ಪುಣೆಯಲ್ಲಿ ‘ಮಹಾರಾಷ್ಟ್ರ ಮುಸ್ಲಿಂ ಕಾನ್ಫರೆನ್ಸ್’ ವಾರಿನ ಪ್ರಯುಕ್ತ ‘ಅಲ್ಲಾ ದೇವೇ ಅಲ್ಲಾ ದಿಲಾವೇ’ ಎಂದು ಫಲಕಗಳನ್ನು ಅಳವಡಿಸಿದೆ!

ಹಿಂದೂ ಸಂತರ ವಚನಗಳ ಮೇಲೆ ಇಷ್ಟೊಂದು ಪ್ರೀತಿ ಇದ್ದರೆ, ಈ ಸಂಘಟನೆಯು ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಸಂತ ತುಕಾರಾಂ ಮಹಾರಾಜರ ಅಭಂಗಗಳ ಫಲಕಗಳನ್ನು ಏಕೆ ಅಳವಡಿಸುವುದಿಲ್ಲ?

ಜಗದ್ಗುರು ಸಂತ ತುಕಾರಾಂ ಮಹಾರಾಜರ ಪಲ್ಲಕ್ಕಿ ಭಕ್ತಿಮಯ ವಾತಾವರಣದಲ್ಲಿ ದೇಹೂನಿಂದ ಪ್ರಸ್ಥಾನ!

‘ಜ್ಞಾನೋಬಾ-ತುಕಾರಾಂ’ ಮತ್ತು ‘ವಿಠ್ಠಲ-ವಿಠ್ಠಲ’ ಎಂಬ ಅಖಂಡ ಜಯಘೋಷ ಹಾಗೂ ತಾಳ-ಮೃದಂಗಗಳ ನಾದದೊಂದಿಗೆ ಜಗದ್ಗುರು ಸಂತ ತುಕಾರಾಂ ಮಹಾರಾಜರ ೩೪೧ನೇ ಆಷಾಢ ಪಾದಯಾತ್ರೆ (ವಾರಿ) ಪಲ್ಲಕ್ಕಿ ಉತ್ಸವವು ಜುಲೈ ೭ ರಂದು ಶ್ರೀ ಕ್ಷೇತ್ರ ದೇಹೂನಿಂದ ಅತ್ಯಂತ ಭಕ್ತಿಮಯ ವಾತಾವರಣದಲ್ಲಿ ಪ್ರಸ್ಥಾನಗೊಂಡಿತು.

ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿಯ ಮೂಲಕ ಮುಖ್ಯಮಂತ್ರಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹ!

‘ಈ ಎಲ್ಲಾ ಹಿನ್ನೆಲೆಯಲ್ಲಿ ಶರದ ಪವಾರ ಅವರು ವೈಕುಂಠಾಗಮನದ ಕುರಿತಾದ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಸಮಸ್ತ ವಾರಕರಿ ಸಂಪ್ರದಾಯ, ವಿಠ್ಠಲ ಭಕ್ತರು ಹಾಗೂ ಹಿಂದೂ ಬಾಂಧವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು’, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

ಆಷಾಢಿ ವಾರಿಯಲ್ಲಿ ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಜಾಗ್ರತೆ ವಹಿಸಿ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ

‘ಡಿಜೆ’ (ದೊಡ್ಡ ಧ್ವನಿಯ ಧ್ವನಿವರ್ಧಕ ವ್ಯವಸ್ಥೆ) ಮುಕ್ತ ವಾರಿ ಮಹೋತ್ಸವಕ್ಕಾಗಿ ಪೊಲೀಸ್ ಆಡಳಿತ ವ್ಯವಸ್ಥೆಯು ಎಲ್ಲರೊಂದಿಗೆ ಚರ್ಚಿಸಿ ಪ್ರಯತ್ನಿಸಬೇಕು. ವಾರಿ ಮಹೋತ್ಸವವನ್ನು ಸಾಂಪ್ರದಾಯಿಕ ಶೈಲಿಯಲ್ಲೇ ಆಚರಿಸಬೇಕೆಂದು ಮುಖ್ಯಮಂತ್ರಿಗಳು ಹೇಳಿದರು.

ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ದೇವತೆಗಳ ಮೂರ್ತಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಧರ್ಮಾಚಾರ್ಯರನ್ನು (ಧರ್ಮಗುರುಗಳನ್ನು) ಕೇಳದೆ ಆಡಳಿತ ಮಂಡಳಿ ಯಾಕೆ ತೆಗೆದುಕೊಳ್ಳುತ್ತದೆ? ಇತರ ಧರ್ಮದವರ ಶ್ರದ್ಧಾಕೇಂದ್ರಗಳ ವಿಷಯದಲ್ಲಿ ಇಂತಹ ಧೋರಣೆ ತೋರುವ ಧೈರ್ಯ ಇವರಿಗಿರುತ್ತಿತ್ತೇ?

ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ

ಪವಿತ್ರ ತೀರ್ಥಕ್ಷೇತ್ರದಲ್ಲಿ ಆಷಾಢಿ ವಾರಿಯ ಹೊಸ್ತಿಲಲ್ಲೇ ನದಿಯ ಈ ರೀತಿಯ ದುಸ್ಥಿತಿಯಾಗುವುದು, ಆಡಳಿತಾತ್ಮಕ ಉದಾಸೀನತೆಯ ಲಕ್ಷಣವಾಗಿದೆ! ಈ ಮಾಲಿನ್ಯಕ್ಕೆ ಕಾರಣರಾದ ಸಂಬಂಧಪಟ್ಟವರ ವಿರುದ್ಧ ಸರಕಾರವು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು!

ವಿವಾದಾತ್ಮಕ ‘ಈಠ್ಠಲಾ’ ನಾಟಕದಲ್ಲಿರುವ ಸಂತರ ಹೆಸರುಗಳು ಮತ್ತು ಆಕ್ಷೇಪಾರ್ಹ ಭಾಗಗಳನ್ನು ಕೈಬಿಡಿ!

ವಾರಕರಿ ಸಂಪ್ರದಾಯ, ಸಂತ ಪರಂಪರೆ ಮತ್ತು ವಿಠ್ಠಲ ಭಕ್ತಿಯನ್ನು ತೀವ್ರವಾಗಿ ನಿಂದಿಸುವ ಹಾಗೂ ವಿಠ್ಠಲ ಭಕ್ತರನ್ನು ಹಿಂಸಾತ್ಮಕವಾಗಿ ತೋರಿಸುವ ‘ಈಠ್ಠಲಾ’ ನಾಟಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ವಾರಕರಿ ಸಂಪ್ರದಾಯದವರು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.

ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!

ಶ್ರೀ ವಿಠ್ಠಲನ ಮೂರ್ತಿಯು ವಾರಕರಿ ಸಂಪ್ರದಾಯಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮೂರ್ತಿಯು ನಿರಂತರವಾಗಿ ಸವೆದುಹೋಗುತ್ತಿರುವ ಕಾರಣ ನೀಡಿ ಮಹಾಪೂಜೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ, ಇದುವರೆಗೆ ಮೂರು ಬಾರಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಮೂರ್ತಿಯ ಸವೆತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು;

ಶರದ್‌ಚಂದ್ರ ಪವಾರ ಬಣದ ವಕ್ತಾರ ವಿಕಾಸ ಲವಾಂಡೆ ಅವರ ಬಂಧನ

ಶರದ್‌ಚಂದ್ರ ಪವಾರ ಬಣದ ವಕ್ತಾರ ವಿಕಾಸ ಲವಾಂಡೆ ಅವರ ವಿರುದ್ಧ ವಾಘೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ಹೆಚ್ಚುವರಿ ಸತ್ರ ನ್ಯಾಯಾಲಯವು ಈ ಹಿಂದೆ ಮೇ ೨೦ ರವರೆಗೆ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಮಹಾರಾಷ್ಟ್ರದ ಪುಣ್ಯಕ್ಷೇತ್ರಗಳ ನದಿಗಳು ಮಾಲಿನ್ಯದ ಸುಳಿಯಲ್ಲಿ !

೨೦೨೫ರ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಸುಮಾರು ೯೦ ಕೋಟಿ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತದೆ. ಇದರಲ್ಲಿ ಶೇ. ೫೦ ಕ್ಕಿಂತ ಹೆಚ್ಚು ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡಲಾಗುತ್ತದೆ.