Advocate Vishnu Shankar Jain Statement : ನಾವು ‘ವಕ್ಫ್ ಕಾಯ್ದೆ 1995’ ಅನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ!

ನ್ಯಾಯವಾದಿ ವಿಷ್ಣು ಶಂಕರ ಜೈನ ಅವರ ಘೋಷಣೆ

ನ್ಯಾಯವಾದಿ ವಿಷ್ಣು ಶಂಕರ ಜೈನ್

ಛಿಂದವಾಡಾ (ಮಧ್ಯಪ್ರದೇಶ) – ವಕ್ಫ್ ಮಂಡಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯು ಮುಂಬರುವ ಏಪ್ರಿಲ್ 16 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ, ಅದರಲ್ಲಿ ನಾವು ಸಹ ಭಾಗವಹಿಸುತ್ತೇವೆ. ವಕ್ಫ್ ಮಂಡಳಿಗೆ ಇನ್ನೂ ಕೆಲವು ಅನಿಯಂತ್ರಿತ ಅಧಿಕಾರಗಳಿವೆ ಮತ್ತು ಕೆಲವು ನಿಬಂಧನೆಗಳು ಇನ್ನೂ ಸಂವಿಧಾನ ವಿರೋಧಿಯಾಗಿವೆ. ಈ ಸಂಬಂಧ ನಾವು ‘ವಕ್ಫ್ ಕಾಯ್ದೆ 1995’ ಅನ್ನು ಪ್ರಶ್ನಿಸಲಿದ್ದೇವೆ ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ವಿಷ್ಣು ಶಂಕರ ಜೈನ ಅವರು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ನ್ಯಾಯವಾದಿ ಜೈನ ಅವರು ಮಾತು ಮುಂದುವರೆಸಿ, ನಾವು ವಕ್ಫ್ ಸುಧಾರಣಾ ಕಾಯ್ದೆ 2025 ರ ಅನೇಕ ನಿಬಂಧನೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಇದು ಬಹಳ ಉತ್ತಮ ಮತ್ತು ಪರಿಣಾಮಕಾರಿ ಕಾನೂನು ಆಗಿದೆ. ಇನ್ನೂ ಸುಧಾರಣೆ ಅಗತ್ಯವಿರುವ ನಿಬಂಧನೆಗಳ ಕಡೆಗೆ ನಾವು ಸರ್ವೋಚ್ಚ ನ್ಯಾಯಾಲಯದ ಗಮನ ಸೆಳೆಯುತ್ತೇವೆ ಎಂದರು.

ವಕ್ಫ್ ಕಾನೂನಿನಲ್ಲಿನ ಸುಧಾರಣೆಗಳ ಲಾಭಗಳನ್ನು ತಿಳಿಸಲು ಭಾಜಪ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ

ವಕ್ಫ್ ಸುಧಾರಣಾ ಕಾಯ್ದೆಯ ವಿರುದ್ಧ ದೇಶದಲ್ಲಿ ಮುಸ್ಲಿಂ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಅದೇ ಸಮಯದಲ್ಲಿ, ಭಾಜಪ ಈ ಕಾನೂನಿನ ಲಾಭಗಳನ್ನು ತಿಳಿಸಲು ಮತ್ತು ವಿರೋಧಿಗಳ ಟೀಕೆಗಳನ್ನು ಎದುರಿಸಲು ಏಪ್ರಿಲ್ 20 ರಿಂದ ಹದಿನೈದು ದಿನಗಳ ಕಾಲ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಶೇಷವಾಗಿ ಮುಸ್ಲಿಮರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು.

ಸಂಪಾದಕೀಯ ನಿಲುವು

ಸರಕಾರ ಮಾಡಬೇಕಾದ ಕೆಲಸವನ್ನು ಹಿಂದುತ್ವನಿಷ್ಠ ನ್ಯಾಯವಾದಿಗಳು ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿದೆ. ವಕ್ಫ್ ಕಾಯ್ದೆಯಲ್ಲಿ ಸುಧಾರಣೆಗಳನ್ನು ತಂದು ವಕ್ಫ್ ಮಂಡಳಿಯ ಮನಸ್ಸಿಗೆ ಬಂದಂತೆ ವರ್ತಿಸುವುದಕ್ಕೆ ಕಡಿವಾಣ ಹಾಕುವುದು ಸಾಕಾಗುವುದಿಲ್ಲ, ಆದರೆ ಈ ಕಾನೂನನ್ನು ರದ್ದುಪಡಿಸುವುದು ಸೂಕ್ತ ಪರಿಹಾರವಾಗಿದೆ!