನಗೊಳಿಸುವ ಪ್ರೇರಣೆಯನ್ನೂ ನೀಡಿದರು. ಬಾಲ ಶಿವಾಜಿಗೆ ಇಡೀ ದೇಶವನ್ನು ಒಗ್ಗೂಡಿಸಿ ಸ್ವತಂತ್ರಗೊಳಿಸುವ ವಿಚಾರ ನೀಡಿದರು, ಹಾಗೆಯೇ ಹಿಂದವೀ ಸ್ವರಾಜ್ಯ ಸ್ಥಾಪಿಸುವ ಪ್ರೇರಣೆಯನ್ನೂ ನೀಡಿದರು. ಆದ್ದರಿಂದ ನಾನು ಮಾತಾ ಜೀಜಾಬಾಯಿಯವರಿಗೆ ನಮಿಸುತ್ತೇನೆ. ಶಿವಾಜಿ ಚರಿತ್ರೆಯನ್ನು ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಂದು ಮಗುವಿಗೂ ಕಲಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಬೇಡಿ ಎಂದು ಕೈಮುಗಿದು ವಿನಂತಿಸುತ್ತೇನೆ. ದೇಶ ಮತ್ತು ಜಗತ್ತು ಅವರ ಆದರ್ಶದಿಂದ ಪ್ರೇರಣೆ ಪಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ರಾಯಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 345ನೇ ಪುಣ್ಯತಿಥಿ ನಮನ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು. ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ಅಜಿತ ಪವಾರ್ ಸೇರಿದಂತೆ ಎಲ್ಲಾ ಸಂಸದರು ಮತ್ತು ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.