ಕಣ್ಣೂರು (ಕೇರಳ): ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಲಾಕ್ ಡೌನ್ ಇದ್ದಾಗ 14 ವರ್ಷದ ಬಾಲಕಿಯ ಮೇಲೆ ಸತತ 2 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 41 ವರ್ಷದ ಮದರಸಾ ಶಿಕ್ಷಕ ಮೊಹಮ್ಮದ್ ರಫಿಗೆ ತಳಿಪರಂಬ ತ್ವರಿತ ವಿಶೇಷ ನ್ಯಾಯಾಲಯವು 187 ವರ್ಷಗಳ ಜೈಲು ಶಿಕ್ಷೆ ಮತ್ತು 9 ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಾಧೀಶ ಆರ್. ರಾಜೇಶ್ ಅವರು ಈ ತೀರ್ಪು ನೀಡಿದರು. (ತ್ವರಿತ ವಿಶೇಷ ನ್ಯಾಯಾಲಯವು ದೂರು ದಾಖಲಾದ 5 ವರ್ಷಗಳ ನಂತರ ತೀರ್ಪು ನೀಡಿರುವುದು, ಇದು ಸಂತ್ರಸ್ತ ಬಾಲಕಿಗೆ ಒಂದು ರೀತಿಯ ಅನ್ಯಾಯ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನು? – ಸಂಪಾದಕರು)
🚨 Kerala: Madarsa teacher gets 187 years in jail for repeatedly assaulting a minor girl during the COVID-19 lockdown
Court also slaps a ₹9 lakh fine
Calls for Shariah-style punishment for such predators shouldn’t come as a surprise!#ChildAbuse #ProtectChildren #POCSO
VC:… pic.twitter.com/arTA8eneIy— Sanatan Prabhat (@SanatanPrabhat) April 11, 2025
ಮೊಹಮ್ಮದ್ ರಫಿ ಮಾರ್ಚ್ 2020 ರಲ್ಲಿ ಸಂತ್ರಸ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಾರಂಭಿಸಿದನು. ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದನು. ಬಾಲಕಿ ಒತ್ತಡದಲ್ಲಿರುವುದು ಕಂಡುಬಂದಾಗ ಪೋಷಕರು ಆಕೆಯನ್ನು ಸಮಾಲೋಚನಾ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಆಕೆ ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದಳು. ನಂತರ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ಪಳಯಂಗಡಿ ಸದ್ಯ ಪೊಲೀಸರು ಮೊಹಮ್ಮದ್ ರಫಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮುಕನಿಗೆ ಶರಿಯತ್ ಪ್ರಕಾರ ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ ! |