ಶಿಮ್ಲಾ (ಹಿಮಾಚಲ ಪ್ರದೇಶ)ದಲ್ಲಿ ನಡೆದ ಘಟನೆ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿ ಕಾಲಿಬಾರಿ ರಸ್ತೆಯಲ್ಲಿ ಹುರಿಗಡಲೆ ಮತ್ತು ನಮಕೀನ್ (ಉಪ್ಪು ಖಾರ ಹಾಕಿದ ತಿನಿಸು) ಮಾರುವ ನಿಸಾರ ಅಹ್ಮದ ಎಂಬಾತ ಪದಾರ್ಥಗಳನ್ನು ಮಾರಾಟ ಮಾಡುವಾಗ ಅದರಲ್ಲಿ ಉಗುಳುತ್ತಿದ್ದಾನೆ ಎಂದು ದೇವಭೂಮಿ ಸಂಘರ್ಷ ಸಮಿತಿಯು ಆರೋಪಿಸಿದೆ. ಸಮಿತಿಯ ಕಾರ್ಯಕರ್ತರು ಆತನನ್ನು ಹೀಗೆ ಮಾಡುವುದನ್ನು ನೋಡಿದ್ದಾರೆ. ಅಲ್ಲದೆ, ಅಹ್ಮದ ಬಳಿ ಬೀದಿ ವ್ಯಾಪಾರದ ಪರವಾನಗಿಯೂ ಇಲ್ಲ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಸಮಿತಿಯ ಕಾರ್ಯಕರ್ತರು ಅಹ್ಮದನನ್ನು ವ್ಯಾಪಾರದ ಪರವಾನಗಿ ತೋರಿಸಲು ಕೇಳಿದಾಗ ಅವನಿಗೆ ತೋರಿಸಲು ಸಾಧ್ಯವಾಗಲಿಲ್ಲ. ಈ ಘಟನೆಯನ್ನು ಸಮಿತಿಯು ಫೇಸಬುಕ್ ನಲ್ಲಿ ನೇರ ಪ್ರಸಾರ ಮಾಡಿತ್ತು. ಇದರ ನಂತರ ಶಿಮ್ಲಾದ ಉಪಮೇಯರ ಉಮಾ ಕೌಶಲ ಅವರು, ಎಲ್ಲವೂ ಕಳವಳಕಾರಿ ವಿಷಯವಾಗಿದೆ. ಆರೋಪಗಳು ನಿಜವೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೇವಭೂಮಿ ಸಂಘರ್ಷ ಸಮಿತಿಯ ಸಹ ಸಂಯೋಜಕ ವಿಜಯ ಶರ್ಮಾ ಅವರು ಮಾತನಾಡಿ, ಶಿಮ್ಲಾದಲ್ಲಿ ಮುಸಲ್ಮಾನರನ್ನು ನೆಲೆಸುವ ಕೆಲಸ ಬಹಳ ಕಾಲದಿಂದ ನಡೆಯುತ್ತಿದೆ. ಇಲ್ಲಿನ ಮುಸಲ್ಮಾನರು ಹಿಂದೂಗಳಿಗೆ ಇಲ್ಲಿ ಕೆಲಸ ಮಾಡಲು ಅನುಮತಿಸುವುದಿಲ್ಲ. ಒಂದು ವರ್ಷದ ಹಿಂದೆ ಬೀದಿ ವ್ಯಾಪಾರಿಗಳ ಬಗ್ಗೆ ನೀತಿಯನ್ನು ತರುವ ಬಗ್ಗೆ ಚರ್ಚೆ ನಡೆದಿತ್ತು; ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಪೂರ್ಣ ಪ್ರಕರಣದಲ್ಲಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ದೊಡ್ಡ ಆಂದೋಲನ ಮಾಡಲಾಗುವುದು ಎಂದು ಅವರು ಆಗ್ರಹಿಸಿದರು.
ಆರೋಪ ಮಾಡಿದವರಿಗೇ ಪುರಾವೆಗಳನ್ನು ಹಾಜರುಪಡಿಸುವಂತೆ ಪೊಲೀಸರಿಂದ ನೋಟಿಸ್!
ಈ ಘಟನೆಯ ನಂತರ ಪೊಲೀಸರು, ‘ಹುರಿಗಡಲೆ ಮತ್ತು ಉಪ್ಪು ಖಾರ ಮಿಶ್ರಿತ ತಿನಿಸು (ನಮಕೀನ್) ಮೇಲೆ ಉಗುಳಿ ಮಾರಾಟ ಮಾಡಿದ ಆರೋಪವಿರುವ ವ್ಯಕ್ತಿಯ ವಿರುದ್ಧ ನಿಮ್ಮ ಬಳಿ ಯಾವುದೇ ಪುರಾವೆಗಳಿದ್ದರೆ, ಅದನ್ನು ನಮಗೆ ನೀಡಿ. ಹಾಗೆ ಮಾಡದಿದ್ದರೆ, ನಿಮ್ಮ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು 3 ಜನರಿಗೆ ನೋಟಿಸ್ ನೀಡಿದ್ದಾರೆ. (ಪುರಾವೆಗಳನ್ನು ಹುಡುಕುವ ಕೆಲಸ ಪೊಲೀಸರದ್ದೇ ಹೊರತು ಜನರದ್ದಲ್ಲ! – ಸಂಪಾದಕರು) ಆ ಮೂವರ ಹೆಸರುಗಳು ಕಲ್ಪನಾ ಶರ್ಮಾ, ಶ್ವೇತಾ ಮತ್ತು ವಿಜಯ ಶರ್ಮಾ ಆಗಿದೆ. ಈ ಮೂವರೂ ದೇವಭೂಮಿ ಸಂಘರ್ಷ ಸಮಿತಿಗೆ ಸೇರಿದವರು.
Action demanded against vendor Naseer Ahmed in Shimla for allegedly spitting on roasted chana before selling them!
Locals have reportedly stopped buying from such vendors. 🚫
Despite hundreds of such incidents across India,
why is there still NO national policy to deal with… pic.twitter.com/ckpkA2pTH9— Sanatan Prabhat (@SanatanPrabhat) April 11, 2025
ಸಂಪಾದಕೀಯ ನಿಲುವು
|