|
ಮುರ್ಷಿದಾಬಾದ (ಪಶ್ಚಿಮ ಬಂಗಾಳ) – ವಕ್ಫ್ ಸುಧಾರಣಾ ಕಾನೂನಿನ ವಿರುದ್ಧ ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ, ಮುರ್ಷಿದಾಬಾದ್ ನಲ್ಲಿ ಶುಕ್ರವಾರ, ಏಪ್ರಿಲ್ 11 ರಂದು ಮಧ್ಯಾಹ್ನದ ನಮಾಜ್ ನಂತರ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು. ಏಪ್ರಿಲ್ 12 ರವರೆಗೂ ಕೂಡ ಈ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಮತಾಂಧ ಮುಸ್ಲಿಮರು ಅಲ್ಲಿನ ಜಾಫರಾಬಾದ್ ಪ್ರದೇಶದಲ್ಲಿ ಓರ್ವ ಹಿಂದೂ ತಂದೆ ಹಾಗೂ ಮಗನನ್ನು ಕೊಂದರು. ಹರಗೋವಿಂದ ದಾಸ ಮತ್ತು ಚಂದನ ದಾಸ ಕೊಲೆಯಾದವರ ದುರ್ದೈವಿಗಳಾಗಿದ್ದಾರೆ. ಮೃತರು ಹಿಂದೂ ದೇವರ ಮೂರ್ತಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. 3 ದಿನಗಳ ಹಿಂದೆ ಇದೇ ಸ್ಥಳದಲ್ಲಿ ಮುಸ್ಲಿಮರು ದೊಡ್ಡ ಪ್ರತಿಭಟನೆ ನಡೆಸಿ ಹಿಂಸಾಚಾರ ನಡೆಸಿದ್ದರು. ಪೊಲೀಸರ ಮೇಲೆ ದಾಳಿ ಮಾಡಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 115 ಮುಸ್ಲಿಮರನ್ನು ಬಂಧಿಸಿದ್ದಾರೆ.
#MurshidabadViolence :
Violence erupts again during protests by fanatic mobs against the Waqf Amendment Act.Haragobinda Das & his son Chandan Das were stabbed to death in Shamsherganj during the unrest.
📌Severy police personnel injured
📌Mob of 5,000 block the railway tracks… pic.twitter.com/YvqYGEpAtB
— Sanatan Prabhat (@SanatanPrabhat) April 12, 2025
1. ಶುಕ್ರವಾರ ಮಧ್ಯಾಹ್ನ 12 ರಿಂದ 1 ರವರೆಗೆ ಮುರ್ಷಿದಾಬಾದ್‌ನ ಜಂಗೀಪುರ ಮತ್ತು ಸೂಟಿ ಪ್ರದೇಶಗಳಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಮುಸ್ಲಿಮರು ರಾಷ್ಟ್ರೀಯ ಹೆದ್ದಾರಿ 12 ರಲ್ಲಿ ಸರಕಾರಿ ಬಸ್‌ಗಳು ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ಇದರಿಂದ ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳಲು ಮಸೀದಿಗೆ ಹೋಗಿ ಆಶ್ರಯ ಪಡೆಯಬೇಕಾಯಿತು!
2. ಪ್ರತಿಭಟನಾ ನಿರತ ಮುಸ್ಲಿಮರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಹಿಂಸಾಚಾರದಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಸಂಚಾರ ಸ್ಥಗಿತಗೊಂಡಿತು. ಪಶ್ಚಿಮ ರೈಲ್ವೆ ನೀಡಿದ ಮಾಹಿತಿಯ ಪ್ರಕಾರ ಮಧ್ಯಾಹ್ನ 2.46 ಕ್ಕೆ ಅಜಿಮ್‌ಗಂಜ್-ನ್ಯೂ ಫರಕ್ಕಾ ವಿಭಾಗದಲ್ಲಿ ಧುಲಿಯಾನ್‌ಗಂಗಾ ನಿಲ್ದಾಣದ ಬಳಿ ಸುಮಾರು 5 ಸಾವಿರ ಮುಸ್ಲಿಮರು ರೈಲು ಹಳಿಗಳನ್ನು ತಡೆದಿದ್ದರು.
3. ಮುರ್ಷಿದಾಬಾದ್‌ನಿಂದ 10 ಕಿ.ಮೀ ದೂರದಲ್ಲಿರುವ ಶಂಶೇರ್ ಗಂಜ್‌ನಲ್ಲಿ ಸಾವಿರಾರು ಮಾತಾಂಧ ಮುಸ್ಲಿಮರು ಬೆಂಕಿ ಹಚ್ಚಿದರು. ಅಲ್ಲಿನ ಸರಕಾರಿ ಅತಿಥಿ ಗೃಹವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು.
4. ಧುಲಿಯಾನ್ ರೈಲು ನಿಲ್ದಾಣದ ಮೇಲೆ ದಾಳಿ ಮಾಡಿ ಅಲ್ಲಿನ ವಸ್ತುಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅಲ್ಲಿ ಪೊಲೀಸರ ಮೇಲೆ ಬಾಂಬ್ ಎಸೆಯಲಾಯಿತು.
5. ಈ ಹಿಂದೆ ಮುರ್ಷಿದಾಬಾದ್‌ನಲ್ಲಿ ಇಂಟರ್ನೆಟ್ ಕಡಿತಗೋಳಿಸಲಾಗಿತ್ತು. ಈ ಹಿಂಸಾಚಾರದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆ ಸಿಬ್ಬಂದಿಯ ಸಹಾಯ ಪಡೆಯಲಾಗುತ್ತಿದೆ. ಸದ್ಯ ಅಲ್ಲಿ ಶಾಂತಿ ನೆಲೆಸಿದೆ.
6. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರೊಂದಿಗೆ ಚರ್ಚಿಸಿದ್ದಾರೆ. ಮುರ್ಷಿದಾಬಾದ್, ಮಾಲ್ಡಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿನ ಅಶಾಂತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಬೋಸ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಸಂಪಾದಕೀಯ ನಿಲುವು
|
‘ರಾಜ್ಯದಲ್ಲಿ ವಕ್ಫ್ ಕಾನೂನು ಜಾರಿಯಾಗುವುದಿಲ್ಲ, ಶಾಂತವಾಗಿರಿ!’ – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಸ್ಲಿಮರಿಗೆ ಕರೆಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ವಕ್ಫ್ ಕಾನೂನು ಜಾರಿ ಮಾಡುವುದಿಲ್ಲ ಎಂದು ಮುಸ್ಲಿಂ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. ಈ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ, ಆದ್ದರಿಂದ ನಿಮಗೆ ಬೇಕಾದ ಉತ್ತರವನ್ನು ಕೇಂದ್ರ ಸರಕಾರದಿಂದ ಕೇಳಿ, ಶಾಂತವಾಗಿರಿ ಎಂದು ನಾನು ಕರೆ ನೀಡುತ್ತಿದ್ದೇನೆ. ಪ್ರತಿಯೊಬ್ಬರ ಜೀವನವೂ ಅಮೂಲ್ಯವಾಗಿದೆ, ರಾಜಕೀಯಕ್ಕಾಗಿ ಗಲಭೆಗಳನ್ನು ಪ್ರಚೋದಿಸಬೇಡಿ ಎಂದು ಕರೆ ನೀಡಿದರು.
|