|
ಅಲಿಗಢ (ಉತ್ತರ ಪ್ರದೇಶ) – ಆಧುನಿಕ ವ್ಯಾಯಾಮ ಶಾಲೆಗೆ (ಜಿಮ್) ಹೋಗುತ್ತಿದ್ದ ಹಿಂದೂ ಯುವತಿಯನ್ನು ಇಬ್ಬರು ಮಕ್ಕಳ ತಂದೆಯಾದ ಜಿಮ್ ತರಬೇತುದಾರ ರಜಾ ಖಾನ್ ತಾನು ಹಿಂದೂ ಎಂದು ಸುಳ್ಳು ಹೇಳಿ ಪ್ರೇಮದ ಬಲೆಯಲ್ಲಿ ಬೀಳಿಸಿದನು. ‘ರಾಜಾ’ ಎಂಬ ಹೆಸರನ್ನು ಬಳಸಿ ಆ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅವನ ನಿಜವಾದ ಗುರುತು ಬಹಿರಂಗವಾದಾಗ, ಯುವತಿಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಡ ಹೇರಿದನು. ಈ ಬಗ್ಗೆ ಸಂತ್ರಸ್ತ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
1. ಸಂತ್ರಸ್ತ ಯುವತಿ ಪ್ರಕಾರ, ಜಿಮ್ ಗೆ ಹೋಗಲು ಪ್ರಾರಂಭಿಸಿದಾಗ, ರಜಾ ಖಾನ್ ತರಬೇತಿ ನೀಡುತ್ತಿದ್ದನು. ರಜಾ ಖಾನ್ ತನ್ನ ಹೆಸರು ‘ರಾಜಾ’ ಎಂದು ಹೇಳಿದ್ದನು ಮತ್ತು ನಿಧಾನವಾಗಿ ನನ್ನೊಂದಿಗೆ ಸ್ನೇಹ ಬೆಳೆಸಿದನು.
2. ಒಂದು ದಿನ ಅವನು ಯುವತಿಯನ್ನು ಹೋಟೆಲಿಗೆ ಕರೆದೊಯ್ದು ಬಲಾತ್ಕಾರ ಮಾಡಿದನು. ಅಲ್ಲದೇ ಯುವತಿಯ ಅಶ್ಲೀಲ ವಿಡಿಯೋ ಮಾಡಿದನು.
3. ರಜಾ ಖಾನ್ ನ ನಿಜವಾದ ಹೆಸರು ಬಹಿರಂಗಗೊಂಡಾಗ, ಆತ ಸಂತ್ರಸ್ತೆಯನ್ನು ಅಶ್ಲೀಲ ವಿಡಿಯೋ ತೋರಿಸಿ ಬೆದರಿಸಲು ಪ್ರಾರಂಭಿಸಿದನು. ಸಂತ್ರಸ್ತೆ ಮತಾಂತರಗೊಂಡು ನಮಾಜ್ ಮಾಡಬೇಕು ಎಂದು ರಜಾ ಖಾನ್ ಪ್ರಯತ್ನಿಸುತ್ತಿದ್ದನು.
4. ಸಂತ್ರಸ್ತ ಯುವತಿಯ ಕುಟುಂಬಸ್ಥರು ಒಳ್ಳೆಯ ಸಂಬಂಧವನ್ನು ನೋಡಿ ಅವಳ ಮದುವೆಯನ್ನು ನಿಶ್ಚಯಿಸಿದರು. ಇದರಿಂದ ಕೋಪಗೊಂಡ ರಜಾ ಯುವತಿಯ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಅವಳ ಅಶ್ಲೀಲ ವಿಡಿಯೋವನ್ನು ಕಳುಹಿಸಿದನು. ಇದರಿಂದ ಅವಳ ಮದುವೆ ಮುರಿಯಿತು.
5. ನಂತರ ಸಂತ್ರಸ್ತ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಪೋಷಕರೇ, ಮತಾಂಧ ಜಿಹಾದಿಗಳಿಂದ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಲು ‘ಲವ್ ಜಿಹಾದ್’ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ! |