Union Minister Piyush Goyal Statement : ನಾವು ಬಂದೂಕಿನ ಬಲದ ಮೇಲೆ ವ್ಯವಹಾರ ಮಾಡುವುದಿಲ್ಲ! – ಕೇಂದ್ರ ಸಚಿವ ಪಿಯೂಷ್ ಗೋಯಲ್

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಂದ ಅಮೆರಿಕದ ಆಮದು ಸುಂಕದ ಕುರಿತು ಹೇಳಿಕೆ

ನವದೆಹಲಿ – ಭಾರತವು ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಾವು ಬಂದೂಕಿನ ಬಲದ ಮೇಲೆ ವ್ಯವಹಾರ ಮಾಡುವುದಿಲ್ಲ. ನಮಗೆ ಸೂಕ್ತ ಸಮಯ ಸಿಕ್ಕಾಗ ಮಾತ್ರ ನಾವು ಸಂಭಾಷಣೆಗೆ ಮುಂದೆ ಹೋಗುತ್ತೇವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದ ಆಮದು ಸುಂಕದ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ಪರಿಸ್ಥಿತಿ ನಮ್ಮ ಪರವಾಗಿದ್ದಾಗ ಮಾತ್ರ ಭಾರತವು ವ್ಯಾಪಾರದ ಕುರಿತು ಮಾತುಕತೆ ನಡೆಸುತ್ತದೆ’ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅವರು ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಇಟಲಿ-ಭಾರತ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ’ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.

ಪಿಯೂಷ್ ಗೋಯಲ್ ಮಾತುಮುಂದುವರೆಸಿ, ಭಾರತವು ಅಮೆರಿಕ, ಬ್ರಿಟನ್, ಯುರೋಪಿಯನ್ ಒಕ್ಕೂಟ ಮತ್ತು ವಿಶ್ವದ ಇತರ ಅನೇಕ ದೇಶಗಳೊಂದಿಗೆ ವ್ಯಾಪಾರ ಚರ್ಚೆಗಳನ್ನು ನಡೆಸುತ್ತಿದೆ. ಈ ಎಲ್ಲಾ ಚರ್ಚೆಗಳು ‘ಭಾರತ ಮೊದಲು’ ಎಂಬ ಭಾವನೆಯಿಂದ ನಡೆಯುತ್ತಿವೆ ಮತ್ತು ಈ ಪ್ರಕ್ರಿಯೆಯು ೨೦೪೭ ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಹಾಯಕವಾಗಲಿದೆ ಎಂದರು.